ಖಾಸಗಿ ವಾಟ್ಸ್‌ಆ್ಯಪ್ ಸಂದೇಶಗಳ ಮೇಲೆ ಸರ್ಕಾರದ ನಿಗಾ ಇಲ್ಲ
Team Udayavani, Aug 1, 2023, 6:45 AM IST
ನವದೆಹಲಿ: ಜಾಲತಾಣಗಳಲ್ಲಿ ನಕಲಿ ಸುದ್ದಿಗಳಿಗೆ ಕಡಿವಾಣ ಹಾಕಲು ಪಿಐಬಿ ಫ್ಯಾಕ್ಟ್ಚೆಕ್‌ಗೆ ಸರ್ಕಾರ ಅಧಿಕಾರ ನೀಡಿದ ಬೆನ್ನಲ್ಲೇ, ಜನರ ವಾಟ್ಸ್‌ಆ್ಯಪ್ ಚಾಟ್‌ಗಳನ್ನೂ ಸರ್ಕಾರ ಮೇಲ್ವಿಚಾರಣೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.
ಆದರೆ, ಈ ವಿಚಾರ ಕೇವಲ ವದಂತಿ ಅಷ್ಟೇ, ಸರ್ಕಾರವು ಯಾವುದೇ ಜಾಲತಾಣಗಳಲ್ಲಿನ ಖಾಸಗಿ ಸಂದೇಶಗಳ ಮೇಲ್ವಿಚಾರಣೆ ಮಾಡುತ್ತಿಲ್ಲವೆಂದು ಪಿಐಬಿ ಸ್ಪಷ್ಟನೆ ನೀಡಿದೆ. ವಾಟ್ಸ್‌ಆ್ಯಪ್ ಚಾಟ್‌ನಲ್ಲಿ 3 ಬ್ಲೂ ಟಿಕ್ ಇದ್ದರೆ, ಅದನ್ನು ಸರ್ಕಾರ ಗಮನಿಸಿದೆ ಎಂದರ್ಥ.
2 ಬ್ಲೂಟಿಕ್ ಜತೆಗೆ 1 ರೆಡ್ ಟಿಕ್ ಬಂದಲ್ಲಿ ಸರ್ಕಾರ ಸಂದೇಶ ಕಳುಹಿಸಿದವರ ವಿರುದ್ಧ ಕ್ರಮಕ್ಕೆ ಚಿಂತನೆ ನಡೆಸುತ್ತಿದೆ ಹಾಗೂ 2 ರೆಡ್ ಟಿಕ್ ಮತ್ತು 1 ಬ್ಲೂ ಟಿಕ್ ಇದ್ದಲ್ಲಿ ಸಂದೇಶ ಕಳುಹಿಸಿದವರ ಮಾಹಿತಿ ಸಂಗ್ರಹಿಸಿದೆ. 3 ರೆಡ್ ಟಿಕ್ ಬಂದಲ್ಲಿ ಸಂದೇಶ ಕಳುಹಿಸಿದವರಿಗೆ ಸಮನ್ಸ್ ಕಳುಹಿಸಿ, ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಅರ್ಥವೆಂದು ಬರೆದಿದ್ದ ಪೋಸ್ಟರ್ ಒಂದು ಜಾಲತಾಣದಲ್ಲಿ ಇತ್ತೀಚೆಗೆ ಭಾರೀ ವೈರಲ್ ಆಗಿತ್ತು.
ಆದರೆ, ಆ ಪೋಸ್ಟರ್‌ನಲ್ಲಿರುವ ಅಷ್ಟೂ ವಿಚಾರವೂ ಸುಳ್ಳು. ಸರ್ಕಾರ ಯಾವುದೇ ಖಾಸಗಿ ಸಂದೇಶಗಳನ್ನು ಗಮನಿಸುತ್ತಿಲ್ಲ. ಇನ್ನು ವಾಟ್ಸ್‌ಆ್ಯಪ್‌ನಲ್ಲಿ ಇರುವುದೇ ಕೇವಲ 2 ಬಣ್ಣ ಟಿಕ್. ಮೆಸೇಜ್ ಕಳುಹಿಸಿದಾಗ ಬೂದು ಬಣ್ಣದ ಟಿಕ್ ಹಾಗೂ ಅದನ್ನು ಓದಿದ ಬಳಿಕ ನೀಲಿ ಬಣ್ಣದ ಟಿಕ್ ಮಾತ್ರವೇ ಬರಲಿದೆ ಎಂದು ಪಿಐಬಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.