DJ, Hate Speech ಇಲ್ಲ: ರಾಹುಲ್ ಮ.ಪ್ರ. ರ‍್ಯಾಲಿಗೆ ಖಡಕ್ ಷರತ್ತು
Team Udayavani, May 23, 2018, 3:52 PM IST
ಭೋಪಾಲ್ : ಮಧ್ಯಪ್ರದೇಶದ ಮಲ್ಹಾರಗಢದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ರ‍್ಯಾಲಿಯನ್ನು ಜೂನ್ 6ರಂದು ನಡೆಸುವುದಕ್ಕೆ ಮಲ್ಹಾರಗಢದ ಉಪ ವಿಭಾಗೀಯ ಅಧಿಕಾರಿ 19 ಶರತ್ತುಗಳನ್ನು ಹಾಕಿದ್ದಾರೆ.
ಈ ಶರತ್ತುಗಳಲ್ಲಿ ಈ ಕೆಳಗಿನವುಗಳು ಮುಖ್ಯವಾಗಿವೆ :
1.ರ‍್ಯಾಲಿಗೆ ಡಿ ಜೆ ಸೌಂಡ್ ಸಿಸ್ಟಮ್ ಬಳಸಕೂಡದು.
2. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಪದಗಳನ್ನು ಭಾಷಣದಲ್ಲಿ ಬಳಸಕೂಡದು.
3. ರ‍್ಯಾಲಿಗಾಗಿ ಹಾಕಲಾಗುವ ಟೆಂಟ್ ಗಾತ್ರ 15 ಅಡಿ ಉದ್ದ 15 ಅಡಿ ಅಗಲ ಮೀರಕೂಡದು.
4. ರ‍್ಯಾಲಿ ನಡೆಯುವ ಸ್ಥಳದಲ್ಲಿ ಸಾಕಷ್ಟು ಪಾರ್ಕಿಂಗ್ ಸ್ಥಳಾವಕಾಶ, ವಿದ್ಯುತ್, ನೀರು, ಅಗ್ನಿ ಶಾಮಕ ವ್ಯವಸ್ಥೆಗಳನ್ನು ಸಂಘಟಕರೇ ಮಾಡಬೇಕು.
5. ಬೆಂಕಿ, ಮಳೆ, ಗುಡುಗು, ಸಿಡಿಲು ಇತ್ಯಾದಿ ನೈಸರ್ಗಿಕ ಪ್ರಕೋಪಗಳಿಂದ ಉದ್ಭವವಾಗುವ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಸೂಕ್ತ ವ್ಯವಸ್ಥೆಯನ್ನು ಸಂಘಟಕರೇ ಮಾಡಬೇಕು.
6. ರಾಲಿಯಿಂದ ಜನ ಹಾಗೂ ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಆಗಕೂಡದು. ರ‍್ಯಾಲಿ ಸ್ಥಳದಲ್ಲಿ ವಾಹನಗಳ ಕಳವು ನಡೆದರೆ ಅದಕ್ಕೆ ಸಂಘಟಕರೇ ಜವಾಬ್ದಾರರು.
7. ರಾಲಿಗೆ ನಿಯೋಜಿಸಲ್ಪಡುವ ಎಲ್ಲ ಸರಕಾರಿ ಅಧಿಕಾರಿಗಳ ಹೆಸರು ಮತ್ತು ಅವರ ಮೊಬೈಲ್ ನಂಬರ್ ಪಟ್ಟಿಯನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ರ‍್ಯಾಲಿಗೆ ಸಾಕಷ್ಟು ಮುನ್ನವೇ ಸಲ್ಲಿಸತಕ್ಕದ್ದು.
8. ರ‍್ಯಾಲಿ ತಾಣದಲ್ಲಿ ದುಷ್ಕರ್ಮಿಗಳಿಂದ ಯಾವುದೇ ಉಪಟಳ, ಅನುಚಿತ ವರ್ತನೆ ನಡೆಯದಂತೆ ಸಂಘಟಕರೇ ನೋಡಿಕೊಳ್ಳಬೇಕು.
9. ಈ ಶರತುಗಳಿಗೆ ಚ್ಯುತಿ ಉಂಟಾದಲ್ಲಿ ರ‍್ಯಾಲಿಗೆ ನೀಡಲಾಗುವ ಅನುಮತಿಯನ್ನು ರದ್ದುಪಡಿಸಲಾಗುವುದು.
10. ರ‍್ಯಾಲಿಗಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮತ್ತು ಮಧ್ಯ ಪ್ರದೇಶ ಹೈಕೋರ್ಟ್ ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು ಸಂಘಟಕರು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್ ಬೆಳ್ಳುಳ್ಳಿ ವಶಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.