ಕಲ್ಲಿದ್ದಲು ಅಭಾವವಿಲ್ಲ: ಅನಗತ್ಯ ಗಾಬರಿ ಬೇಡ: ಸಚಿವ ಪ್ರಹ್ಲಾದ್ ಜೋಷಿ
60 ಲಕ್ಷ ಟನ್‌ಗೂ ಹೆಚ್ಚು ಸಂಗ್ರಹವಿದೆ: ಸಿಸಿಎಲ್
Team Udayavani, May 1, 2022, 7:00 AM IST
ಹುಬ್ಬಳ್ಳಿ/ಹೊಸದಿಲ್ಲಿ: ದೇಶಾದ್ಯಂತ ಕಲ್ಲಿದ್ದಲು ಅಭಾವ ಸೃಷ್ಟಿಯಾಗಿದೆ ಎಂಬ ಆರೋಪ ಗಳನ್ನು ಕೇಂದ್ರ ಸರಕಾರ ತಿರಸ್ಕರಿ ಸಿದ್ದು, ಸಾಕಷ್ಟು ಕಲ್ಲಿದ್ದಲು ಸಂಗ್ರಹವಿದೆ ಎಂದು ಸ್ಪಷ್ಟಪಡಿಸಿದೆ.
ದೇಶದ ಉಷ್ಣವಿದ್ಯುತ್ ಸ್ಥಾವರಗಳಲ್ಲಿ ಸರಾಸರಿ 21.55 ದಶಲಕ್ಷ ಟನ್ ಹಾಗೂ ಕಲ್ಲಿದ್ದಲು ಕಂಪೆನಿಗಳಲ್ಲಿ 72.5 ದಶಲಕ್ಷ ಟನ್ ಸಂಗ್ರಹವಿದೆ. ಈ ತಿಂಗಳಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ವಿದ್ಯುತ್ ಬೇಡಿಕೆ ಉಂಟಾ ಗಿದೆ. ಆದರೂ ಗಾಬರಿಯಾಗುವ ಅಗತ್ಯವಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಹೇಳಿದ್ದಾರೆ.
ಶನಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲ ಭಾಗದಲ್ಲೂ ಕಲ್ಲಿದ್ದಲು ಸಂಗ್ರಹ ವಿದೆ. ನಾವು ಪ್ರತಿದಿನ 1.7 ದಶಲಕ್ಷ ಟನ್ ಕಲ್ಲಿದ್ದಲು ಪೂರೈಕೆ ಮಾಡುತ್ತಿದ್ದೇವೆ. ಎಷ್ಟು ಖಾಲಿಯಾಗುತ್ತೋ, ಅಷ್ಟು ತುಂಬುತ್ತಿದ್ದೇವೆ. ಬೇಡಿಕೆ ಹೆಚ್ಚಾಗಿದ್ದರಿಂದ ಸಾಗಣೆ ಮಾಡಲು ರೈಲ್ವೇ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
60 ಲಕ್ಷ ಟನ್ ಲಭ್ಯ: ಸಿಸಿಎಲ್
ವಿದ್ಯುತ್ಛಕ್ತಿ ಉತ್ಪಾದನೆಗೆಂದೇ ಸೆಂಟ್ರಲ್ ಕೋಲ್‌ಫೀಲ್ಡ್ ಲಿಮಿಟೆಡ್(ಸಿಸಿಎಲ್) ನಲ್ಲಿ 60 ಲಕ್ಷ ಟನ್‌ಗೂ ಅಧಿಕ ಕಲ್ಲಿದ್ದಲು ಸಂಗ್ರಹ ಲಭ್ಯವಿದ್ದು, ವಿದ್ಯುತ್ ಬಿಕ್ಕಟ್ಟು ಎದುರಿ ಸುತ್ತಿರುವ ರಾಜ್ಯಗಳಿಗೆ ಪ್ರತಿದಿನ 1.85 ಲಕ್ಷ ಟನ್ ಕಲ್ಲಿದ್ದಲು ಒದಗಿಸುವ ಉದ್ದೇಶ ಹೊಂದಿದ್ದೇವೆ ಎಂದು ಸಿಸಿಎಲ್ ಮುಖ್ಯಸ್ಥ ಪಿಎಂ ಪ್ರಸಾದ್ ಹೇಳಿದ್ದಾರೆ.
ದೇಶಾದ್ಯಂತ ಕಲ್ಲಿದ್ದಲು ಕೊರತೆ ಎದುರಾ ಗಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇವರ ಮಾತುಗಳು ಮಹತ್ವ ಪಡೆದಿವೆ. ಸದ್ಯಕ್ಕೆ ನಮ್ಮಲ್ಲಿ 60 ಲಕ್ಷ ಟನ್‌ಗಿಂತಲೂ ಹೆಚ್ಚು ಕಲ್ಲಿದ್ದಲು ಸಂಗ್ರಹವಿದೆ. ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಬಿಹಾರ ಮತ್ತು ಝಾರ್ಖಂಡ್ ರಾಜ್ಯಗಳಿಗೆ ಲಿಂಕ್ ಆಗಿರುವ ವಿದ್ಯುತ್ ಸ್ಥಾವರಗಳಿಗೆ ದಿನಕ್ಕೆ 1.85 ಲಕ್ಷ ಟನ್ ಕಲ್ಲಿದ್ದಲು ಪೂರೈಸುವ ಗುರಿ ಇದೆ. ಕಳೆದ 29 ದಿನಗಳಲ್ಲಿ ಸರಾಸರಿ 1.86 ಲಕ್ಷ ಟನ್ ಕಲ್ಲಿದ್ದಲು ಪೂರೈಸಲಾಗಿದೆ. ಮೇ ತಿಂಗಳಲ್ಲಿ ಇದನ್ನು ದಿನಕ್ಕೆ 2.20 ಲಕ್ಷ ಟನ್‌ಗೆàರಿಸಲು ಚಿಂತನೆ ನಡೆಸಿದ್ದೇವೆ ಎಂದೂ ಪ್ರಸಾದ್ ತಿಳಿಸಿದ್ದಾರೆ.
