![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Nov 10, 2022, 7:05 AM IST
ಹೊಸದಿಲ್ಲಿ: ಇನ್ನು ಮುಂದೆ ಎಂಬಿಬಿಎಸ್ ಮುಗಿಸಿ ಸ್ನಾತಕೋತ್ತರ ಅಥವಾ ಎಂಎಸ್/ಎಂಡಿ ಸೇರಲು ನೀಟ್- ಪಿಜಿ ಬರೆಯಬೇಕಾಗಿಲ್ಲ. ಇದಕ್ಕೆ ಬದಲಾಗಿ ಎಂಬಿಬಿಎಸ್ ಅಂತ್ಯದಲ್ಲೇ ಎಕ್ಸಿಟ್ ಪರೀಕ್ಷೆ ಬರಲಿದ್ದು, ಅದನ್ನು ಬರೆದು ಉತ್ತೀರ್ಣರಾದರೆ ಸಾಕು, ಅಂಕಗಳ ಆಧಾರದಲ್ಲಿ ಸ್ನಾತಕೋತ್ತರಕ್ಕೆ ಪ್ರವೇಶ ಸಿಗಲಿದೆ.
ಮುಂದಿನ ವರ್ಷದ ಎಪ್ರಿಲ್-ಮೇನಲ್ಲಿ ನೀಟ್-ಪಿಜಿ ನಡೆಯಲಿದೆ. ಎಲ್ಲವೂ ಅಂದುಕೊಂಡಂತಾದರೆ ಇದೇ ಕೊನೆಯ ಪರೀಕ್ಷೆಯಾಗಲಿದೆ. 2023ರ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಎಕ್ಸಿಟ್ ಟೆಸ್ಟ್ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಉನ್ನತ ಮಟ್ಟದ ಸಭೆ ನಡೆಸಿದೆ. ಬಳಿಕ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ನೀಟ್-ಪಿಜಿಯನ್ನು ಸ್ಥಗಿತ ಮಾಡುವ ಮತ್ತು ರಾಷ್ಟ್ರೀಯ ಎಕ್ಸಿಟ್ ಪರೀಕ್ಷೆ ಜಾರಿಗೆ ತರುವ ಬಗ್ಗೆ ಮಾಹಿತಿ ನೀಡಲಾಗಿದೆ.
ಹಾಗೆಯೇ 2023ರ ಡಿಸೆಂಬರ್‌ನಲ್ಲಿ ಈ ರಾಷ್ಟ್ರೀಯ ಎಕ್ಸಿಟ್ ಪರೀಕ್ಷೆ ನಡೆದರೆ 2019-2020ರಲ್ಲಿ ಎಂಬಿಬಿಎಸ್‌ಗೆ ಸೇರಿದ್ದ ವಿದ್ಯಾರ್ಥಿಗಳು ಇದಕ್ಕೆ ಹಾಜರಾಗಬೇಕಾಗುತ್ತದೆ. ಅಲ್ಲದೆ ಎಂಬಿಬಿಎಸ್ ಅಂತಿಮ ವರ್ಷದಲ್ಲಿ ಇದೇ ಮುಖ್ಯವಾದ ಪರೀಕ್ಷೆಯಾಗಿದ್ದು, ಇದರ ಅಂಕಗಳ ಆಧಾರದ ಮೇಲೆ ಎಂಬಿಬಿಎಸ್‌ನ ಫಲಿತಾಂಶವನ್ನೂ ನೀಡಲಾಗುತ್ತದೆ. ಹಾಗೆಯೇ 2024-25ರ ಬ್ಯಾಚ್‌ನ ಸ್ನಾತಕೋತ್ತರಕ್ಕೆ ಸೇರಿಸಿಕೊಳ್ಳಲಾಗುತ್ತದೆ.
ಮೂಲಗಳ ಪ್ರಕಾರ ದಿಲ್ಲಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್) ಈ ಪರೀಕ್ಷೆ ನಡೆಸುತ್ತದೆ.
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.