ಬಾಲಾಕೋಟ್‌ನಿಂದ ಎನ್ನಾರ್ಸಿ: ಮಿಂಚಿದ ಪೆಂಡಾಲ್
Team Udayavani, Oct 7, 2019, 5:26 AM IST
ಕೋಲ್ಕತಾ: ಪಾಕಿಸ್ಥಾನದ ಬಾಲಾಕೋಟ್‌ನಲ್ಲಿ ನಡೆದ ವೈಮಾನಿಕ ದಾಳಿಯಿಂದ ಹಿಡಿದು ಅಸ್ಸಾಂನಲ್ಲಿ ಜಾರಿ ಯಾದ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ), ಪ್ಲಾಸ್ಟಿಕ್ ನಿಷೇಧ ದವರೆಗೆ ಪಶ್ಚಿಮ ಬಂಗಾಲದಲ್ಲಿ ಈ ಬಾರಿ ತರಹೇ ವಾರಿ ಥೀಮ್‌ಗಳುಳ್ಳ ದುರ್ಗಾ ಪೂಜೆ ಪೆಂಡಾಲ್‌ಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ಇಲ್ಲಿ ಪ್ರತಿ ವರ್ಷವೂ ವಿಶಿಷ್ಟ ಎನಿಸಿದ ಪೆಂಡಾಲ್‌ಗಳನ್ನು ನಿರ್ಮಿಸಲಾಗುತ್ತದೆ. 10 ದಿನಗಳ ಉತ್ಸವದಲ್ಲಿ ಅತ್ಯುತ್ತಮ ಥೀಮ್, ಅತ್ಯುತ್ತಮ ಪ್ರತಿಮೆಗಳು ಹಾಗೂ ಅತ್ಯುತ್ತಮ ಅಲಂಕಾರ ವಿಭಾಗದಲ್ಲಿ ದುರ್ಗಾ ಪೂಜಾ ಸಮಿತಿಗಳಿಗೆ ಪ್ರಶಸ್ತಿಯನ್ನೂ ನೀಡಲಾಗು ತ್ತದೆ. ಈ ಬಾರಿ ಸೆಂಟ್ರಲ್ ಕೋಲ್ಕತಾದ ದಿ ಯಂಗ್ ಬಾಯ್ಸ ಕ್ಲಬ್ ಸಬೋìಜನಿನ್ ದುರ್ಗಾ ಕಮಿಟಿಯು, ಕಳೆದ ಫೆಬ್ರವರಿ ಯಲ್ಲಿ ಪಾಕ್‌ನ ಬಾಲಕೋಟ್‌ನಲ್ಲಿನ ಜೈಶ್ ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತೀಯ ವಾಯುಪಡೆ ನಡೆಸಿದ ದಾಳಿಯನ್ನೇ ಪೆಂಡಾಲ್‌ನ ಥೀಮ್ ಆಗಿ ರೂಪಿಸಿ ಕೊಂಡಿದೆ. ಇದಕ್ಕಾಗಿ ವಿಂಗ್ ಕಮಾಂಡರ್ ಅಭಿನಂದನ್ ಅವರ ಆಳೆತ್ತರದ ಮಾದರಿಯನ್ನೂ ನಿಲ್ಲಿಸಲಾಗಿದ್ದು, ಇದನ್ನು ನೋಡಲು ಜನರು ಮುತ್ತಿಗೆ ಹಾಕುತ್ತಿದ್ದಾರೆ.
ಇನ್ನು, ಅಸ್ಸಾಂನಲ್ಲಿ ಜಾರಿಯಾದ ಎನ್‌ಆರ್‌ಸಿ ಮುಂದೆ ಪಶ್ಚಿಮ ಬಂಗಾಲಕ್ಕೂ ವಿಸ್ತರಿಸಲಿದೆ ಎಂಬ ಸುದ್ದಿಯ ನಡುವೆಯೇ, “ನಿರಾಶ್ರಿತರು’ ಎಂಬ ಥೀಮ್‌ನಡಿ ಎನ್‌ಆರ್‌ಸಿಯ ಪರಿಣಾಮಗಳನ್ನು ತಿಳಿಸುವ ಪ್ರಯತ್ನವನ್ನೂ ಮಾಡಲಾಗಿದೆ.
ಮತ್ತೂಂದು ಸಮಿತಿಯು, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣದಂಥ ಥೀಮ್‌ಗಳನ್ನಿಟ್ಟು ಕೊಂಡಿ ದ್ದರೆ, ಮತ್ತೆ ಕೆಲವು ಮೊಬೈಲ್ ಟವರ್‌ಗಳ ವಿಕಿರಣಗಳು ಪಕ್ಷಿಸಂಕುಲಕ್ಕೆ ಹೇಗೆ ಹಾನಿ ಮಾಡುತ್ತಿವೆ ಎಂಬ ಥೀಮ್ ಇಟ್ಟುಕೊಂಡು ದುರ್ಗೆಗೆ ಪೂಜೆ ಸಲ್ಲಿಸುತ್ತಿದ್ದಾರೆ. ಹೀಗೆ, ಒಂದಕ್ಕೊಂದು ವಿಭಿನ್ನ ಹಾಗೂ ವಿಶಿಷ್ಟವಾದ ಪೆಂಡಾಲ್‌ಗಳು ಬಂಗಾಲದ್ಯಾಂತ ತಲೆಎತ್ತಿರು ವುದು ಹಬ್ಬದ ಸಂಭ್ರಮವನ್ನು ಇಮ್ಮಡಿ ಗೊಳಿಸಿದೆ.
ದುರ್ಗೆಯಾದ 4 ವರ್ಷದ ಫಾತಿಮಾ
ದುರ್ಗಾ ಪೂಜೆಯ ಮತ್ತೂಂದು ವಿಶೇಷವೆಂದರೆ, ನವರಾತ್ರಿಯ ಅವಧಿಯಲ್ಲಿ ನಡೆಯುವ “ಕುಮಾರಿ ಪೂಜೆ’. ಇಲ್ಲಿ ಪುಟ್ಟ ಹೆಣ್ಣು ಮಕ್ಕಳಿಗೆ ದುರ್ಗೆಯಂತೆ ವಸ್ತ್ರ ಧರಿಸಿ, ಆ ಮಕ್ಕಳನ್ನೇ ದುರ್ಗೆ ಎಂದು ಪೂಜಿಸಲಾಗುತ್ತದೆ. ಸುಮಾರು 120 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದ ಅವರು ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಬೆಸ್ತರೊಬ್ಬರ ಪುತ್ರಿಯನ್ನು ಕರೆಸಿಕೊಂಡು ಇದೇ ರೀತಿ ಪೂಜೆ ಸಲ್ಲಿಸಿದ್ದರಂತೆ. ಈಗ ಕೋಲ್ಕತ್ತಾದ ತಮಲ್ ದತ್ತಾ ಎಂಬವರ ಕುಟುಂಬವೂ ವಿವೇಕಾನಂದರನ್ನು ಅನುಸರಿಸಿದೆ. ಅದರಂತೆ, ಉತ್ತರಪ್ರದೇಶದ ಫತೇಪುರ ಸಿಕ್ರಿಯಿಂದ 4 ವರ್ಷದ ಫಾತಿಮಾಳನ್ನು ಕೋಲ್ಕತಾಗೆ ಕರೆಸಿಕೊಂಡು, ಆಕೆಗೆ ದುರ್ಗೆಯಂತೆ ವೇಷಭೂಷಣ ತೊಡಿಸಿ ಪೂಜೆ ಸಲ್ಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.