ಪಾಲಕ್ಕಾಡ್ ಜಿಲ್ಲೆಯ ಮತೂರ್ ಗ್ರಾ.ಪಂ.ನ ವಿಶೇಷ ನಿರ್ಣಯ : ಸರ್, ಮ್ಯಾಡಮ್‌ಗೆ ನಿಷೇಧ
Team Udayavani, Sep 3, 2021, 7:10 AM IST
ಪಾಲಕ್ಕಾಡ್: ದೇಶದಿಂದ ಬ್ರಿಟಿಷರು ತೊರೆದಿದ್ದರೂ, ಅಲ್ಲಲ್ಲಿ ವಸಾಹತು ಶಾಹಿ ವ್ಯವಸ್ಥೆಗಳ ಪ್ರಾತಿನಿಧಿಕ ಅಂಶಗಳು ನಮ್ಮಲ್ಲಿವೆ. ಅದನ್ನು ಮರೆತೇ ಬಿಡುವ ನಿಟ್ಟಿನಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ಮತೂರ್ ಗ್ರಾಮ ಪಂಚಾಯತ್ ಇತ್ತೀಚೆಗೆ ನಿರ್ಣಯ ಕೈಗೊಂಡಿತ್ತು.
ಅದರ ಅನ್ವಯ ಗ್ರಾ.ಪಂ. ಸಿಬಂದಿ, ಅಧಿಕಾರಿಗಳಿಗೆ “ಸರ್’, “ಮ್ಯಾಡಮ್’ ಎಂದು ಕರೆಯುವಂತೆಯೇ ಇಲ್ಲ. ಮತ್ತೂಂದು ಗಮನಾರ್ಹ ವಿಚಾರ ವೆಂದರೆ ಇಂಥ ನಿರ್ಣಯ ಕೈಗೊಂಡ ದೇಶದ ಮೊದಲ ಗ್ರಾ.ಪಂ. ಎಂಬ ಹೆಗ್ಗಳಿಕೆಗೆ ಕೂಡ ಮತೂರ್ ಪಾತ್ರವಾಗಿದೆ.
ಸಿಪಿಎಂನ ಏಳು, ಬಿಜೆಪಿಯ ಒಬ್ಬ ಸದಸ್ಯರು ಇರುವ ಗ್ರಾಮ ಪಂಚಾಯತ್‌ನಲ್ಲಿ ವಸಾಹತು ಶಾಹಿ ಪದ್ಧತಿ ಕೈಬಿಡುವ ಬಗ್ಗೆ ಸಭೆ ನಡೆಸಿ, ಅವಿರೋಧವಾಗಿ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿದ ಉಪಾಧ್ಯಕ್ಷ ಪಿ.ಆರ್.ಪ್ರಸಾದ್ “ಗ್ರಾಮದ ಜನರು ಮತ್ತು ಅಧಿಕಾರಿಗಳ ನಡುವೆ ಸಂಪರ್ಕ ಹೆಚ್ಚಿನ ರೀತಿಯಲ್ಲಿ ಬೆಳೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಪರಸ್ಪರ ನಂಬಿಕೆ ಮತ್ತು ವಿಶ್ವಾಸವನ್ನು ಬೆಳೆಸುವುದೂ ಸೇರಿದೆ. ಸರ್ ಅಥವಾ ಮ್ಯಾಡಮ್ ಎಂದು ಕರೆಯು ವದರಿಂದ ಅಂತರ ಹೆಚ್ಚುತ್ತದೆ. ಅದನ್ನು ನಿವಾರಿಸುವುದು ನಿರ್ಣಯದ ಹಿಂದಿನ ಆಶಯ’ ಎಂದು ಹೇಳಿದ್ದಾರೆ.
ನಿರ್ಣಯ ಅಂಗೀಕಾರವಾದ ಬಳಿಕ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಈ ಬಗ್ಗೆ ನೋಟಿಸ್ ಹಾಕಲಾಗಿದೆ. ಜತೆಗೆ ಅದರಲ್ಲಿ ಪಂಚಾಯತ್‌ನಲ್ಲಿ ಇರುವ ಅಧಿಕಾರಿ ಮತ್ತು ಅವರ ಹುದ್ದೆಯ ವಿವರನ್ನೂ ಪ್ರಕಟಿಸಲಾಗಿದೆ. ಹೊಸ ನಿಯಮ ಪ್ರಕಾರ ಜನರು ಅಧಿಕಾರಿಗಳನ್ನು “ಅಣ್ಣಾ’, ಮಹಿಳಾ ಅಧಿಕಾರಿಗಳನ್ನು “ಅಕ್ಕಾ’ ಎಂದು ಕರೆಯಲೂ ಅವಕಾಶ ಇದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ
MUST WATCH
ಹೊಸ ಸೇರ್ಪಡೆ
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.