ಲವ್ ಜಿಹಾದ್ ಕೇಸ್ ಎನ್‌ಐಎ ಬೇಕಾಗಿಲ್ಲ
Team Udayavani, Oct 8, 2017, 6:50 AM IST
ನವದೆಹಲಿ: ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಕೇರಳದ “ಲವ್ ಜಿಹಾದ್’ ಪ್ರಕರಣ ಇದೀಗ ಮತ್ತೂಂದು ತಿರುವು ಪಡೆದಿದೆ. ಹಿಂದೂ ಯುವತಿಯೊ ಬ್ಬಳು ಇಸ್ಲಾಂಗೆ ಮತಾಂತರವಾಗಿ ಮುಸ್ಲಿಂ ಯುವಕನನ್ನು ಮದುವೆಯಾಗಿರುವ ಕುರಿತು ಎನ್‌ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ತನಿಖೆ ಅಗತ್ಯವಿಲ್ಲ ಎಂದು ಕೇರಳ ಸರ್ಕಾರ ಶನಿವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಹೇಳಿದೆ.
ಪ್ರಕರಣದ ತನಿಖೆಯನ್ನು ಕೇರಳ ಪೊಲೀಸರು ಸಮರ್ಥವಾಗಿಯೇ ನಡೆಸುತ್ತಿದ್ದಾರೆ. ಇದನ್ನು ಎನ್‌ಐಎಗೆ ಕೊಡುವ ಅಗತ್ಯವಿಲ್ಲ ಎಂದಿದೆ ಸರ್ಕಾರ. ಪ್ರಕರಣ ವನ್ನು ಎನ್‌ಐಎಗೆ ವಹಿಸುವ ನ್ಯಾಯಾಲಯದ ಆದೇಶವನ್ನು ಪಾಲಿಸಲು ನಾವು ಸಿದ್ಧರಿದ್ದೇವೆ. ಆದರೆ, ರಾಜ್ಯ ಪೊಲೀಸರ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದನ್ನು ಎನ್‌ಐಎಗೆ ವಹಿಸಬೇಕಾಗಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಸರ್ಕಾ ರದ ನಡೆಯನ್ನು ಕೇರಳದ ಬಿಜೆಪಿ ಘಟಕ ಟೀಕಿಸಿದೆ. ಕೇರಳ ಸರ್ಕಾರ ಭಯೋತ್ಪಾದಕ ಸಂಘಟನೆಗಳ ಕುರಿತು ಮೃದು ಧೋರಣೆ ಹೊಂದಿದೆ ಎಂದಿದೆ. ಅಲ್ಲದೇ ಈ ಪ್ರಕರಣ ವನ್ನು ಎನ್‌ಐಎಗೆ ಕೊಡಲು ಹಿಂದೇಟು ಹಾಕುತ್ತಿರು ವುದಕ್ಕೆ ನಿರ್ದಿಷ್ಟ ಕಾರಣ ನೀಡಬೇಕು ಎಂದು ಪಕ್ಷದ ಅಧ್ಯಕ್ಷ ಕಮ್ಮಾನಮ್ ರಾಜಶೇಖರನ್ ಆಗ್ರಹಿಸಿದ್ದಾರೆ.
ಈ ನಡುವೆ, ವಿವಾದದ ಕೇಂದ್ರ ಬಿಂದು ವಾಗಿರುವ ಯುವತಿ ಹಾದಿಯಾಗೆ ರಕ್ಷಣೆ ನೀಡಬೇಕೆಂದು ಮಹಿಳಾ ಸಂಘಟನೆಗಳು, ಬರಹಗಾರರು ಸಿಎಂ ವಿಜಯನ್‌ಗೆ ಪತ್ರ ಬರೆದಿದ್ದಾರೆ. ವಯಸ್ಕ ಮಹಿಳೆಯನ್ನು ಬಂಧನ ದಲ್ಲಿರಿ ಸುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅವರು ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.