ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಐಐಎಸ್‌ಸಿಗೆ 2ನೇ ಸ್ಥಾನ
ಮಣಿಪಾಲ ಸಮೂಹದ 5 ಸಂಸ್ಥೆಗಳಿಗೆ 20ರೊಳಗಿನ ಸ್ಥಾನ
Team Udayavani, Apr 9, 2019, 6:00 AM IST
ಹೊಸದಿಲ್ಲಿ: ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ್‍ಯಾಂಕಿಂಗ್ ಫ್ರೆಮ್‌ವರ್ಕ್ (ಎನ್‌ಐಆರ್‌ಎಫ್) ಅನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ ಶಿಕ್ಷಣ ಸಂಸ್ಥೆಗಳು ಸಿಂಹಪಾಲು ಪಡೆಯುವಲ್ಲಿ ಯಶಸ್ವಿಯಾಗಿವೆ. ಉನ್ನತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ರ್‍ಯಾಂಕಿಂಗ್‌ನಲ್ಲಿ ಐಐಟಿ ಮದ್ರಾಸ್‌ಗೆ ಮೊದಲ ಸ್ಥಾನ ದೊರೆತರೆ, ಬೆಂಗಳೂರು ಐಐಎಸ್‌ಸಿ ಎರಡನೇ ಸ್ಥಾನ ಪಡೆದು ಕೊಂಡಿದೆ. ವಿಶ್ವವಿದ್ಯಾಲಯಗಳು, ಕಾಲೇಜುಗಳು, ವೈದ್ಯಕೀಯ, ಕಾನೂನು, ಎಂಜಿನಿಯರಿಂಗ್, ಫಾರ್ಮಸಿ ಸೇರಿದಂತೆ ಒಟ್ಟು 9 ವಿಭಾಗಗಳಲ್ಲಿ ರ್‍ಯಾಂಕಿಂಗ್ ನೀಡಲಾಗಿದೆ.
ಅತ್ಯುತ್ತಮ ವಿವಿಗಳ ಪಟ್ಟಿಯಲ್ಲಿ ಐಐಎಸ್‌ಸಿ ಮೊದಲ ಸ್ಥಾನ ಪಡೆದಿದ್ದು, ಈ ಪಟ್ಟಿಯಲ್ಲಿ ಕರ್ನಾಟಕದ 10 ಸಂಸ್ಥೆಗಳು ಇವೆ. ಎಂಜಿನಿಯ ರಿಂಗ್ ವಿಭಾಗದಲ್ಲಿ ರಾಜ್ಯದ 23, ಮ್ಯಾನೇಮೆಂಟ್ ವಿಭಾಗದಲ್ಲಿ 3, ಫಾರ್ಮಸಿಯಲ್ಲಿ 6 ಹಾಗೂ ವೈದ್ಯಕೀಯ ವಿಭಾಗದಲ್ಲಿ 5 ಹಾಗೂ ಕಾಲೇಜು, ಕಾನೂನು, ವಾಸ್ತುಶಿಲ್ಪ ವಿಭಾಗಗಳಲ್ಲಿ ತಲಾ 1 ಸಂಸ್ಥೆಗಳು ಸ್ಥಾನ ಪಡೆದಿವೆ. ಟಾಪ್ 10 ಸಂಸ್ಥೆಗಳ ಪೈಕಿ 7 ಸ್ಥಾನಗಳು ಐಐಟಿಗಳ ಪಾಲಾಗಿವೆ. ದಿಲ್ಲಿಯ ಜೆಎನ್‌ಯು, ಬಿಎಚ್‌ಯು ವಿವಿಗಳು ಕ್ರಮವಾಗಿ 7 ಹಾಗೂ 10ನೇ ಸ್ಥಾನ ಪಡೆದಿವೆ.
