ಗಲ್ಲು ಜಾರಿ ತಡೆಗೆ ಹೊಸ ನಾಟಕ ; ಜೈಲಲ್ಲಿ ಲೈಂಗಿಕ ಕಿರುಕುಳ ಎಂದು ಆರೋಪ
Team Udayavani, Jan 29, 2020, 6:49 AM IST
ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರ – ಕೊಲೆ ಪ್ರಕರಣದ ಅಪರಾಧಿಗಳು ಮರಣದಂಡನೆ ಜಾರಿಯನ್ನು ವಿಳಂಬ ಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆರೋಪಿಗಳಲ್ಲಿ ಒಬ್ಬನಾಗಿರುವ ಮುಕೇಶ್ ಸಿಂಗ್ “ತಿಹಾರ್ ಜೈಲಲ್ಲಿ ನನಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ’ ಎಂಬ ಹೊಸ ನಾಟಕವಾಡಲು ಶುರು ಮಾಡಿ, “ನನ್ನನ್ನು ಒಬ್ಬನನ್ನೇ ಪ್ರತ್ಯೇಕವಾಗಿ ಇರಿಸಲಾಗಿದೆ. ನನ್ನ ವಿಚಾರದಲ್ಲಿ ಇನ್ನಿತರ ನಿಯಮ ಉಲ್ಲಂಘನೆಗಳು ಜೈಲಧಿಕಾರಿಗಳಿಂದ ನಡೆದಿವೆ’ ಎಂದು ನ್ಯಾ| ಆರ್. ಭಾನುಮತಿ ನೇತೃತ್ವದ ನ್ಯಾಯಪೀಠದ ಮುಂದೆ ಅರ್ಜಿ ಸಲ್ಲಿಸಿದ್ದಾನೆ.
ರಾಷ್ಟ್ರಪತಿಗಳಿಗೆ ಎಲ್ಲ ದಾಖಲೆಗಳನ್ನು ಕಳುಹಿಸಲಾಗಿಲ್ಲ. ನೀವು ಮತ್ತೂಬ್ಬರ ಜೀವದ ಜತೆಗೆ ಆಟವಾಡುತ್ತಿದ್ದೀರಿ. ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಆತನ ಪರ ನ್ಯಾಯವಾದಿ ಅಂಜನಾ ಪ್ರಕಾಶ್ ಕೋರ್ಟ್‌ನಲ್ಲಿ ಆರೋಪಿಸಿದ್ದಾರೆ.
“ರಾಷ್ಟ್ರಪತಿಗಳ ಮುಂದೆ ಎಲ್ಲ ದಾಖಲೆಗಳನ್ನು ಮುಂದಿಡಲಾಗಿಲ್ಲ ಎಂದು ಯಾವ ಆಧಾರದಲ್ಲಿ ಹೇಳುತ್ತೀರಿ’ ಎಂದು ನ್ಯಾಯ ಪೀಠ ಪ್ರಶ್ನೆ ಮಾಡಿತು. ಅದಕ್ಕೆ ಉತ್ತರಿಸಿದ ಅಂಜನಾ ಪ್ರಕಾಶ್, ‘ಮುಕೇಶ್ ಸಿಂಗ್‌ಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಕ್ಷಮಾದಾನ ಅರ್ಜಿ ತಿರಸ್ಕೃತಗೊಳ್ಳುವ ಮೊದಲೇ ಆತನನ್ನು ಪ್ರತ್ಯೇಕವಾಗಿ ಬಂಧಿಸಿ ಇರಿಸಲಾಗಿತ್ತು’ ಎಂದರು.
ಅರ್ಜಿಗಳನ್ನು ರದ್ದುಗೊಳಿಸಿ: ಮುಕೇಶ್ ಸಿಂಗ್ ಪರ ವಕೀಲರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ದಿಲ್ಲಿ ಪೊಲೀಸ್ ಇಲಾಖೆ ಪರ ವಕೀಲ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಜೈಲಿನಲ್ಲಿ ಅನುಚಿತವಾಗಿ ನಡೆಸಿಕೊಳ್ಳಲಾಗಿದೆ ಎಂಬ ಕಾರಣ, ಕ್ಷಮೆಗೆ ದಾರಿಯಾಗಬಾರದು. ಜತೆಗೆ ಮುಕೇಶ್ ಸಿಂಗ್ ಬಗ್ಗೆ ಇರುವ ಎಲ್ಲ ದಾಖಲೆಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗಿತ್ತು.
ಪ್ರಕರಣದಲ್ಲಿ ಕ್ಷಮಾದಾನ ನೀಡಬಹುದೇ ಎಂಬ ವಿಚಾರವು ರಾಷ್ಟ್ರಪತಿಗೆ ಕಾನೂನಾತ್ಮಕವಾಗಿ ಸಹಮತವಾಗುವಂತೆ ಇರಬೇಕು. ಹೀಗಾಗಿ, ಇಂಥ ಅರ್ಜಿಗಳನ್ನು ತಿರಸ್ಕರಿಸಬೇಕು ಎಂದು ಸಾಲಿಸಿಟರ್ ಜನರಲ್ ಮನವಿ ಮಾಡಿಕೊಂಡರು. ಕೊನೆಗೆ ಅರ್ಜಿ ಕುರಿತ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರಕ್ಕೆ ಕಾಯ್ದಿರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.