ಮಧ್ಯ ಪ್ರದೇಶದಲ್ಲಿ ‘ಪೂರ್ಣ ಪ್ರಮಾಣದ ಲಾಕ್ ಡೌನ್’ ಇಲ್ಲ : ಶಿವರಾಜ್ ಸಿಂಗ್ ಚೌಹಾಣ್
Team Udayavani, Apr 11, 2021, 3:56 PM IST
ನವ ದೆಹಲಿ : ದೇಶದಾದ್ಯಂತ ಕೋವಿಡ್ ರೂಪಾಂತರಿ ಅಲೆ ಹೆಚ್ಚಳ ಆಗುತ್ತಿರುವುದರಿಂದ ಜನರಲ್ಲಿ ಮತ್ತೆ ಲಾಕ್ ಡೌನ್ ಆಗಲಿದೆಯೇ ಎನ್ನುವುದರ ಬಗ್ಗೆ ಆತಂಕ ಹುಟ್ಟುತ್ತಿರುವುದರ ನಡುವೆ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಲಾಕ್ ಡೌನ್ ಆಗುವುದಿಲ್ಲ ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
4,000 ರೆಮ್ಡೆಸಿವಿರ್ ಲಸಿಕೆ ಅಥವಾ ಚುಚ್ಚುಮದ್ದು ಪ್ರಸ್ತುತ ರಾಜ್ಯದಲ್ಲಿ ಲಭ್ಯವಿದೆ. ಆಮ್ಲಜನಕದ ಕೊರತೆಯಿಲ್ಲ. 5,000 ಚುಚ್ಚುಮದ್ದು ಇಂದು ಬರಲಿದೆ. ನಾವು ಇಡೀ ರಾಜ್ಯದಲ್ಲಿ ಟಿಕಾ (ವ್ಯಾಕ್ಸಿನೇಷನ್) ಉತ್ಸವವನ್ನು ಆಚರಿಸುತ್ತಿದ್ದೇವೆ. ಮಧ್ಯಪ್ರದೇಶದಲ್ಲಿ ಯಾವುದೇ ಲಾಕ್‌ಡೌನ್ ನಡೆಯುವುದಿಲ್ಲ ಎಂದು ಚೌಹಾನ್ ಹೇಳಿರುವುದನ್ನು ಸುದ್ದಿ ಸಂಸ್ಥೆ ಎ ಎನ್ ಐ ವರದಿ ಮಾಡಿದೆ.
There is no shortage of oxygen. 4,000 Remdesivir injections are already available and 5,000 injections will arrive today. We are observing Tika (vaccination) Utsav in the entire state. No Lockdown will take place in Madhya Pradesh: Chief Minister Shivraj Singh Chouhan pic.twitter.com/9EifX3uVdV
— ANI (@ANI) April 11, 2021
ಬಿಜೆಪಿಯೇತರ ರಾಜ್ಯಗಳ ಲಸಿಕೆಯ ಕೊರತೆಯ ಬಗ್ಗೆ ಆರೋಪ ಮಾಡುತ್ತಿರುವ ನಡುವೆ ಚೌಹಾಣ್ ಈ ಹೇಳಿಕೆ ನೀಡಿದ್ದಾರೆ.
ಓದಿ : ಈ ಕಾಂಗರುಗಳು ಜಗಳ ಆಡುತ್ತಿವೆಯೇ? ಅಥವಾ ತುಂಟಾಟ ಮಾಡುತ್ತಿವೆಯೇ?
ಏತನ್ಮಧ್ಯೆ, ಶನಿವಾರ (ಏಪ್ರಿಲ್ 10) ಚೌಹಾಣ್ ನೇತೃತ್ವದಲ್ಲಿ ಬಿಜೆಪಿಯ ಹಿರಿಯ ಮುಖಂಡರು, ಅರೆವೈದ್ಯಕೀಯ ಸಿಬ್ಬಂದಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ವೈರಸ್ ಹರಡುವುದನ್ನು ತಡೆಯಲು ಜನರು ಕೋವಿಡ್ ಪ್ರೋಟೋಕಾಲ್ ಗಳನ್ನು ಅನುಸರಿಸಬೇಕೆಂದು ಅವರು ಆಗ್ರಹಿಸಿದರು.
ಇಂದೋರ್ ನಗರ, ರೌ, ಮೊವ್, ಶಾಜಾಪುರ ನಗರ, ಉಜ್ಜಯಿನಿ, ಬರ್ವಾನಿ, ರಾಜ್ ಗರ್ ಮತ್ತು ವಿದಿಷಾ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಏಪ್ರಿಲ್ 19 ರ ಬೆಳಿಗ್ಗೆ 6 ಗಂಟೆಯವರೆಗೆ ಲಾಕ್ ಡೌನ್ ವಿಸ್ತರಿಸಿದರು. ಏಪ್ರಿಲ್ 12 ರಿಂದ ಏಪ್ರಿಲ್ 22 ರ ಬೆಳಿಗ್ಗೆ ಬಾಲಘಾಟ್ ನಲ್ಲಿ, ನರಸಿಂಗ್‌ಪುರ ಮತ್ತು ಸಿಯೋನಿ ಜಿಲ್ಲೆಗಳು ಮತ್ತು ಜಬಲ್‌ಪುರ ನಗರ ಲಾಕ್ ಡೌನ್ ವಿಧಿಸಲಾಗುತ್ತದೆ ಎಂದು ಹೇಳಿರುವುದನ್ನು ಪಿಟಿಐ ವರದಿ ಮಾಡಿದೆ.
ಇನ್ನು, ಏಪ್ರಿಲ್ 7 ರಿಂದ 8 ದಿನಗಳ ಕಾಲ ಚಿಂದ್ವಾರದಲ್ಲಿ, ಏಪ್ರಿಲ್ 8 ರಿಂದ 16 ರ ತನಕ ಬೆತುಲ್ ಖಾರ್ಗೋನ್ ನಲ್ಲಿ, ಏಪ್ರಿಲ್ 9 ರ ರಾತ್ರಿಯಿಂದ ಏಪ್ರಿಲ್ 16ರ ಬೆಳಗ್ಗೆ 5 ರ ತನಕ ರತ್ಲಂ ಮತ್ತು ಕಟ್ನಿ ಯಲ್ಲಿ, ಏಪ್ರಿಲ್ 7 ರಿಂದ 10 ತನಕ ಮೂರು ದಿನಗಳ ಕಾಲ ಶಾಜಾಪುರ ನಲ್ಲಿ ಕೋವಿಡ್ ನಿಯಂತ್ರಣ ಮಾಡಲು ಮಧ್ಯ ಪ್ರದೇಶ ಸರ್ಕಾರ ಲಾಕ್ ಡೌನ್ ಘೋಷಿಸಿದೆ.
ಓದಿ : ಬೈಕ್ ಅಪಘಾತ: ಶ್ರೀಶೈಲಕ್ಕೆ ಹೋಗುತ್ತಿದ್ದ ಇಬ್ಬರು ಭಕ್ತರು ಸ್ಥಳದಲ್ಲೇ ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.