ವಿಮಾನದಲ್ಲಿ ಸೊಳ್ಳೆಕಾಟ: ಕೇಂದ್ರಕ್ಕೆ ಎನ್‌ಜಿಟಿ ನೋಟಿಸ್!
Team Udayavani, Jul 4, 2017, 12:02 PM IST
ನವದೆಹಲಿ: ವಿಮಾನಗಳಲ್ಲಿನ ಸೊಳ್ಳೆಕಾಟದ ವಿಚಾರವೊಂದು ಕೇಂದ್ರ ಸರ್ಕಾರದ ಬಾಗಿಲಿಗೆ ಬಂದು ನಿಂತಿದೆ! ಪ್ರಯಾಣಿಕರು ಹತ್ತಿದ ಮೇಲೆ ವಿಮಾನಗಳಲ್ಲಿ ಸೊಳ್ಳೆ ಔಷಧಿ ಸಿಂಪಡಣೆ ಮಾಡಬಾರದು ಎಂಬ ಎನ್‌ಜಿಟಿಯ ಆದೇಶದಿಂದಾಗಿ ಈ ವಿಚಾರ ಕೇಂದ್ರ ಸರ್ಕಾರದ ಅಂಗಳ ತಲುಪಿದೆ.
ಈ ಆದೇಶ ಪ್ರಶ್ನಿಸಿ ಇಂಡಿಗೋ ವಿಮಾನಯಾನ ಸಂಸ್ಥೆ ಹೊಸದಾಗಿ ಅರ್ಜಿ ಸಲ್ಲಿಸಿದ್ದು, 2015ರ ಆಗಸ್ಟ್ 3ರ ನಿರ್ದೇಶನವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದೆ. ಈ ಸಂಬಂಧ ಉತ್ತರ ನೀಡುವಂತೆ ಎನ್‌ಜಿಟಿಯ ನ್ಯಾ. ಜಾವೇದ್ ರಹೀಂ ಅವರಿದ್ದ ