ಶ್ರಮಿಕ ರೈಲಿಗೆ ಯಾರ ಅಪ್ಪಣೆಯೂ ಬೇಕಿಲ್ಲ: ರೈಲ್ವೇ ಸಚಿವಾಲಯದ ಹೊಸ ಆದೇಶ


Team Udayavani, May 20, 2020, 11:49 AM IST

ಶ್ರಮಿಕ ರೈಲಿಗೆ ಯಾರ ಅಪ್ಪಣೆಯೂ ಬೇಕಿಲ್ಲ: ರೈಲ್ವೇ ಸಚಿವಾಲಯದ ಹೊಸ ಆದೇಶ

ವಿಜಯವಾಡದಲ್ಲಿ ವಲಸೆ ಕಾರ್ಮಿಕರು ತಮ್ಮ ಊರು ಸೇರಲು ಲಾರಿಯನ್ನೇರುತ್ತಿರುವುದು.

ಹೊಸದಿಲ್ಲಿ: ವಲಸೆ ಕಾರ್ಮಿಕರ ಪ್ರಯಾಣಕ್ಕೆ ಶ್ರಮಿಕ ವಿಶೇಷ ರೈಲುಗಳ ಸಂಚಾರಕ್ಕೆ ರಾಜ್ಯಗಳ ಅನುಮತಿ ಪಡೆಯಬೇಕಾಗಿಲ್ಲ. ಹೀಗೆಂದು ರೈಲ್ವೇ ಸಚಿವಾಲಯ ಮಂಗಳವಾರ ಸ್ಪಷ್ಟನೆ ನೀಡಿದೆ. ವಿಶೇಷ ರೈಲುಗಳ ಸಂಚಾರಕ್ಕೆ ಪಶ್ಚಿಮ ಬಂಗಾಲ, ಝಾರ್ಖಂಡ್‌, ಛತ್ತೀಸ್‌ಘಡ ಸರ್ಕಾರಗಳು ಒಪ್ಪಿಗೆ ಸೂಚಿಸುವಲ್ಲಿ ವಿಳಂಬ ಮಾಡುತ್ತಿವೆ ಎಂದು ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಹೇಳಿಕೆಯಿಂದ ವಿವಾದ ಉಂಟಾಗಿದ್ದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಹೊರಬಿದ್ದಿದೆ. ಇದಕ್ಕಿಂತ ಮೊದಲು ಕೇಂದ್ರ ಗೃಹ ಸಚಿವಾಲಯ ವಲಸೆ ಕಾರ್ಮಿಕರು ಸಂಚರಿಸುವ ಶ್ರಮಿಕ್‌ ವಿಶೇಷ ರೈಲುಗಳ ಸಂಚಾರದ ಬಗ್ಗೆ ನೂತನ ಸಾಮಾನ್ಯ ಕಾರ್ಯಾಚರಣೆ ಶಿಷ್ಟಾಚಾರ (ಎಸ್‌ಒಪಿ)ವನ್ನು ಬಿಡುಗಡೆ ಮಾಡಲಾಯಿತು. ಅದರ ಪ್ರಕಾರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮಲ್ಲಿಂದ ವಲಸೆ ಕಾರ್ಮಿಕರನ್ನು ಕಳುಹಿಸುವ ಮತ್ತು ಆಗಮಿಸುವವರಿಗೆ ವೈದ್ಯಕೀಯ ಪರೀಕ್ಷೆ, ಪ್ರಯಾಣ, ಕ್ವಾರಂಟೈನ್‌ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳನ್ನು ಮತ್ತು ಸಂಸ್ಥೆಗಳನ್ನು ನಿಯುಕ್ತಿ ಗೊಳಿಸಬೇಕು ಎಂದು ಎಸ್‌ಒಪಿಯಲ್ಲಿ ಸೂಚಿಸಲಾಗಿದೆ.

ಮನವಿ ಸಲ್ಲಿಸಿ: ಪರಿಷ್ಕೃತ ಎಸ್‌ಒಪಿ ಜಾರಿಗೊಳಿಸುವ ಮೊದಲು (ಮೇ 18) ರಾಜ್ಯಗಳು ಅಗತ್ಯ ಬಿದ್ದರೆ ಹೆಚ್ಚುವರಿ ವಿಶೇಷ ರೈಲುಗಳ ಸಂಚಾರಕ್ಕೆ ಮನವಿ ಸಲ್ಲಿಸ ಬಹುದು ಎಂದು ಸೂಚಿಸಲಾಗಿತ್ತು. ಆಯಾ ಜಿಲ್ಲಾಡಳಿತಗಳ ಮೂಲಕವೇ ಹೆಚ್ಚುವರಿ ರೈಲಿನ ಬಗ್ಗೆ ಕೋರಿಕೆ ಸಲ್ಲಿಸಲು ಅವಕಾಶ ಇದೆ ಎಂದು ಗೃಹ ಕಾರ್ಯದರ್ಶಿ ಅಜಯ ಭಲ್ಲಾ ಪತ್ರ ಬರೆದಿದ್ದರು.

ಜೂ.1ರಿಂದ 200 ವಿಶೇಷ ರೈಲು
ಇದೇ ವೇಳೆ ಹಾಲಿ ಇರುವ ರೈಲುಗಳಲ್ಲದೆ ಜೂನ್‌ನಿಂದ 200 ವಿಶೇಷ ರೈಲುಗಳನ್ನು ಪ್ರತಿ ದಿನ ಓಡಿಸಲಾಗುತ್ತದೆ. ಇದು ಹವಾನಿಯಂತ್ರಿತವಲ್ಲದ ರೈಲುಗಳಾಗಿದ್ದು, ಶೀಘ್ರವೇ ಅವುಗಳಿಗಾಗಿ ಆನ್‌ಲೈನ್‌ನಲ್ಲಿ ಬುಕಿಂಗ್‌ ಶುರು ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.

ವಿವಿಧೆಡೆ 15 ಕಾರ್ಮಿಕರ ಸಾವು
ಮಂಗಳವಾರ ದೇಶದ ಮೂರು ಕಡೆ ನಡೆದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ 15 ಕಾರ್ಮಿಕರು ಮೃತ ಪಟ್ಟು, ಹಲವರು ಗಾಯಗೊಂಡಿದ್ದಾರೆ. ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರನ್ನು ಹೊತ್ತಿದ್ದ ಟ್ರಕ್‌ ಮತ್ತು ಬಸ್ಸೊಂದರ ನಡುವೆ ಮುಖಾಮುಖೀ ಢಿಕ್ಕಿ ಸಂಭವಿಸಿ, 9 ಕಾರ್ಮಿಕರು ಸ್ಥಳದಲ್ಲೇ ಅಸುನೀಗಿದ್ದಾರೆ. ಇವರು 6 ದಿನಗಳ ಹಿಂದೆ ಕೋಲ್ಕತಾದಿಂದ ಬಿಹಾರಕ್ಕೆ ಸೈಕಲ್‌ ಮೂಲಕ ಪ್ರಯಾಣ ಆರಂಭಿಸಿದ್ದರು.

ಉತ್ತರಪ್ರದೇಶದ ಬಂದಾದಲ್ಲಿ ವಲಸೆ ಕಾರ್ಮಿಕ ರನ್ನು ಹೊತ್ತೂಯ್ಯುತ್ತಿದ್ದ ಟ್ರಕ್‌ವೊಂದು ಜಾನ್ಸಿ- ಮಿರ್ಜಾಪುರ ಹೆದ್ದಾರಿಯಲ್ಲಿ ಉರುಳಿಬಿದ್ದ ಕಾರಣ, ಟ್ರಕ್‌ ನಲ್ಲಿದ್ದ ಮೂವರು ಮಹಿಳೆಯರು ಮೃತಪಟ್ಟು, ಇತರೆ 17 ಮಂದಿ ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ಯಾವತ್ಮಾಲ್‌ ಜಿಲ್ಲೆಯಲ್ಲಿ ಮಂಗಳವಾರ ಕಾರ್ಮಿಕರನ್ನು ಹೊತ್ತೂಯ್ಯುತ್ತಿದ್ದ ಬಸ್‌, ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಟ್ರಕ್‌ ವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಮೂವರು ಕಾರ್ಮಿಕರು ಹಾಗೂ ಬಸ್‌ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬಸ್‌ನಲ್ಲಿದ್ದ 22 ಮಂದಿ ಗಾಯಗೊಂಡಿದ್ದಾರೆ. ಕಾರ್ಮಿಕರೆಲ್ಲರೂ ಶ್ರಮಿಕ ರೈಲು ಮೂಲಕ ಝಾರ್ಖಂಡ್‌ ಗೆ ತೆರಳುವವರಿದ್ದರು.

