ಹೊಸ ರೂಪಾಂತರಿ ಪತ್ತೆಯಾಗಿಲ್ಲ: ಮುನ್ನೆಚ್ಚರಿಕೆ ಮರೆತಿದ್ದರಿಂದ ಸೋಂಕು ಹೆಚ್ಚಿದೆ
ನಾಗರಿಕರಿಗೆ ತಜ್ಞರ ಸ್ಪಷ್ಟನೆ
Team Udayavani, Jun 12, 2022, 7:20 AM IST
ನೋಯ್ಡಾದಲ್ಲಿ ಮಹಿಳೆಯೊಬ್ಬರಿಗೆ ಕೊರೊನಾ ಲಸಿಕೆ ನೀಡಲಾಯಿತು.
ಹೊಸದಿಲ್ಲಿ: ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ ಯಾದರೂ ಜನರು ಭಯ ಪಡಬೇಕಿಲ್ಲ ಎಂದು ಭಾರತೀಯ ತಜ್ಞರು ಶನಿವಾರ ತಿಳಿಸಿದ್ದಾರೆ. ಹೆಚ್ಚು ಗಂಭೀರವೆನಿಸುವಂತಹ ಯಾವುದೇ ಹೊಸ ರೂಪಾಂತರಿ ಪತ್ತೆಯಾಗಿಲ್ಲ ಹಾಗೆಯೇ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸೋಂಕು ಏರಿಕೆಯಾಗುತ್ತಿ ರುವುದರಿಂದ ಜನರು ಆತಂಕಕ್ಕೀಡಾಬೇಕಾಗಿಲ್ಲ ಎಂದು ತಿಳಿಸಲಾಗಿದೆ.
ಬೇಸಗೆ ರಜೆಯ ಪ್ರಯುಕ್ತ ಪ್ರವಾಸಗಳು ಹೆಚ್ಚಾಗಿವೆ. ಜನರು ಕೊರೊನಾ ಮುನ್ನೆಚ್ಚರಿಕ ನಿಯಮಗಳನ್ನು ಮರೆತಿದ್ದಾರೆ. ಮುನ್ನೆಚ್ಚರಿಕ ಡೋಸ್ ಲಸಿಕೆಯ ಬಗ್ಗೆಯೂ ಹೆಚ್ಚು ಗಮನ ಹರಿಸಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಸೋಂಕು ಹೆಚ್ಚಳವಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಕೇರಳದ 7 ಸೇರಿ ಒಟ್ಟು ದೇಶದ 17 ಜಿಲ್ಲೆಗಳಲ್ಲಿ ವಾರದ ಪಾಸಿಟಿವಿಟಿ ಪ್ರಮಾಣ ಶೇ.10ಕ್ಕಿಂತ ಅಧಿಕವಿದೆ. ಹಾಗೆ ಕೇರಳದ 7 ಸೇರಿ ಒಟ್ಟು 24 ಜಿಲ್ಲೆಗಳಲ್ಲಿ ಶೇ.5-10ರಷ್ಟಿದೆ. ನಮ್ಮಲ್ಲಿ ಆಅ.2 ಉಪ ರೂಪಾಂತರಿ ಜತೆ ಆಅ.4 ಮತ್ತು ಆಅ.5 ಉಪ ರೂಪಾಂತರಿಗಳು ಇವೆ. ಇವು ಒಮಿಕ್ರಾನ್‌ಗಿಂತ ಬೇಗ ಹರಡಬಲ್ಲಂತ ರೂಪಾಂತರಿಗಳು ಎಂದು ಅವರು ಮಾಹಿತಿ ಕೊಟ್ಟಿದ್ದಾರೆ.
