1 ದಿನಕ್ಕೆ ಬ್ರಿಟಿಷ್ ಹೈಕಮಿಷನರ್ ಆದ ನೋಯ್ದಾ ವಿವಿ ವಿದ್ಯಾರ್ಥಿನಿ
Team Udayavani, Oct 9, 2018, 11:32 AM IST
ಹೊಸದಿಲ್ಲಿ : ನೋಯ್ಡಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಇಷಾ ಬೆಹಲ್ ಅವರು ಒಂದು ದಿನದ ಮಟ್ಟಿಗೆ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಆಗುವ ಅತ್ಯಪೂರ್ವ ಸಾಧನೆಯನ್ನು ಮಾಡಿ ದೇಶದ ಜನತೆಯ ಗಮನವನ್ನು ಸೆಳೆದಿದ್ದಾರೆ.
ಸಾರ್ವಜನಿಕ ನೀತಿ ಮತ್ತು ಕಾನೂನಿನಲ್ಲಿ ತನ್ನ ಉನ್ನತ ವ್ಯಾಸಂಗ ಪೂರೈಸಿದ ಬಳಿಕ ತಾನು ಸಾಮಾಜಿಕ ಉದ್ಯಮಿ ಯಾಗುವ ಗುರಿಯನ್ನು ಇಷಾ ಹೊಂದಿದ್ದಾರೆ.
ನೋಯ್ಡಾ ವಿವಿಯಲ್ಲಿ ಪಾಲಿಟಿಕಲ್ ಸಯನ್ಸ್ ವಿದ್ಯಾರ್ಥಿಯಾಗಿರುವ ಇಷಾ ಮೊನ್ನೆ ಭಾನುವಾರ 24 ತಾಸುಗಳ ಮಟ್ಟಿಗೆ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಆದರು. ಹೇಗಪ್ಪ ಅಂದರೆ ಇದೇ ಅ.11ರಂದು ಆಚರಿಸಲ್ಪಡುವ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಬ್ರಿಟಿಷ್ ಹೈಕಮಿಷನ್ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಆಕೆ ವಿಜೇತಳಾದದ್ದು !
“ಲಿಂಗ ಸಮಾನತೆ ಎಂದರೆ ನಿಮ್ಮ ದೃಷ್ಟಿಯಲ್ಲಿ ಏನು?’ ಎಂಬ ಬಗ್ಗೆ ಕಿರು ವಿಡಿಯೋ ಚಿತ್ರಿಕೆಯನ್ನು ರಚಿಸಿ ಸಲ್ಲಿಸುವ ಬ್ರಿಟಿಷ್ ಹೈಕಮಿಷನ್ ಸ್ಫರ್ಧೆಯನ್ನು 18ರಿಂದ 23ರ ವಯೋಮಿತಿಯ ಮಹಿಳೆಯರಿಗಾಗಿ ಏರ್ಪಡಿಸಲಾಗಿತ್ತು. ಇದರಲ್ಲಿ ದೇಶಾದ್ಯಂತ 58 ವಿದ್ಯಾರ್ಥಿನಿಯರು ಭಾಗವಹಿಸಿ ತಾವು ಸಿದ್ಧಪಡಿಸಿದ ವಿಡಿಯೋ ಸಲ್ಲಿಸಿದ್ದರು. ಇದರಲ್ಲಿ ಇಷಾ ವಿಡಿಯೋ ಸರ್ವಶ್ರೇಷ್ಠವೆಂದು ಪುರಸ್ಕೃತವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.