ಯಾವುದೇ ಮುಸ್ಲಿಂ ಪುರುಷ 3 ಮಹಿಳೆಯರನ್ನು ಮದುವೆಯಾಗಬಾರದು: ಅಸ್ಸಾಂ ಸಿಎಂ
Team Udayavani, Jun 2, 2022, 4:57 PM IST
ನವದೆಹಲಿ: ಯಾವುದೇ ಮುಸ್ಲಿಂ ಪುರುಷರು ಮೂವರ ಬದಲಿಗೆ ಒಬ್ಬ ಮಹಿಳೆಯೊಂದಿಗೆ ವಿವಾಹವಾಗಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ, ಪತ್ನಿಗೆ ಆಸ್ತಿಯಲ್ಲಿ ಸಮಾನ ಪಾಲು ನೀಡುವಂತೆ ಪ್ರತಿಪಾದಿಸುತ್ತಿರುವಾಗ, ಯಾವುದೇ ಮುಸ್ಲಿಂ ಪುರುಷ 3 ಮಹಿಳೆಯರನ್ನು ಮದುವೆಯಾಗಬಾರದು ಎಂದು ಅಸ್ಸಾಂ ಸರ್ಕಾರದ ನೀತಿ ಸ್ಪಷ್ಟವಾಗಿದೆ. ತಲಾಖ್ ನೀಡಬೇಡಿ, ಕಾನೂನುಬದ್ಧವಾಗಿ ವಿಚ್ಛೇದನ ನೀಡಿ. ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಪಾಲು ನೀಡಬೇಕು. ಆಸ್ತಿಯಲ್ಲಿ 50% ಪಾಲನ್ನು ಹೆಂಡತಿಗೆ ನೀಡಿ. ಸರ್ಕಾರ ಮತ್ತು ಸಾಮಾನ್ಯ ಮುಸ್ಲಿಮರ ದೃಷ್ಟಿಕೋನಗಳು ಒಂದೇ ಆಗಿವೆ ಎಂದಿದ್ದಾರೆ.
“ಈಶಾನ್ಯ ವಿದ್ಯಾರ್ಥಿಗಳ ವಿರುದ್ಧದ ತಾರತಮ್ಯ” ಇಳಿಕೆಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನ್ನಣೆ ನೀಡುತ್ತಾ, ಕಳೆದ ಕೆಲವು ವರ್ಷಗಳಲ್ಲಿ ಈ ಪ್ರದೇಶಕ್ಕೆ ಪ್ರಧಾನಿಯವರ ಪ್ರಭಾವದಿಂದಾಗಿ ಪ್ರಗತಿಯಾಗಿದೆ , ವಿದ್ಯಾರ್ಥಿಗಳ ಮೇಲಿನ ಇಂತಹ ತಾರತಮ್ಯವು ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.