ಎರಡು ದಿನಗಳ ಅವಧಿಯಲ್ಲಿ ದೇಶಾದ್ಯಂತ ಪತ್ತೆಯಾದ ಕೊರೊನಾ ಸೋಂಕು ಪ್ರಕರಣಗಳು ಮತ್ತೂಂದು ಅಲೆಯ ಆತಂಕವನ್ನು ಹೆಚ್ಚಿಸಿದೆ. ಗುರುವಾರದಿಂದ ಶುಕ್ರವಾರಕ್ಕೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ 7 ಸಾವಿರದ ಗಡಿ ದಾಟಿ ದ್ದರೆ, ಶುಕ್ರವಾರದಿಂದ ಶನಿವಾರಕ್ಕೆ 24 ಗಂಟೆ ಗಳಲ್ಲಿ ಇದು 8 ಸಾವಿರದ ಗಡಿ ದಾಟಿದೆ. ಈ ಅವಧಿ ಯಲ್ಲಿ ದೇಶಾದ್ಯಂತ 8,329 ಮಂದಿಗೆ ಸೋಂಕು ದೃಢಪಟ್ಟಿದ್ದು, 10 ಮಂದಿ ಸಾವಿ ಗೀಡಾಗಿದ್ದಾರೆ. ಇದರಿಂದಾಗಿ ಸಕ್ರಿಯ ಪ್ರಕರಣ ಗಳ ಸಂಖ್ಯೆ 40 ಸಾವಿರ ದಾಟಿದೆ. ದೈನಂದಿನ ಪಾಸಿ ಟಿವಿಟಿ ದರ ಶೇ. 2.41ಕ್ಕೆ ತಲುಪಿದೆ. ಚೆನ್ನೈ ಮತ್ತು ಮುಂಬಯಿಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಪ್ರಮಾಣ ಹೆಚ್ಚಿದೆ. ಆದರೆ ಸಾವಿನ ಸಂಖ್ಯೆ ಕಡಿಮೆಯಿ ರುವುದು ಸಮಾಧಾನಕರ ಸಂಗತಿ ಎಂದು ತಜ್ಞರು ಹೇಳಿದ್ದಾರೆ.
ಮುಂಬಯಿಯಲ್ಲಿ ಹೆಚ್ಚಿದ ಕೇಸ್: ಮುಂಬಯಿ ಯಲ್ಲಿ ಇತ್ತೀಚೆಗೆ ಕೊರೊನಾ ಪ್ರಕರಣಗಳು ಹೆಚ್ಚಾ ಗುತ್ತಿದ್ದು, ಶನಿವಾರ ಅಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,047ಕ್ಕೆ ಮುಟ್ಟಿದೆ. ಅಲ್ಲಿಗೆ ಹಲವು ತಿಂಗಳುಗಳ ಅನಂತರ ಮುಂಬಯಿಯಲ್ಲಿನ ಸೋಂಕಿತರ ಸಂಖ್ಯೆ ಐದಂಕಿಗೆ ಮುಟ್ಟಿದೆ. ಶನಿವಾರ ಒಂದೇ ದಿನ ಸಂಜೆಯ ಹೊತ್ತಿಗೆ 1,745 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದೇ ವೇಳೆ, ಶುಕ್ರವಾರ- ಶನಿವಾರ ನಡುವಿನ 24 ಗಂಟೆಗಳಲ್ಲಿ 888 ಮಂದಿ ಚೇತರಿಕೆ ಕಂಡಿದ್ದಾರೆ.
ಬೂಸ್ಟರ್ ಲಸಿಕೆ ಪಡೆಯಲು ನಿರಾಸಕ್ತಿ
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ದೇಶದಲ್ಲಿ ಕೊರೊನಾ ಮುನ್ನೆ ಚ್ಚರಿಕ ಅಥವಾ ಬೂಸ್ಟರ್ ಡೋಸ್ ಪಡೆಯಲು ದೊಡ್ಡ ದೊಡ್ಡ ರಾಜ್ಯಗಳ ಜನತೆ ನಿರಾಸಕ್ತಿ ವಹಿಸುತ್ತಿರುವ ಮಾಹಿತಿ ಹೊರಬಿದ್ದಿದೆ. ಎ. 10ರಿಂದ ಅರ್ಹರಿಗೆ ಬೂಸ್ಟರ್ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಜನವರಿಯಲ್ಲಿ ಒಮಿಕ್ರಾನ್ ಕಾಣಿಸಿಕೊಂಡು ಅನಂತರ ಹೆಚ್ಚು ಅಪಾಯ ಮಾಡದೇ ಕಡಿಮೆ ಯಾಗಿತ್ತು. ಇದೆಲ್ಲದರ ಜತೆಗೆ ಕೊರೊನಾ ಬಂದು ಹೋದವರಿಗೆ ಬೂಸ್ಟರ್ ಡೋಸ್ ಬೇಕಾಗಿಲ್ಲ ಎಂಬ ಜನರಲ್ಲಿನ ನಂಬಿಕೆಯಿಂದಾಗಿ ಜನ ಲಸಿಕೆ ಪಡೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಮೊದಲ ಲಸಿಕೆಯನ್ನು ಶೇ.110.43, ಎರಡನೇ ಲಸಿಕೆಯನ್ನು ಶೇ. 106.88 ಮತ್ತು ಬೂಸ್ಟರ್ ಲಸಿಕೆಯನ್ನು ಶೇ.5.30ರಷ್ಟು ಮಂದಿ ಮಾತ್ರ ಪಡೆದಿದ್ದಾರೆ. ದೊಡ್ಡ ರಾಜ್ಯ ಗಳಿಗೆ ಹೋಲಿಕೆ ಮಾಡಿದರೆ, ಪುಟ್ಟ ರಾಜ್ಯಗಳೇ ಹೆಚ್ಚು ಪ್ರಮಾಣದಲ್ಲಿ ಲಸಿಕೆ ಪಡೆದಿವೆ.
