ಲಾಸ್ಟ್ ಅಟೆಂಪ್ಟ್: ತಡರಾತ್ರಿ ಸುಪ್ರೀಂ ಕೋರ್ಟ್ ಕದತಟ್ಟಿದ ನಿರ್ಭಯಾ ಹಂತಕರು!
Team Udayavani, Mar 20, 2020, 2:23 AM IST
ನವದೆಹಲಿ: ಇಲ್ಲ, ಇದು ಯಾಕೋ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ನಿರ್ಭಯಾ ಹಂತಕರು ತಾವು ಶುಕ್ರವಾರ ಮುಂಜಾನೆ ನೇಣು ಗಂಬಕ್ಕೇರುವುದನ್ನು ತಪ್ಪಿಸಿಕೊಳ್ಳಲು ಗುರುವಾರ ಪೂರ್ತಿ ನ್ಯಾಯಾಲಯದ ಮೊರೆ ಹೋದರು.
ಗುರುವಾರ ಬೆಳಿಗ್ಗೆ ನಾಲ್ವರು ಅಪರಾಧಿಗಳಲ್ಲಿ ಮೂವರು ಸುಪ್ರೀಂ ಕೋರ್ಟ್ ಕದ ತಟ್ಟಿ ತಮ್ಮ ಗಲ್ಲು ಶಿಕ್ಷೆಗೆ ತಡೆ ತರಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಆ ಬಳಿಕ ನಾಲ್ವರೂ ಅಪರಾಧಿಗಳ ಪರ ಅವರ ವಕೀಲರು ದೆಹಲಿ ಹೈಕೋರ್ಟಿನಲ್ಲಿ ಹೊಸ ಮನವಿ ಅರ್ಜಿಯನ್ನು ಸಲ್ಲಿಸಿ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಕೋರಿಕೊಂಡರು. ಆದರೆ ಅಲ್ಲಿಯೂ ನಿರ್ಭಯಾ ಹಂತಕರ ಮನವಿಗೆ ಪುರಸ್ಕಾರ ಲಭಿಸಲಿಲ್ಲ.
ಇತ್ತ ತಿಹಾರ್ ಜೈಲಿನಲ್ಲಿ ಹಂತಕರನ್ನು ನೇಣುಗಂಬಕ್ಕೇರಿಸಲು ಕೊನೇ ಕ್ಷಣದ ಸಿದ್ಧತೆಗಳು ನಡೆಯುತ್ತಿರುವಂತೆ ಅವರ ಪರ ವಕೀಲರಾದ ಎ.ಪಿ.ಸಿಂಗ್ ಅವರು ದೆಹಲಿ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದರು.
AP Singh, advocate of 2012 Delhi gang-rape convicts: We are seeking urgent hearing & stay on death warrant. We are filing the petition in the Supreme Court, the court is open and working. https://t.co/WHjeNAVfT9 pic.twitter.com/Ezk8saMQs9
— ANI (@ANI) March 19, 2020
ಬಳಿಕ 1.00 ಗಂಟೆ ಸುಮಾರಿಗೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಮನೆಗೆ ತೆರಳಿದ ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್ ಅವರ ಮನೆಗೆ ತೆರಳಿ ತುರ್ತು ವಿಚಾರಣೆಗೆ ಮನವಿಯನ್ನು ಸಲ್ಲಿಸಿದರು.
ಬಳಿಕ ಎ.ಪಿ. ಸಿಂಗ್ ಅವರು ಪವನ್ ಗುಪ್ತಾನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಹೊಸ ಅರ್ಜಿಯನ್ನು ಸಲ್ಲಿಸಿದರು. ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಸರ್ವೋಚ್ಛ ನ್ಯಾಯಾಲಯವು ಇದರ ವಿಚಾರಣೆಯನ್ನು ಇದೀಗ 2.30 ಗಂಟೆಗೆ ಪ್ರಾರಂಭಿಸುವ ನಿರೀಕ್ಷೆ ಇದೆ. ನಿರ್ಭಯಾ ಹೆತ್ತವರು ಇದೀಗ ಸುಪ್ರೀಂ ಕೋರ್ಟ್ ಗೆ ಆಗಮಿಸಿದ್ದಾರೆ.
ನ್ಯಾಯಮೂರ್ತಿ ಭೂಷಣ್ ಹಾಗೂ ನ್ಯಾಯಮೂರ್ತಿ ಬೋಪಣ್ಣ ಅವರಿದ್ದ ತ್ರಿಸದಸ್ಯ ಪೀಠ ಈ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದೆ.
Solicitor General Tushar Mehta arrives at Supreme Court. SC will shortly hear the petition by four 2012 Delhi gang-rape case death row convicts, seeking stay on their execution. https://t.co/nCc6whzp6Z pic.twitter.com/qvGBLjr1fG
— ANI (@ANI) March 19, 2020
Delhi: Parents of 2012 gang-rape victim arrive at Supreme Court. SC will shortly hear the petition by four death row convicts, seeking stay on their execution. https://t.co/nCc6whzp6Z pic.twitter.com/Lj7h2GVvSr
— ANI (@ANI) March 19, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.