ಮೋದಿ-ಟ್ರಂಪ್ ಮಾತುಕತೆಯಲ್ಲಿ ಎಚ್-1ಬಿ ವೀಸಾ ಚರ್ಚೆ ಆಗಿಲ್ಲ !
Team Udayavani, Jun 27, 2017, 12:12 PM IST
ವಾಷಿಂಗ್ಟನ್ : ಭಾರತ – ಅಮೆರಿಕ ಸಂಬಂಧದಲ್ಲಿ ತೆರೆಮರೆಯ ಮುಳ್ಳಾಗಿ ನಿಂತಿರುವ ಎಚ್-1ಬಿ ವೀಸಾ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತುಕತೆಯಲ್ಲಿ ಚರ್ಚಿಸಲಾಗಿಲ್ಲ ಎಂಬುದು ಗಮನಾರ್ಹವಾಗಿದೆ.
ಭಾರತೀಯ ಐಟಿ ಕ್ಷೇತ್ರಕ್ಕೆ ಅತ್ಯಗತ್ಯವಾಗಿದ್ದ ಎಚ್-1ಬಿ ವೀಸಾಕ್ಕೆ ಅಧ್ಯಕ್ಷ ಟ್ರಂಪ್ ಅವರು ಹೇರಿದ್ದ ನಿರ್ಬಂಧಗಳು ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಪ್ರಯಾಣ ಬೆಳೆಸುವ ತನಕವೂ ಅತ್ಯಂತ ಪ್ರಮುಖ ಚರ್ಚೆಯ ವಿಷಯವಾಗಿದ್ದವು. ಆದರೆ ಟ್ರಂಪ್ ಜತೆಗಿನ ಮೋದಿ ಅವರ ಚೊಚ್ಚಲ ಭೇಟಿಯಲ್ಲಿ ಈ ವಿಷಯ ಚರ್ಚೆಗೆ ಬರಲೇ ಇಲ್ಲ.
ಹಾಗಿದ್ದರೂ ಟ್ರಂಪ್ ಆಡಳಿತ ಈ ಮೊದಲೇ ಭಾರತದ ಮಟ್ಟಿಗೆ ತಾನು ಎಚ್-1ಬಿ ವೀಸಾ ನಿರ್ಬಂಧಗಳ ಪುನರ್ ಪರಿಶೀಲನೆ ಮಾಡುವುದಾಗಿ ಹೇಳಿತ್ತು.
ಪ್ರಧಾನಿ ಮೋದಿ – ಅಧ್ಯಕ್ಷ ಟ್ರಂಪ್ ನಡುವಿನ ಮಾತುಕತೆಯಲ್ಲಿ ಎಚ್-1ಬಿ ವೀಸಾ ಚರ್ಚಿಸಲ್ಪಟ್ಟಿದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಜೈಶಂಕರ್ ಅವರು “ಉಭಯ ನಾಯಕರ ನಡುವೆ ಅನೇಕ ಪ್ರಮುಖ ವಿಷಯಗಳು ಚರ್ಚಿತವಾಗಿವೆ; ವಿವಿಧ ಉದ್ಯಮಗಳು ಹಾಗೂ ಡಿಜಿಟಲ್ ಪಾಲುದಾರಿಕೆಯನ್ನು ಚರ್ಚಿಸಲಾಗಿದೆ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.