ಹೊಸ ಶಿಷ್ಟಾಚಾರಗಳೇನು?
ರಾಜ್ಯ ಹಾಗೂ ರೈಲ್ವೇ ಇಲಾಖೆ ಪರಸ್ಪರ ಸಮನ್ವಯ ಸಾಧಿಸಿ ಹೆಚ್ಚುವರಿ ರೈಲುಗಳನ್ನು ನಿಯೋಜಿಸಬೇಕು.
ಆಹಾರ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಸ್ಯಾನಿಟೈಸೇಷನ್‌ ಅಗತ್ಯಗಳು ಮತ್ತು ವಿಶ್ರಾಂತಿ ಸ್ಥಳಗಳ ವ್ಯವಸ್ಥೆ ಮಾಡಬೇಕು.
ರೈಲುಗಳು ಮತ್ತು ಬಸ್ಸುಗಳು ಹೊರಡುವ ಸಮಯದ ಬಗ್ಗೆ ಸ್ಪಷ್ಟತೆ ಇರಬೇಕು.
ಪ್ರಯಾಣಿಕರು ಹೋಗಲಿರುವ ಸ್ಥಳ ಮತ್ತು ವಿಳಾಸದ ವಿವರ ಸಂಗ್ರಹಿಸಬೇಕು.
ಕಾಲ್ನಡಿಗೆಯಲ್ಲಿ ಹೊರಟ ವಲಸಿಗರು ಹತ್ತಿರದ ವಿಶ್ರಾಂತಿ ಸ್ಥಳ, ರೈಲು ಅಥವಾ ಬಸ್‌ ನಿಲ್ದಾಣಕ್ಕೆ ಹೋಗುವಂತೆ ಜಿಲ್ಲಾಡಳಿತ ಮಾರ್ಗದರ್ಶನ ನೀಡಬೇಕು.
ವಲಸಿಗರ ಬಸ್ಸುಗಳು ಗಡಿ ಮೂಲಕ ರಾಜ್ಯ ಪ್ರವೇಶಿಸಲು ಅಲ್ಲಿನ ಆಡಳಿತ ಅನುಮತಿ ನೀಡಬೇಕು.
ಕಾರ್ಮಿಕರು ಉಳಿದುಕೊಳ್ಳುವ ಸ್ಥಳಗಳಲ್ಲಿ ಅಗತ್ಯ ಆಹಾರ ಮತ್ತು ಆರೋಗ್ಯ ಕಾಳಜಿ ವ್ಯವಸ್ಥೆ ಮಾಡಬೇಕು.

1565 ಮೇ 1ರಿಂದ ಓಡಿರುವ ಶ್ರಮಿಕ ರೈಲುಗಳು
20 ಲಕ್ಷ- ತವರಿಗೆ ಮರಳಿರುವ ವಲಸೆ ಕಾರ್ಮಿಕರು

ಟಾಪ್ ನ್ಯೂಸ್

1-ullal

Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

FRAUD-1

ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್‌’ ತೆರೆಯದಂತೆ ಪೊಲೀಸರ ಸೂಚನೆ

1-sun

Goa; ಸನ್ ಬರ್ನ್ ಫೆಸ್ಟಿವಲ್ ನಲ್ಲಿ ಕುಸಿದು ಬಿದ್ದು ಯುವಕ ಸಾ*ವು!

Jagdish-Shetter

Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್

1-ewewq

Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sun

Goa; ಸನ್ ಬರ್ನ್ ಫೆಸ್ಟಿವಲ್ ನಲ್ಲಿ ಕುಸಿದು ಬಿದ್ದು ಯುವಕ ಸಾ*ವು!

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು

PM Mod

PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು

ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Jhansi: Teacher watched obscene video in class; student who noticed was beaten up

Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ullal

Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

FRAUD-1

ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್‌’ ತೆರೆಯದಂತೆ ಪೊಲೀಸರ ಸೂಚನೆ

de

Malpe: ತೆಂಕನಿಡಿಯೂರು; ತೀವ್ರ ಅಸ್ವಸ್ಥಗೊಂಡ ವ್ಯಕ್ತಿ ಸಾವು

4

Udupi: ಗಾಂಜಾ ಮಾರಾಟ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.