ಅಮೆರಿಕದಲ್ಲಿ ಭಾರತದ ಆರ್ಥಿಕತೆ ಪ್ರಸ್ತಾಪ
ಕೊರೊನಾದ ಎರಡು ಅಲೆಗಳಿಗೆ ತುತ್ತಾಗಿ ದ್ದರೂ ಆನಂತರದ ಕಾಲಘಟ್ಟದಲ್ಲಿ ಭಾರ ತೀಯ ಆರ್ಥಿಕತೆ ಪುಟಿದೆದ್ದು ಚೇತರಿಕೆಯತ್ತ ಸಾಗಿದೆ ಎಂದು ಅಮೆರಿಕದ ಸಂಸತ್ತಿಗೆ, ಅಮೆ ರಿ ಕದ ಖಜಾನೆ ಇಲಾಖೆಯಿಂದ ಸಲ್ಲಿಸಲಾ ಗಿರುವ ವರದಿಯೊಂದರಲ್ಲಿ ಉಲ್ಲೇಖೀಸಲಾ ಗಿದೆ. 2021ರ ಮಧ್ಯಭಾಗದಲ್ಲಿ ಭಾರತವು ಕೊರೊನಾದ ಎರಡನೇ ಅಲೆಗೆ ಅಕ್ಷರಶಃ ತತ್ತ ರಿಸಿತ್ತು. ಅದರಿಂದ ದೇಶದ ಹಣಕಾಸು ಪರಿ ಸ್ಥಿತಿ ದಿಕ್ಕೆಟ್ಟಿತ್ತು. ಆದರೆ ಬಹುಬೇಗನೇ ಅದರಿಂದ ಚೇತರಿಸಿಕೊಂಡ ಭಾರತದ ಆರ್ಥಿಕತೆ ಏರುಗತಿ ಯತ್ತ ಸಾಗಿದ್ದು ನಿಧಾನವಾಗಿ ಚೇತರಿಸಿ ಕೊಳ್ಳುತ್ತಿದೆ. ಅದರ ಜೊತೆಗೆ, 2021ರ ಅಂತ್ಯದ ವೇಳೆಗೆ ದೇಶದ ಶೇ. 40ರಷ್ಟು ಭಾರತೀಯರು ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾ ವಿರುದ್ಧವೂ ಭಾರತ ಸೆಡ್ಡು ಹೊಡೆದು ನಿಂತಿತು ಎಂದು ಹೇಳಲಾಗಿದೆ.
ಚೀನದಲ್ಲಿ ಕೊರೊನಾ ಸ್ಫೋಟ
ಕೊರೊನಾ ಉಗಮ ಸ್ಥಾನವಾದ ಚೀನದಲ್ಲಿ ಮತ್ತೆ ಕೊರೊನಾ ಭುಗಿಲೆದ್ದಿದೆ. ರಾಜಧಾನಿ ಬೀಜಿಂಗ್ ಹಾಗೂ ವಾಣಿಜ್ಯ ನಗರಿಯಾದ ಶಾಂಘೈಯಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾ ಗುತ್ತಿವೆ. ಹಾಗಾಗಿ ಆ ಎರಡೂ ನಗರಗಳಲ್ಲಿ ವ್ಯಾಪಕ ಪರೀಕ್ಷ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಬೀಜಿಂಗ್ ಮಹಾನಗರ ಪಾಲಿಕೆಯ ವಕ್ತಾರ ಕ್ಸು ಹೆಜಿಯನ್, ಹೆವೆನ್ ಸೂಪರ್ ಮಾರ್ಕೆಟ್ ಪ್ರಾಂತದಲ್ಲಿ ಹೆಚ್ಚು ಸೋಂಕು ಕಾಣಸಿಕೊಂಡಿದೆ. ಹಾಗಾಗಿ, ಸುತ್ತಲಿನ ಪ್ರಾಂತಗಳಲ್ಲಿ ಪರೀಕ್ಷೆಗಳನ್ನು ಹೆಚ್ಚು ಮಾಡ ಲಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಉತ್ತರ ಕೊರಿಯಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು ಅಲ್ಲಿಂದ ಚೀನಕ್ಕೆ ಬೀಸುತ್ತಿರುವ ಗಾಳಿ ಯಿಂದಾಗಿ ಸೋಂಕು ಕೂಡ ಆಗಮಿಸುತ್ತಿದೆ ಎಂದು ಚೀನ ಸರಕಾರದ ಕೆಲವು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.