ನಾಗಾಲ್ಯಾಂಡ್ ಮೂಲ ವಾಸಿಗಳ ರಿಜಿಸ್ಟ್ರಿ: ತಾರತಮ್ಯದ ಯಾವುದೇ ನಿರ್ಧಾರ ಇಲ್ಲ: ಸರಕಾರ
Team Udayavani, Jul 12, 2019, 11:23 AM IST
ಕೊಹಿಮಾ : ನಾಗಾಲ್ಯಾಂಡ್ ನ ಮೂಲ ವಾಸಿಗಳ ರಿಜಿಸ್ಟ್ರಿಯನ್ನು (ಆರ್‌ಐಐಎನ್) ತಯಾರಿಸುವ ಸಂದರ್ಭದಲ್ಲಿ ಯಾವುದೇ ಸಮುದಾಯದ ಜನರ ಹಿತಾಸಕ್ತಿಗೆ ಧಕ್ಕೆ ಉಂಟಾಗುವ ರೀತಿಯ ಯಾವುದೇ ನಿರ್ಧಾರಗಳನ್ನು ತಾನು ಕೈಗೊಳ್ಳುವುದಿಲ್ಲ ಎಂದು ನಾಗಾಲ್ಯಾಂಡ್ ಸರಕಾರ ಇಂದು ಹೇಳಿದೆ.
ನಾಗಾಲ್ಯಾಂಡ್ ಸರಕಾರ ಆರ್‌ಐಐಎನ್ ತಯಾರಿಸುವಲ್ಲಿ ಯಾವುದೇ ತಾರತಮ್ಯ, ಪಕ್ಷಪಾತ ಎಸಗುವುದಿಲ್ಲ ಎಂಬ ಭರವಸೆಯನ್ನು ನೀಡಿದೆ ಎಂದು ನ್ಯಾಗಾಲ್ಯಾಂಡ್‌ನ ಗೃಹ ಆಯುಕ್ತ ಆರ್ ರಾಮಕೃಷ್ಣನ್ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ನಾಗಾಲ್ಯಾಂಡಿನ ಮೂಲ ವಾಸಿಗಳನ್ನು ನಿರ್ಧರಿಸಿ ಅವರಿಗೆ ಸರ್ಟಿಫಿಕೇಟ್ ನೀಡುವಲ್ಲಿ ಅವರ ದಾಖಲೆಪತ್ರಗಳನ್ನು ಇರಿಸಿಕೊಳ್ಳಲಾಗುವುದು ಎಂದು ಆರ್‌ಐಐಎನ್ ಸಿದ್ಧಪಡಿಸುವ ನಿಟ್ಟಿನಲ್ಲಿ ಜೂನ್ 29ರಂದು ಸರಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರನ್ನು ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