ಆರ್ಥಿಕ ಚೇತರಿಕೆ ನಿರ್ಮಲಾ ಚಿಕಿತ್ಸೆ


Team Udayavani, Aug 24, 2019, 5:03 AM IST

arthika

ನವದೆಹಲಿ: ಅಮೆರಿಕ ಮತ್ತು ಚೀನಾದ ಟ್ಯಾರಿಫ್ ಸಮರದ ನಡುವೆಯೇ, ಕುಸಿಯುತ್ತಿರುವ ಆರ್ಥಿಕತೆಗೆ ಉತ್ತೇ ಜನ ನೀಡಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮುಂದಾಗಿದ್ದಾರೆ. ಅದರಲ್ಲೂ ವಿದೇಶಿ ಹೂಡಿಕೆ, ಆಟೋ ಮತ್ತು ರಿಯಾಲ್ಟಿ ವಲಯದಲ್ಲಿನ ಕುಸಿತ ವನ್ನೇ ಗಣನೆಗೆ ತೆಗೆದುಕೊಂಡಿರುವ ಅವರು, ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಸಿರಿವಂತರ ಮೇಲಿನ ಮತ್ತು ವಿದೇಶಿ ಹೂಡಿಕೆದಾರರ ಮೇಲಿನ ತೆರಿಗೆಗಳ ರದ್ದು, ಹೊಸ ವಾಹನಗಳ ಖರೀದಿಗೂ ಅವಕಾಶ ಮಾಡಿಕೊಟ್ಟಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 70 ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದ್ದು, ಇದರಿಂದ ಹೊಸ ಸಾಲ ಸೃಷ್ಟಿಯಾಗಲು ಅವಕಾಶ ಹೆಚ್ಚಲಿದೆ. ಈ ಮೂಲಕ ಆಟೋ, ರಿಯಾಲ್ಟಿ ಮತ್ತಿತರ ರಿಟೇಲ್‌ ವಲಯದ ಸಾಲದ ಬೇಡಿಕೆ ಪ್ರಮಾಣ ಕುಗ್ಗಲಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಆಟೋ ವಲಯ: ದೇಶದಲ್ಲಿ ಸದ್ಯ ಆತಂಕಕ್ಕೆ ಸಿಲುಕಿರುವ ವಲಯವಾಗಿರುವ ಆಟೋಮೊಬೈಲ್‌ ಅನ್ನು ಪ್ರಮುಖ ವಾಗಿ ಪರಿಗಣಿಸಿರುವ ನಿರ್ಮಲಾ, ಹೊಸ ವಾಹನಗಳ ಖರೀದಿಗೆ ಪ್ರೋತ್ಸಾಹದಾಯಕ ಕ್ರಮಕ್ಕೆ ಮುಂದಾಗಿದ್ದಾರೆ. ಸರ್ಕಾರಿ ಇಲಾಖೆಗಳಿಗೆ ಹೊಸ ವಾಹನಗಳ ಖರೀದಿ ಮೇಲೆ ಇದ್ದ ನಿರ್ಬಂಧ ತೆಗೆದು ಹಾಕಲು ನಿರ್ಧರಿಸಲಾಗಿದ್ದು, ಈ ಮೂಲಕ ಹೆಚ್ಚಿನ ವಾಹನಗಳ ಖರೀದಿಗೆ ಅವಕಾಶ ಮಾಡಿಕೊಡಲಾ ಗಿದೆ. ಇದರ ಜತೆಯಲ್ಲೇ ಬಿಎಸ್‌ 4 ಮಾಲಿನ್ಯ ಗುಣ ಮಟ್ಟದ ವಾಹನಗಳನ್ನು 2020ರ ಮಾರ್ಚ್‌ ವರೆಗೂ ಖರೀದಿ ಮಾಡಲು ಅವಕಾಶ ನೀಡಲಾಗಿದೆ.

