ಮುಂಬಯಿಯಲ್ಲಿ ಹೊಸ ಡ್ಯಾನ್ಸ್ ಬಾರ್‌ಗಳಿಗೆ ನೋ ಚಾನ್ಸ್ !
Team Udayavani, Oct 26, 2017, 11:29 AM IST
ಮುಂಬಯಿ: ನಗರದಲ್ಲಿ ಸದ್ಯ ಯಾವುದೇ ಡ್ಯಾನ್ಸ್ ಬಾರ್‌ಗಳು ಕಾರ್ಯಾರಂಭ ಮಾಡುವ ಸಾಧ್ಯತೆ ದೂರವಾಗಿದೆ. 2016ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ ಡ್ಯಾನ್ಸ್ ಬಾರ್‌ಗಳನ್ನು ತೆರೆಯಲು ಲೈಸೆನ್ಸ್ ಕೋರಿ ಹೊಸದಾಗಿ ಸಲ್ಲಿಸಲಾಗಿದ್ದ ಎಲ್ಲಾ 79 ಅರ್ಜಿಗಳನ್ನೂ ಮುಂಬಯಿ ಪೊಲೀಸರು ತಿರಸ್ಕರಿಸಿದ್ದಾರೆ. ಪೊಲೀಸರ ಈ ನಿರ್ಧಾರದಿಂದ ನಗರದ ನಾಗರಿಕರು ನಿಟ್ಟುಸಿರು ಬಿಡುವಂತಾಗಿದ್ದರೆ ಬಾರ್ ಮಾಲಕರು ಮಾತ್ರ ತೀವ್ರ ಹಿನ್ನಡೆಯನ್ನು ಕಾಣುವಂತಾಗಿದೆ.
ರಾಜ್ಯದಲ್ಲಿ ಡ್ಯಾನ್ಸ್ ಬಾರ್‌ಗಳು ಪುನರಾರಂಭಗೊಳ್ಳಲು ಅವಕಾಶ ನೀಡದಿರುವ ಕ್ರಮವಾಗಿ ರಾಜ್ಯ ಸರಕಾರ ರೂಪಿಸಿದ್ದ ನಿಯಮಾವಳಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಮುಂದಿನ ಜನವರಿವರೆಗೆ ಮುಂದೂಡಲಾಗಿರುವುದರಿಂದ ಸದ್ಯಕ್ಕಂತೂ ನಗರದಲ್ಲಿ ಮತ್ತೆ ಡ್ಯಾನ್ಸ್ ಬಾರ್‌ಗಳು ತಲೆಎತ್ತುವ ಸಾಧ್ಯತೆಗಳು ದೂರವಾಗಿವೆ. ಡ್ಯಾನ್ಸ್ ಬಾರ್ ಅಸೋಸಿಯೇಶನ್ ರಾಜ್ಯ ಸರಕಾರ ರೂಪಿಸಿರುವ ಕಾನೂನಿಗೆ ತಡೆ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಇನ್ನೊಂದು ಪ್ರಮುಖ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪಂಚ ಸದಸ್ಯರ ಸಾಂವಿಧಾನಿಕ ಪೀಠದ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಡ್ಯಾನ್ಸ್ ಬಾರ್ ಮಾಲಕರ ಅರ್ಜಿಯ ವಿಚಾರಣೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಬಾರ್ ಮಾಲಕರ ಪರ ವಕೀಲರಾದ ಸತ್ಯಜಿತ್ ಸಾಹಾ ತಿಳಿಸಿದರು.
ಷರತ್ತುಗಳ ಈಡೇರಿಕೆಯಲ್ಲಿ ಅರ್ಜಿದಾರರು ವಿಫಲ
2016ರ ನ. 24ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಲ್ಲಿ ಈಗಾಗಲೇ ನಗರದಲ್ಲಿ ಲೈಸೆನ್ಸ್ ನೀಡಲಾಗಿರುವ ಮೂರು ಡ್ಯಾನ್ಸ್ ಬಾರ್‌ಗಳ ಮಾದರಿಯಲ್ಲಿ ನಿಯಮಾವಳಿಗಳನ್ನು ಪಾಲಿಸುವ ಭರವಸೆ ನೀಡುವ ಬಾರ್‌ಗಳ ಮಾಲಕರು ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಿದಲ್ಲಿ ಅದನ್ನು ಪರಿಗಣಿಸುವಂತೆ ಪೊಲೀಸರಿಗೆ ನಿರ್ದೇಶ ನೀಡಿತ್ತು. ಅದರಂತೆ ಜುಲೈವರೆಗೆ ನಗರ ಪೊಲೀಸರಿಗೆ 79 ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಸ್ಥಳೀಯ ಪ್ರದೇಶಗಳ ಠಾಣೆಗಳ ಪೊಲೀಸರು ನಕಾರಾತ್ಮಕ ವರದಿಯನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಮತ್ತು ನ್ಯಾಯಾಲಯದಿಂದ ಅಂಗೀಕರಿಸಲ್ಪಟ್ಟ 26 ಷರತ್ತುಗಳನ್ನು ಈಡೇರಿಸುವಲ್ಲಿ ಅರ್ಜಿದಾರರು ವಿಫಲವಾದ್ದರಿಂದ ಈ ಅರ್ಜಿ ತಿರಸ್ಕರಿಸ ಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಬಾರ್ ಮಾಲಕರ ಅಸಮಾಧಾನ
ಆದರೆ ಮುಂಬಯಿ ಪೊಲೀಸರ ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ರುವ ಬಾರ್ ಮಾಲಕರು ಪೊಲೀಸರು ಡ್ಯಾನ್ಸ್ ಬಾರ್‌ಗಳಿಗೆ ಲೈಸೆನ್ಸ್ ನೀಡಲು ನಿರಾಸಕ್ತಿಯನ್ನು ತಾಳಿರುವುದರಿಂದ ಸಕಾರಣಗಳಿಲ್ಲದೇ ನಮ್ಮ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ ಎಂದು ದೂರಿದ್ದಾರೆ. ಲೈಸೆನ್ಸ್ ನೀಡಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಬಾರ್ ಆವರಣಗಳ ಪರಿಶೀಲನೆಗಾಗಿ ನ್ಯಾಯಾಲಯದಿಂದ ಸ್ವತಂತ್ರ ಮಂಡಳಿಯೊಂದನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.