ಇಲ್ಲ ನಾವು 10 ಸಾವಿರ ಉದ್ಯೋಗ ಕಡಿತ ಮಾಡಿಲ್ಲ: ಪಾರ್ಲೆ
ಎಲ್ಲ ಮಾಧ್ಯಮಗಳ ಸೃಷ್ಟಿ; ಆರೋಪ
Team Udayavani, Aug 26, 2019, 3:45 PM IST
ಮುಂಬಯಿ: ಆರ್ಥಿಕ ಹಿಂಜರಿತಕ್ಕೀಡಾಗಿ ನಾವು 10 ಸಾವಿರ ಉದ್ಯೋಗಿಗಳನ್ನು ಕೈಬಿಟ್ಟಿದ್ದೇವೆ ಎನ್ನುವುದು ಸುಳ್ಳು, ಹಾಗೆ ಮಾಡಿಲ್ಲ ಎಂದು ಪಾರ್ಲೆ ಬಿಸ್ಕೆಟ್ ಕಂಪೆನಿ ಸ್ಪಷ್ಟೀಕರಣ ನೀಡಿದೆ. ಅಲ್ಲದೆ ಈ ಸುದ್ದಿಯನ್ನು ಮಾಧ್ಯಮಗಳೇ ಉತ್ಪ್ರೇಕ್ಷೆ ಮಾಡಿ ಬರೆದಿವೆ ಎಂದೂ ಅದು ಆರೋಪಿಸಿದೆ. ಇದರಿಂದ 10 ಸಾವಿರ ಉದ್ಯೋಗ ಕಡಿತಗೊಂಡಿದೆ ಎಂದು ಕಳೆದೊಂದು ವಾರದಿಂದ ಜೋರಾಗಿ ಹರಿದಾಡುತ್ತಿದ್ದ ಸುದ್ದಿ ಠುಸ್ ಆಗಿದೆ!
ನಾವು ಮೊದಲಿನಷ್ಟೇ ಉತ್ಪಾದನೆ ಮಾಡುತ್ತಿದ್ದರೆ ಇಷ್ಟೊಂದು ಪ್ರಮಾಣದ ಉದ್ಯೋಗಿಗಳನ್ನು ನಿರ್ವಹಿಸಲು ಸಮಸ್ಯೆಯಾಗಲಿದೆ ಎಂಬ ಆತಂಕ ನಮ್ಮದು. ಅಲ್ಲದೇ ಈಗ ಬಿಸ್ಕೆಟ್ಗಳಿಗೆ ವಿಧಿಸುತ್ತಿರುವ ಶೇ.18ರಷ್ಟು ತೆರಿಗೆಯಿಂದ ಸಮಸ್ಯೆಯಾಗುತ್ತಿದೆ. ಬಿಸ್ಕೆಟೆY ವಿಧಿಸುವ ತೆರಿಗೆಯನ್ನು ಶೇ.5ಕ್ಕೆ ಇಳಿಸಬೇಕು ಎಂದು ಪಾರ್ಲೆಯ ವಿಭಾಗೀಯ ಮುಖ್ಯಸ್ಥ ಮಾಯಾಂಕ್ ಶಾ ಹೇಳಿದ್ದಾರೆ. ಈ ಮೊದಲು ರಸ್ಕ್ಗೆ ತೆರಿಗೆ ವಿನಾಯ್ತಿ ಇತ್ತು. ಈಗ ಶೇ.5ರಷ್ಟು ತೆರಿಗೆ ಇದೆ.
ಸರಿಯಾದ ಪ್ರಮಾಣದ ತೆರಿಗೆ ವಿಧಿಸಲಿ. ಹೆಚ್ಚು ಪ್ರಮಾಣದ ತೆರಿಗೆಯಿಂದ ಉತ್ಪಾದನೆ ಮೇಲೆ ಹೊಡೆತವಾಗುತ್ತದೆ. ಎಂದು ಹೇಳಿದರು.
ಪಾರ್ಲೆ ಏಷ್ಯಾದ ಅತಿ ದೊಡ್ಡ ಬಿಸ್ಕೆಟ್ ಉತ್ಪಾದಕ ಕಂಪೆನಿಯಾಗಿದ್ದು, ಕ್ಯಾಮರೂನ್, ನೈಜೀರಿಯಾ, ಘಾನಾ, ಇಥೋಪಿಯಾ, ಕೀನ್ಯಾ, ಐವರಿಕೋಸ್ಟ್, ನೇಪಾಲ, ಮೆಕ್ಸಿಕೋ ದೇಶಗಳಿಗೂ ರಫ್ತು ಮಾಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.