ಅಲ್ಲದೆ ಇವು ಗಳನ್ನು ತಮ್ಮ ನೋಂದಣಿ ಅವಧಿ ಮುಗಿವವರೆಗೂ ಬಳಕೆ ಮಾಡಲೂ ಅನುವು ನೀಡಲಾಗಿದೆ. ವಾಹನಗಳ ನೋಂದಣಿ ಶುಲ್ಕ ಏರಿಕೆ ನಿರ್ಧಾರ ವಾಪಸ್‌ ಪಡೆದು, 2020ರ ಜೂನ್‌ ಬಳಿಕ ಪರಿಶೀಲನೆ ಮಾಡುವ ಮಾತು ಗಳನ್ನಾಡಿದ್ದಾರೆ. 600 ರೂ. ಇದ್ದ ನೋಂದಣಿ ಶುಲ್ಕವನ್ನು 6000 ರೂ.ಗೆ ಏರಿಕೆ ಮಾಡಲು ಪ್ರಸ್ತಾಪ ಮಾಡ ಲಾಗಿ ತ್ತು. ಜತೆಗೆ ಎಲೆಕ್ಟ್ರಿಕ್‌ ವಾಹನ ಮತ್ತು ಸಾಮಾನ್ಯ ವಾಹನಗಳ ಖರೀದಿ ಪ್ರಕ್ರಿಯೆ ಹಾಗೆಯೇ ಮುಂದು ವರಿಯ ಲಿದೆ ಎಂದೂ ಹೇಳಿದ್ದಾರೆ.

ರಿಯಾಲ್ಟಿ ವಲಯ: ಗೃಹ ನಿರ್ಮಾಣ ವಲ ಯದ ಮೇಲೂ ದೃಷ್ಟಿ ಹರಿಸಿದ್ದಾರೆ ನಿರ್ಮಲಾ. ರಿಯಾಲ್ಟಿ ವಲಯದಲ್ಲಿನ ಪ್ರಮುಖ ಸಮಸ್ಯೆಯೇ ಗೃಹ ಸಾಲಕ್ಕೆ ಸಂಬಂಧಿಸಿದ್ದಾಗಿತ್ತು. ಈ ವರ್ಷ ವೊಂದ ರಲ್ಲೇ ಆರ್‌ಬಿಐ 110 ಮೂಲಾಂಶ ಗಳಷ್ಟು ರೆಪೋ ದರ ಇಳಿಕೆ ಮಾಡಿದ್ದರೂ, ಬಹುತೇಕ ಬ್ಯಾಂಕುಗಳು ಈ ಸೌಲಭ್ಯ ವನ್ನು ಗ್ರಾಹಕರಿಗೆ ತಲುಪಿಸಿಲ್ಲ. ಇನ್ನು ರೆಪೋ ದರ ಆಧರಿತ ಗೃಹ ಸಾಲವನ್ನು ಎಸ್‌ಬಿಐ ಪರಿಚಯಿಸಿದ್ದು, ಇದನ್ನು ಉಳಿದ ಬ್ಯಾಂಕುಗಳೂ ಸದ್ಯ ದಲ್ಲೇ ಅಳವಡಿಸಿಕೊಳ್ಳಲಿವೆ.

ಅಲ್ಲದೆ, ಆರ್‌ಬಿಐ ಇಳಿಕೆ ಮಾಡಿರುವ ರೆಪೋ ದರದ ಸೌಲಭ್ಯವನ್ನು ಗ್ರಾಹಕರಿಗೆ ವರ್ಗಾಯಿಸಲು ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದ್ದು, ಅವು ಒಪ್ಪಿವೆ ಎಂದೂ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಹೀಗಾಗಿ ರೆಪೋ ದರಕ್ಕೆ ಹೊಂದಿಕೊಂಡಿರುವ ಗೃಹ ಮತ್ತು ವಾಹನ ಮೇಲಿನ ಸಾಲದ ಬಡ್ಡಿದರವು ಕಡಿಮೆಯಾಗುವುದರಿಂದ ಇಎಂಐ ಕೂಡ ಕಡಿಮೆಯಾಗಲಿದೆ ಎಂದಿದ್ದಾರೆ. ಸಾಲ ಮುಗಿದ 15 ದಿನಗಳಲ್ಲಿ ಬ್ಯಾಂಕ್‌ನಿಂದ ದಾಖಲೆ ವಾಪಸ್‌ ನೀಡಲಾಗುವುದು ಮತ್ತು ಸಾಲ ಅರ್ಜಿಗಳ ಆನ್‌ಲೈನ್‌ ಟ್ರ್ಯಾಕಿಂಗ್‌ ಸೌಲಭ್ಯವನ್ನೂ ಕಲ್ಪಿಸಲು ನಿರ್ಧಾರ ಮಾಡಲಾಗಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.

