ಪ್ರತಿಪಕ್ಷ ನಾಯಕರಿಗೆ ಸಂಸದೀಯ ಸಮಿತಿಗಳಲ್ಲಿಲ್ಲ ಅಧ್ಯಕ್ಷ ಸ್ಥಾನ!
ಕಾಂಗ್ರೆಸ್,ಟಿಎಂಸಿ ಆಕ್ರೋಶ
Team Udayavani, Oct 5, 2022, 5:56 PM IST
ನವದೆಹಲಿ: ಸಂಸದೀಯ ಸಮಿತಿಗಳಿಗೆ ಮಂಗಳವಾರ ಮೇಜರ್ ಸರ್ಜರಿ ನಡೆದಿದೆ. ಆದರೆ, ಯಾವುದೇ ಪ್ರಮುಖ ಸಮಿತಿಯಲ್ಲೂ ಪ್ರತಿಪಕ್ಷಗಳ ನಾಯಕರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ. ಎರಡನೇ ಅತಿದೊಡ್ಡ ಪ್ರತಿಪಕ್ಷವಾದ ಕಾಂಗ್ರೆಸ್ಗೆ ಕೇವಲ ಒಂದು ಸಮಿತಿಯಲ್ಲಿ ಅಧ್ಯಕ್ಷ ಸ್ಥಾನ ದೊರೆತರೆ, ತೃಣಮೂಲ ಕಾಂಗ್ರೆಸ್ಗೆ ಒಂದೇ ಒಂದರಲ್ಲೂ ಸ್ಥಾನ ಸಿಕ್ಕಿಲ್ಲ.
ಗೃಹ, ಹಣಕಾಸು, ಐಟಿ, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳಂಥ ಪ್ರಮುಖ ಸಂಸದೀಯ ಸಮಿತಿಗಳಲ್ಲಿ ಕಾಂಗ್ರೆಸ್ಗಾಗಲೀ, ಟಿಎಂಸಿಗಾಗಲೀ ಅಧ್ಯಕ್ಷ ಸ್ಥಾನವನ್ನು ನೀಡಿಲ್ಲ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಇದನ್ನು ಕಾಂಗ್ರೆಸ್, ಟಿಎಂಸಿ, “ಕ್ರೂರ ನಿರ್ಧಾರ’ ಎಂದು ಟೀಕಿಸಿದೆ.
ಈವರೆಗೆ ಕೇಂದ್ರ ಗೃಹ ವ್ಯವಹಾರಗಳಿಗೆ ಸಂಬಂಧಿಸಿದ ಸ್ಥಾಯಿ ಸಮಿತಿಯ ನೇತೃತ್ವವನ್ನು ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ವಹಿಸಿದ್ದರು. ಈಗ ಅವರ ಸ್ಥಾನಕ್ಕೆ ಬಿಜೆಪಿ ಸಂಸದ ಬ್ರಿಜ್ ಲಾಲ್ರನ್ನು ನೇಮಿಸಲಾಗಿದೆ.
ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಕಾಂಗ್ರೆಸ್ನ ಶಶಿ ತರೂರ್ರನ್ನು ಕೈಬಿಟ್ಟು, ಅವರ ಸ್ಥಾನಕ್ಕೆ ಶಿವಸೇನೆಯ ಶಿಂಧೆ ಬಣದ ಸಂಸದ ಪ್ರತಾಪ್ರಾವ್ ಜಾಧವ್ರನ್ನು ನೇಮಕ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.