ವಿಶ್ವವಿದ್ಯಾಲಯಗಳು ರ್‍ಯಾಂಕ್
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, 1
ಬೆಂಗಳೂರು
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್,
ಮಣಿಪಾಲ 9
ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್
ಆ್ಯಂಡ್ ರಿಸರ್ಚ್, ಮೈಸೂರು 34
ಮೈಸೂರು ವಿವಿ, ಮೈಸೂರು 54
ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್
ಆ್ಯಂಡ್ ರಿಸರ್ಚ್, ಬೆಳಗಾವಿ 69
ನಿಟ್ಟೆ ವಿವಿ, ಮಂಗಳೂರು 70
ಕುವೆಂಪು ವಿವಿ, ಶಿವಮೊಗ್ಗ 73
ಕೃಷಿ ವಿಜ್ಞಾನ ವಿವಿ, ಧಾರವಾಡ 83
ಮಂಗಳೂರು ವಿವಿ, ಮಂಗಳಗಂಗೋತ್ರಿ 87
ಯೆನಪೋಯ, ಮಂಗಳೂರು 95
ವೈದ್ಯಕೀಯ
ಕಾಲೇಜು ರ್‍ಯಾಂಕ್
ಕಸ್ತೂರ್‌ಬಾ ಮೆಡಿಕಲ್ ಕಾಲೇಜು, ಮಣಿಪಾಲ 7
ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಬೆಂಗಳೂರು 12
ಕಸ್ತೂರ್‌ಬಾ ಮೆಡಿಕಲ್ ಕಾಲೇಜು, ಮಂಗಳೂರು 16
ಜೆಎಸ್‌ಎಸ್ ಮೆಡಿಕಲ್ ಕಾಲೇಜು, ಮೈಸೂರು 17
ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜು, ಬೆಂಗಳೂರು 27
ಫಾರ್ಮಸಿ
ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್,
ಮಣಿಪಾಲ 7
ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿ, ಮೈಸೂರು 20
ಕೆಎಲ್‌ಇ ಕಾಲೇಜು, ಬೆಳಗಾವಿ 22
ಎನ್.ಜಿ.ಎಸ್.ಎಂ. ಇನ್‌ಸ್ಟಿಟ್ಯೂಟ್, ಮಂಗಳೂರು 33
ಆಚಾರ್ಯ ಆ್ಯಂಡ್ ಬಿಎಂ ರೆಡ್ಡಿ ಕಾಲೇಜು, ಬೆಂಗಳೂರು 71
ಅಲ್-ಅಮೀನ್ ಕಾಲೇಜು, ಬೆಂಗಳೂರು 75
ಒಟ್ಟಾರೆ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು 2
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್,
ಮಣಿಪಾಲ 16
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸುರತ್ಕಲ್ 53
ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಮೈಸೂರು 55
ಮೈಸೂರು ವಿವಿ, ಮೈಸೂರು 80
ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್
ಆ್ಯಂಡ್ ರಿಸರ್ಚ್, ಬೆಳಗಾವಿ 98
ನಿಟ್ಟೆ, ಮಂಗಳೂರು 99
ಕಾಲೇಜು: ಸೈಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್, ಬೆಂಗಳೂರು (61)
ಕಾನೂನು: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ, ಬೆಂಗಳೂರು (1)
ವಾಸ್ತುಶಿಲ್ಪ: ಬಿಎಂಎಸ್ ಕಾಲೇಜ್ ಆಫ್ ಆರ್ಕಿಟೆಕ್ಚರ್, ಬೆಂಗಳೂರು (15)
ಎಂಜಿನಿಯರಿಂಗ್ ಕಾಲೇಜುಗಳು
ಎನ್‌ಐಟಿಕೆ ಸುರತ್ಕಲ್ (21),
ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(43), ಆರ್‌ವಿ ಕಾಲೇಜು ಬೆಂಗಳೂರು(63), ಎಂ.ಎಸ್.ರಾಮಯ್ಯ ಇನ್‌ಸ್ಟಿಟ್ಯೂಟ್(64), ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಟೆಕ್ನಾಲಜಿ(65), ಬಿಎಂಎಸ್ ಕಾಲೇಜು(69), ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(79), ನ್ಯೂಹಾರಿಜನ್(106), ಜೈನ್ ವಿವಿ(115), ಶ್ರೀ ಜಯಚಾಮ ರಾಜೇಂದ್ರ ಕಾಲೇಜು(120), ದಯಾನಂದ ಸಾಗರ ಕಾಲೇಜು(127), ಎನ್.ಎಂ.ಎ.ಎಂ.(128), ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (142), ಪಿಇಎಸ್ ವಿವಿ(149), ಬಿಎನ್‌ಎಂ (156), ಬಿಎಂಎಸ್(157), ಕೆಎಲ್‌ಇ ಟೆಕ್ನಾಲ ಜಿಕಲ್ ವಿವಿ(159), ಪಿಇಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್(161), ಡಾ.ಅಂಬೇಡ್ಕರ್ ಇನ್‌ಸ್ಟಿಟ್ಯೂಟ್(163), ಸಿಎಂಆರ್ ಇನ್‌ಸ್ಟಿಟ್ಯೂಟ್(174), ದಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್(178), ಅಲಯನ್ಸ್ ವಿವಿ(186), ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು(191).
ಮ್ಯಾನೇಜ್‌ಮೆಂಟ್
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಬೆಂಗಳೂರು (1)
ಟಿ.ಎ. ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್, ಮಣಿಪಾಲ (33)
ಅಲಯನ್ಸ್ ವಿವಿ, ಬೆಂಗಳೂರು (42)
ಶಾಲಾ ಮಟ್ಟದ ಪರೀಕ್ಷೆಗಳಲ್ಲಿ ಬಾಲಕಿ ಯರೇ ಮೇಲುಗೈ ಸಾಧಿಸುತ್ತಿರುವಾಗ, ಉನ್ನತ ಶಿಕ್ಷಣದಲ್ಲೂ ಅವರು ಸಾಮರ್ಥ್ಯ ಪ್ರದರ್ಶಿಸುತ್ತಾರೆಂಬ ನಂಬಿಕೆ ನನಗಿದೆ. ಆದರೆ, ಹಲವರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಯತ್ತ ನಾವು ಹೆಜ್ಜೆಯಿಡಬೇಕು.
ರಾಮನಾಥ್ ಕೋವಿಂದ್, ರಾಷ್ಟ್ರಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.