ವಿದ್ಯುತ್ ಬೇಡಿಕೆ ದಾಖಲೆ
ಹಲವು ರಾಜ್ಯಗಳಲ್ಲಿ ತಾಪ ಹೆಚ್ಚಳವಾಗುತ್ತಿ ರುವ ಕಾರಣ ವಿದ್ಯುತ್ಛಕ್ತಿಯ ಬೇಡಿಕೆ ಸಾರ್ವಕಾಲಿಕ ಏರಿಕೆ ಕಂಡಿದೆ. ಶುಕ್ರವಾರ ಈ ಬೇಡಿಕೆ 2,07,111 ಮೆಗಾ ವ್ಯಾಟ್(207 ಗಿಗಾ ವ್ಯಾಟ್) ಆಗಿತ್ತು. ಗುರುವಾರ ಗರಿಷ್ಠ ವಿದ್ಯುತ್ ಬೇಡಿಕೆ ದಾಖಲೆಯ 204.65 ಗಿ.ವ್ಯಾ.ಗೆ ತಲುಪಿ, 10.77 ಗಿ.ವ್ಯಾ. ವಿದ್ಯುತ್ಛಕ್ತಿ ಅಭಾವ ಉಂಟಾಗಿತ್ತು. ಶುಕ್ರವಾರ ಸಾರ್ವಕಾಲಿಕ ದಾಖಲೆ ಮಾಡಿದೆ.
ಬಿಸಿಲ ಧಗೆಗೆ ಕುಲುಮೆ ಯಂತಾದ ರಾಜ್ಯಗಳು
ಬಿಸಿಲಿನ ಝಳದಿಂದಾಗಿ ಕರ್ನಾಟಕ ಸಹಿತ ಹಲವು ರಾಜ್ಯಗಳು ಉರಿವ ಕುಲುಮೆಯಂತಾಗಿದ್ದು, ಇನ್ನೂ 5 ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇಡೀ ದೇಶದಲ್ಲಿ ಎಪ್ರಿಲ್ ತಿಂಗಳಲ್ಲಿ ಸರಾಸರಿ 35.05 ಡಿ.ಸೆ. ಉಷ್ಣಾಂಶ ದಾಖಲಾಗಿದ್ದು, ಇದು ಕಳೆದ 122 ವರ್ಷಗಳಲ್ಲೇ ಅತ್ಯಧಿಕ ಎಂದು ಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.
ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಹಾಗೂ ದಿಲ್ಲಿಯ ಹಲವು ಭಾಗಗಳಲ್ಲಿ ತಾಪಮಾನವು ಶನಿವಾರ 46 ಡಿ.ಸೆ. ದಾಟಿತ್ತು. ಉತ್ತರ ಪ್ರದೇಶದ ಬಾಂದಾದಲ್ಲಿ 47.4 ಡಿ.ಸೆ. ಆಗಿತ್ತು. 1900ರ ಬಳಿಕ ಎಪ್ರಿಲ್ ತಿಂಗಳಲ್ಲಿ ವಾಯವ್ಯ ಮತ್ತು ಮಧ್ಯ ಭಾರತದಲ್ಲಿ ಅತ್ಯಧಿಕ ಗರಿಷ್ಠ ತಾಪಮಾನ ದಾಖಲಾಗಿದ್ದು, ಮೇ ತಿಂಗಳಲ್ಲೂ ಇಲ್ಲಿನ ಜನರು ಈ ಸಂಕಷ್ಟದಿಂದ ಮುಕ್ತರಾಗುವ ಸಾಧ್ಯತೆಯಿಲ್ಲ ಎಂದೂ ಇಲಾಖೆ ಹೇಳಿದೆ.
ದೇಶಾದ್ಯಂತ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ವಿದ್ಯುತ್ ಬೇಡಿಕೆ ಹೆಚ್ಚಿದ್ದರೂ ನಿರ್ವಹಣೆಯ ನೆಪ ಹೇಳಿ ಸ್ಥಾವರಗಳನ್ನು ಮುಚ್ಚಲಾಗುತ್ತಿದೆ. ಈ ವೈಫಲ್ಯಕ್ಕೆ ಪ್ರಧಾನಿ ಮೋದಿ ಯಾರನ್ನು ದೂಷಿಸುತ್ತಾರೆ? ನೆಹರೂ ಅವರನ್ನೇ?
– ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಬೇಡಿಕೆ ಹೆಚ್ಚಾದಂತೆ ಕಲ್ಲಿದ್ದಲಿನ ಸರಾಗ ಪೂರೈಕೆಗಾಗಿ ವಿದ್ಯುತ್, ಕಲ್ಲಿದ್ದಲು ಮತ್ತು ರೈಲ್ವೇ ಸಚಿವಾಲಯವು ನಿರಂತರವಾಗಿ ಕೆಲಸ ಮಾಡುತ್ತಿದೆ. ಹೀಗಿ ದ್ದರೂ ಸತ್ಯ ಗೊತ್ತಿಲ್ಲದೆ ಮಾತನಾಡುತ್ತಾ ಹೋದರೆ, ರಾಹುಲ್ ಗಾಂಧಿ ಅವರನ್ನು “ನಕಲಿ ಜೋತಿಷಿ’ ಎನ್ನಬೇಕಾದೀತು.
– ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.