ರಾಜಸ್ಥಾನ, ಮಧ್ಯ ಪ್ರದೇಶ: ಕಾಂಗ್ರೆಸ್ ಜತೆ ಮೈತ್ರಿ ಇಲ್ಲ; ಮಾಯಾವತಿ
Team Udayavani, Oct 3, 2018, 5:55 PM IST
ಹೊಸದಿಲ್ಲಿ : ರಾಜಸ್ಥಾನ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಇರುವ ನಡುವೆಯೇ ಇದೀಗ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು “ಕಾಂಗ್ರೆಸ್ ಜತೆಗೆ ಯಾವುದೇ ರೀತಿಯ ಚುನಾವಣಾ ಮೈತ್ರಿ ಇಲ್ಲ; ಎರಡೂ ರಾಜ್ಯಗಳಲ್ಲಿ ನಾವು ಸ್ವಂತ ಬಲದಲ್ಲೇ ಹೋರಾಡುತ್ತೇವೆ’ ಎಂದು ಹೇಳಿದ್ದಾರೆ.
“ಬಿಎಸ್‌ಪಿಯನ್ನು ಮುಗಿಸಿ ಬಿಡುವ ಸಂಚನ್ನು ಕಾಂಗ್ರೆಸ್ ರೂಪಿಸುತ್ತಿದೆ; ಆದುದರಿಂದ ಆ ಪಕ್ಷದೊಂದಿಗೆ ನಾವು ಯಾವುದೇ ರೀತಿಯ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಮಾಯಾವತಿ ಅವರಿಂದು ಎಎನ್‌ಐ ಜತೆಗೆ ಮಾತನಾಡುತ್ತಾ ಹೇಳಿದರು.
“ದಿಗ್ವಿಜಯ್ ಸಿಂಗ್ ಅವರಂತಹ ಕಾಂಗ್ರೆಸ್ ನಾಯಕರಿಗೆ ಬಿಎಸ್‌ಪಿ – ಕಾಂಗ್ರೆಸ್ ಮೈತ್ರಿ ಬೇಕಾಗಿಲ್ಲ; ಅವರಿಗೆ ಜಾರಿ ನಿರ್ದೇಶನಾಲಯ, ಸಿಬಿಐ ಭಯ ಇದೆ’ ಎಂದು ಮಾಯಾವತಿ ಛೇಡಿಸಿದರು.
“ಬಿಜೆಪಿ ಏಜಂಟ್ ಆಗಿರುವ ದಿಗ್ವಿಜಯ್ ಸಿಂಗ್ ಅವರು ನನ್ನ ಮೇಲೆ ಕೇಂದ್ರದ ಅಪಾರವಾದ ಒತ್ತಡವಿದೆ; ಹಾಗಾಗಿ ಆಕೆ ಕಾಂಗ್ರೆಸ್ ಜತೆ ನಾನು ಮೈತ್ರಿ ಬಯಸುತ್ತಿಲ್ಲ ಎಂದು ಹೇಳಿದ್ದಾರೆ; ಇದು ಸಂಪೂರ್ಣ ನಿರಾಧಾರ’ ಎಂದು ಮಾಯಾವತಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.