Tata Trusts; ಅಧ್ಯಕ್ಷರಾಗಿ ನೋಯೆಲ್ ಟಾಟಾ ಸರ್ವಾನುಮತದಿಂದ ನೇಮಕ
ಉದ್ಯಮ ರಂಗದ ದೈತ್ಯ ಸಂಸ್ಥೆಯ ಕುರಿತಾಗಿನ ಕುತೂಹಲಕ್ಕೆ ತೆರೆ ; ಯಾರಿವರು ನೋಯೆಲ್?
Team Udayavani, Oct 11, 2024, 2:26 PM IST
ಮುಂಬಯಿ: ಇಲ್ಲಿ ನಡೆದ ಸಭೆಯಲ್ಲಿ ಟಾಟಾ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ನೋಯೆಲ್ ಟಾಟಾ(Noel Tata)ಅವರನ್ನು ಶುಕ್ರವಾರ(ಅಕ್ಟೋಬರ್ 11)ಸರ್ವಾನುಮತದಿಂದ ನೇಮಕ ಮಾಡಲಾಯಿತು.
ರತನ್ ಟಾಟಾ ಅವರು ವಿಧಿವಶರಾದ ಬಳಿಕ ಯಾರು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ರತನ್ ಟಾಟಾ ಮಲ ಸಹೋದರ ನಿರೀಕ್ಷೆಯಂತೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಟಾಟಾ ಗ್ರೂಪ್‌ನ ಹಿಡುವಳಿ ಕಂಪನಿಯಾದ ಟಾಟಾ ಸನ್ಸ್‌ನಲ್ಲಿ 66% ಪಾಲನ್ನು ಹೊಂದಿರುವ ಟಾಟಾ ಟ್ರಸ್ಟ್ಸ್, ಗುಂಪಿನ ಆಡಳಿತದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ರತನ್ ಟಾಟಾ ಅವರ ಅಂತಿಮ ಸಂಸ್ಕಾರದ ಒಂದು ದಿನದ ನಂತರ ನೋಯೆಲ್ ಟಾಟಾ ಅವರನ್ನು ನೇಮಿಸಲಾಗಿದೆ. ಮಂಡಳಿಯ ಸಭೆಯು ರತನ್ ಟಾಟಾ ಅವರಿಗೆ ಗೌರವ ಸಲ್ಲಿಸಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವುದನ್ನೂ ಜತೆಯಾಗಿ ಮಾಡಿದೆ.
ಹಲವು ವರ್ಷಗಳ ಕಾಲ ಟಾಟಾ ಟ್ರಸ್ಟ್ ಮತ್ತು ಟಾಟಾ ಗ್ರೂಪ್ ಅನ್ನು ಮುನ್ನಡೆಸಿದ್ದ ರತನ್ ಟಾಟಾ ಅವರು ವಿವಾಹವಾಗಿರಲಿಲ್ಲ, ಮಾತ್ರವಲ್ಲದೆ ಟ್ರಸ್ಟ್‌ಗೆ ತಮ್ಮ ಸ್ಥಾನಕ್ಕೆ ಉತ್ತರಾಧಿಕಾರಿ ಯಾರು ಎಂಬುದನ್ನು ಹೆಸರಿಸಿರಲಿಲ್ಲ. ಪರಿಣಾಮವಾಗಿ, ನಾಯಕತ್ವವನ್ನು ನಿರ್ಧರಿಸಲು ಮಂಡಳಿಯು ಸಭೆ ಸೇರಿ ವರ್ಷಗಳ ಕಾಲ ಟ್ರಸ್ಟ್‌ಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದ ನೋಯೆಲ್ ಟಾಟಾ ಅವರು ಜವಾಬ್ದಾರಿ ವಹಿಸಿಕೊಳ್ಳಲು ಆಯ್ಕೆಯಾಗಿ ಪರಿಗಣಿಸಲ್ಪಟ್ಟಿದ್ದಾರೆ.
ಯಾರು ನೋಯೆಲ್ ಟಾಟಾ ?
ನೋಯೆಲ್ ಟಾಟಾ ಅವರು ರತನ್ ಟಾಟಾ ಅವರ ಸಾಕು ತಂದೆ ನಾವಲ್ ಟಾಟಾ ಅವರ ಎರಡನೇ ಪತ್ನಿ ಸಿಮೋನ್ ಪುತ್ರ. ನೋಯೆಲ್ ಅವರ ಮಕ್ಕಳಾದ ಲಿಯಾ (39), ಮಾಯಾ (36), ಮತ್ತು ನೆವಿಲ್ಲೆ (32), ಟಾಟಾ ಟ್ರಸ್ಟ್‌ನ ಅಂಗಸಂಸ್ಥೆಗಳು ಸೇರಿದಂತೆ ಐದು ಪ್ರಮುಖ ಟ್ರಸ್ಟ್‌ಗಳ ಟ್ರಸ್ಟಿಗಳಾಗಿ ಸೇರ್ಪಡೆಗೊಂಡಿದ್ದಾರೆ.
ರತನ್ ಟಾಟಾ ಟ್ರಸ್ಟ್ ಟಾಟಾ ಗ್ರೂಪ್‌ನ ದತ್ತಿ ಮತ್ತು ಪ್ರಮುಖ ಆರ್ಥಿಕ ಚಟುವಟಿಕೆಗಳೆರಡನ್ನೂ ನಿರ್ವಹಿಸುವ ಈ ಟ್ರಸ್ಟ್‌ಗಳಲ್ಲಿ ಟಾಟಾ ಸನ್ಸ್ ಸಮೂಹದ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಟ್ರಸ್ಟ್‌ಗಳಲ್ಲಿ ಅವರ ಪಾತ್ರವನ್ನು ಕೇವಲ ಸಾಂಕೇತಿಕವಾಗಿದೆಯಾದರೂ ಭವಿಷ್ಯದ ಆಡಳಿತವನ್ನು ರೂಪಿಸಲು ಅವಶ್ಯಕವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.