![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Sep 30, 2023, 12:25 PM IST
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದ್ದು ಅದರಂತೆ ಲೋಕಸಭಾ ಕ್ಷೇತ್ರವಾದ ನಾಗ್ಪುರದಲ್ಲಿ ಸ್ಪರ್ದಿಸಲಿರುವ ಗಡ್ಕರಿ ಅವರು ತಮ್ಮ ಕ್ಷೇತ್ರದಲ್ಲಿ ನಡೆಸುವ ಚುನಾವಣಾ ಪ್ರಚಾರದಲ್ಲಿ ನೂತನ ತಂತ್ರಗಾರಿಕೆಯನ್ನು ನಡೆಸಲು ನಿರ್ಧರಿಸಿದ್ದಾರೆ.
ಈ ಬಾರಿಯ ಲೋಕ ಸಭೆ ಚುನಾವಣೆಗೆ ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ಅವರು ಯಾವುದೇ ಬ್ಯಾನರ್ ಅಥವಾ ಪೋಸ್ಟರ್‌ಗಳನ್ನು ಹಾಕುವುದಿಲ್ಲ ಎಂದ ಅವರು ಜೊತೆಗೆ ಲೋಕಸಭಾ ಕ್ಷೇತ್ರವಾದ ನಾಗ್ಪುರದಲ್ಲಿ ಪ್ರಚಾರದ ಸಮಯದಲ್ಲಿ ಜನರಿಗೆ ಚಹಾವನ್ನು ನೀಡುವುದಿಲ್ಲ ಯಾರು ಮತ ಹಾಕುತ್ತಾರೋ ಅವರು ಮತ ಹಾಕುತ್ತಾರೆ ಎಂದು ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆದ ಮಹಾರಾಷ್ಟ್ರ ರಾಜ್ಯ ಶಿಕ್ಷಕರ ಮಂಡಳಿ (ಎಂಎಸ್‌ಟಿಸಿ) ಸಮಾರಂಭದಲ್ಲಿ ಮಾತನಾಡಿದ ಅವರು ಮಹಾರಾಷ್ಟ್ರದ ವಾಶಿಮ್‌ನಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಚಾಲನೆ ನೀಡಲಾಗುತ್ತಿದ್ದು ಇಲ್ಲಿನ ಕಾಮಗಾರಿಯಲ್ಲಿ ಯಾರಿಗೂ ಲಂಚ ಪಡೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಇದೆ ವೇಳೆ ಹೇಳಿಕೆ ನೀಡಿದ ಅವರು ಮುಂದಿನ ಚುನಾವಣಾ ಪ್ರಚಾರದ ವೇಳೆ ಪಕ್ಷದ ಪರವಾಗಿ ಯಾವುದೇ ರೀತಿಯ ಬ್ಯಾನರ್, ಪೋಸ್ಟರ್ ಗಳನ್ನು ಹಾಕುವುದಿಲ್ಲ ಎಂದು ಹೇಳಿದ್ದಾರೆ ಅಷ್ಟು ಮಾತ್ರವಲ್ಲದೆ ಚುನಾವಣಾ ಪ್ರಚಾರದ ವೇಳೆ ಯಾರಿಗೂ ಚಹಾ ನೀಡಿ ಮತ ಸೆಳೆಯುವ ಪ್ರಯತ್ನವನ್ನೂ ಮಾಡುವುದಿಲ್ಲ ಯಾರಿಗೆ ಮತ ಹಾಕಲು ಮನಸ್ಸಿದೆಯೋ ಅವರು ಖಂಡಿತವಾಗಿಯೂ ನನಗೆ ಮತ ಹಾಕೇ ಹಾಕುತ್ತಾರೆ ಹಾಗಾಗಿ ಯಾವುದೇ ರೀತಿಯಲ್ಲೂ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲ್ಲ ಎಂದು ಹೇಳಿದ್ದಾರೆ.
ಮತದಾರರು ತುಂಬಾ ಬುದ್ಧಿವಂತರು ಮತ್ತು ಯಾವ ಅಭ್ಯರ್ಥಿ ಬೇಕೋ ಆ ಅಭ್ಯರ್ಥಿಗೆ ಮತ ಹಾಕುವ ಹಕ್ಕನ್ನು ಪಡೆದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Cauvery issue; ರೈತರ ಹಿತಕ್ಕೆ ಅಡ್ಡಿಯಾಗದಂತೆ ವಿವಾದ ಬಗೆಹರಿಸುತ್ತೇವೆ: ಸಿಎಂ ಸಿದ್ದರಾಮಯ್ಯ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.