Kolkata ವೈದ್ಯೆ ಪ್ರಕರಣ:ಪ್ರಮುಖ ಆರೋಪಿಯ ನಾರ್ಕೊ ಟೆಸ್ಟ್ ಗೆ ಅನುಮತಿ ನಿರಾಕರಿಸಿದ ಕೋರ್ಟ್
ಏನಿದು ನಾರ್ಕೊ ಟೆಸ್ಟ್? ಈ ಪರೀಕ್ಷೆ ನಡೆಸುವುದು ಹೇಗೆ?
Team Udayavani, Sep 13, 2024, 5:26 PM IST
ಹೊಸದಿಲ್ಲಿ:ಕೋಲ್ಕತಾದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಹ*ತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಸಂಜಯ್ ರಾಯ್ ಗೆ ನಾರ್ಕೊ ಅನಾಲಿಸಿಸ್ ಪರೀಕ್ಷೆ ನಡೆಸಲು ಕೋರ್ಟ್ ಶುಕ್ರವಾರ(ಸೆ 13) ಅವಕಾಶ ನಿರಾಕರಿಸಿದೆ.
ಸಿಬಿಐ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಸಂಜಯ್ ರಾಯ್ ನ ನಾರ್ಕೊ ಅನಾಲಿಸಿಸ್ ಪರೀಕ್ಷೆ ನಡೆಸಲು ಅವಕಾಶ ಕೋರಿತ್ತು, ಕೋಲ್ಕತಾದ ಕೋರ್ಟ್ ನಿರಾಕರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಆಗಸ್ಟ್ 10 ರಂದು ಸಂಜಯ್ ರಾಯ್ ಬಂಧನಕ್ಕೊಳಗಾಗಿದ್ದ. ಆತನಿಗೆ ಕೋರ್ಟ್ ಜಾಮೀನು ನಿರಾಕರಿಸಿತ್ತು.
ಏನಿದು ನಾರ್ಕೊ ಟೆಸ್ಟ್?
ಆರೋಪಿಯೊಬ್ಬನ ದೇಹದೊಳಗೆ ಸೋಡಿಯಂ ಪೆಂಟೋಥಾಲ್ ಎಂಬ ದ್ರವವನ್ನು ಇಂಜೆಕ್ಟ್ ಮಾಡಿ, ಆತನ ಜ್ಞಾನತಪ್ಪಿಸಿ ಬಳಿಕ ಅವನಿಂದ ಸತ್ಯ ಹೊರಬೀಳಿಸುವ ಕ್ರಿಯೆ ಇದು. ಈ ಸೋಡಿಯಂ ಪೆಂಟೋಥಾಲ್‌ಗೆ ಟ್ರಾಥ್ ಸೆರಮ್ ಎಂದೂ ಕರೆಯುತ್ತಾರೆ. ವ್ಯಕ್ತಿಯೊಬ್ಬ ಸ್ವಯಂ ಜ್ಞಾನ ಕಳೆದುಕೊಂಡಾಗ ಆತ ಹಿಪ್ನೋಟಿಕ್ ಮೋಡ್‌ಗೆ ಹೋಗುತ್ತಾನೆ. ಆಗ ತನಿಖಾಧಿಕಾರಿಗಳು ಮುಕ್ತವಾಗಿ ಪ್ರಶ್ನೆ ಕೇಳಿ ಉತ್ತರ ಪಡೆಯಬಹುದು.
ಈ ಪರೀಕ್ಷೆ ನಡೆಸುವುದು ಹೇಗೆ?
ಒಬ್ಬ ಮಾನಸಿಕ ತಜ್ಞ, ತನಿಖಾಧಿಕಾರಿ ಅಥವಾ ಫಾರೆನ್ಸಿಕ್ ತಜ್ಞರೊಬ್ಬರ ಉಪಸ್ಥಿತಿ ಯಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗೆ ಕೋರ್ಟ್‌ನ ಒಪ್ಪಿಗೆ ಬೇಕು,ವೈದ್ಯಕೀಯವಾಗಿಯೂ ಫಿಟ್ ಆಗಿರಬೇಕು. ಇದನ್ನು ಪರಿಶೀಲಿಸಿ, ಸೋಡಿಯಂ ಪೆಂಟೋಥಾಲ್ ಅನ್ನು ಆತನ ದೇಹಕ್ಕೆ ಚುಚ್ಚಲಾಗುತ್ತದೆ. ಎಷ್ಟು ಡೋಸೇಜ್ ನೀಡಬೇಕು ಎಂಬುದು ಆರೋಪಿಯ ವಯಸ್ಸು, ಲಿಂಗ ಮತ್ತು ಇತರ ವೈದ್ಯಕೀಯ ಸ್ಥಿತಿ ನೋಡಿ ನಿರ್ಧಾರ ಮಾಡಲಾಗುತ್ತದೆ.
ಡೋಸೇಜ್ ಹೆಚ್ಚು ಕಡಿಮೆಯಾದರೆ?
ಒಂದು ವೇಳೆ ಡೋಸೇಜ್ ಹೆಚ್ಚು ಕಡಿಮೆಯಾದರೆ ಆರೋಪಿ ಅಥವಾ ರೋಗಿ ಕೋಮಾಗೆ ಜಾರಬಹುದು,
ಸಾವೇ ಸಂಭವಿಸಬಹುದು.
ಇದು ನಿಖರವೇ?
ನಾರ್ಕೊ ಅನಾಲಿಸಿಸ್ ಟೆಸ್ಟ್ ಹೆಚ್ಚು ನಿಖರ ಎಂಬುದು ದೃಢ ಪಟ್ಟಿಲ್ಲ. ಕೆಲವೊಮ್ಮೆ ಆರೋಪಿ ಸುಳ್ಳನ್ನೂ ಹೇಳಿರುತ್ತಾನೆ.
ಭಾರತದಲ್ಲಿ ನಾರ್ಕೊ ಟೆಸ್ಟ್
ನಾರ್ಕೊ ಟೆಸ್ಟ್ ಅನ್ನು 2002ರ ಗೋಧ್ರಾ ಪ್ರಕರಣದ ಆರೋಪಿಗಳಿಗೆ ಮೊದಲು ಮಾಡಲಾಯಿತು. ಬಳಿಕ 2003ರ ತೆಲಗಿ ನಕಲಿ ಛಾಪಾ ಕಾಗದ ಹಗರಣದಲ್ಲಿ ಅಬ್ದುಲ್ ಕರೀಂ ತೆಲಗಿಗೂ ಮಾಡಲಾಗಿತ್ತು. ಗುಜರಾತ್‌ನ ನಿಥಾರಿ ಪ್ರಕರಣದ ಆರೋಪಿಗಳಿಗೂ ನಾರ್ಕೊ ಟೆಸ್ಟ್ ನಡೆಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Wikipedia: ಪಕ್ಷಪಾತ, ತಪ್ಪು ಮಾಹಿತಿ ದೂರು: ವಿಕಿಪೀಡಿಯಾಗೆ ಕೇಂದ್ರದಿಂದ ನೋಟಿಸ್
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.