ಸಿರಿವಂತರ ಮೇಲಿನ ತೆರಿಗೆ ರದ್ದು: ಜೆಟ್‌ನಲ್ಲಿ ಶ್ರೀಮಂತರಿಗೆ ಹೆಚ್ಚುವರಿ ತೆರಿಗೆ ವಿಧಿಸಿದ್ದರಿಂದಾಗಿ, 2 ಕೋಟಿ ರೂ.ಗಳಿಂದ 5 ಕೋಟಿ ರೂ. ಆದಾಯ ಹೊಂದಿರುವವರ ಮೇಲೆ ಶೇ.35.88 ರಿಂದ ಶೇ.39ರಷ್ಟು ಹಾಗೂ 5 ಕೋಟಿ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಶೇ. 42.7 ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಈಗ ಬಜೆಟ್‌ಗೂ ಮೊದಲಿದ್ದ ಬಡ್ಡಿ ದರವೇ ಮರುಜಾರಿಯಾಗಲಿದೆ ಎಂದು ನಿರ್ಮಲಾ ಹೇಳಿದ್ದಾರೆ. ಅಲ್ಲದೆ, ಸ್ಟಾರ್ಟಪ್‌ಗ್ಳಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರ ಸಂಕಷ್ಟ ನಿವಾರಣೆಗೆ ಏಂಜೆಲ್‌ ತೆರಿಗೆಯನ್ನೂ ಹಿಂಪಡೆಯಲಾಗಿದೆ.

ನೋಟಿಸ್‌ಗಳ ತೊಂದರೆ ಕಡಿಮೆ: ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನೀತಿ ಉಲ್ಲಂಘನೆಯನ್ನು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸದಿರಲು ನಿರ್ಧಾರ ಮಾಡಲಾಗಿದೆ. ಅ.1 ರಿಂದ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಎಲ್ಲ ಐಟಿ ನೋಟಿಸ್‌ ಜಾರಿಯಾಗಲಿದೆ. ಅಲ್ಲದೆ, ನವೋದ್ಯಮಗಳಿಗೆ ಏಂಜೆಲ್‌ ಟ್ಯಾಕ್ಸ್‌ನಿಂದ ಮುಕ್ತಿ, ತೆರಿಗೆ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕ ವಿಭಾಗ ಸೃಷ್ಟಿಸಲು ನಿರ್ಧಾರ ಮಾಡಲಾಗಿದೆ. ಸಣ್ಣ ಉದ್ಯಮಗಳ ಸಾಲದ ಒಂದು ಬಾರಿಯ ಸೆಟಲ್‌ಮೆಂಟ್‌ಗೆ ಪಾರದರ್ಶಕ ವ್ಯವಸ್ಥೆ ಮಾಡಿಕೊಡಲಾಗಿದೆ.

30 ದಿನದಲ್ಲಿ ಜಿಎಸ್‌ಟಿ ರಿಫ‌ಂಡ್‌: ಎಂಎಸ್‌ಎಂಇಗಳಿಗೆ ಇದುವರೆಗೆ ಬಾಕಿ ಉಳಿಸಿಕೊಂಡಿರುವ ಜಿಎಸ್‌ಟಿ ರಿಫ‌ಂಡ್‌ ಅನ್ನು ಇನ್ನು 30 ದಿನಗಳೊಳಗೆ ನೀಡಲಾಗುವುದು. ಹೊಸದಾಗಿ ಬರುವ ರಿಟರ್ನ್ಸ್ ಗೆ 60 ದಿನದಲ್ಲಿ ರಿಫ‌ಂಡ್‌ ಮಾಡಿಸುವ ವ್ಯವಸ್ಥೆ ಮಾಡಲು ಜಿಎಸ್‌ಟಿ ವ್ಯವಸ್ಥೆಯನ್ನೇ ಸರಳೀಕರಣ ಮಾಡಲಾಗುವುದು ಎಂದು ನಿರ್ಮಲಾ ತಿಳಿಸಿದ್ದಾರೆ.

ಟಾಪ್ ನ್ಯೂಸ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…

ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನಗಳು, ರೈಲು ಸಂಚಾರದ ಮೇಲೆ ಪರಿಣಾಮ

Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.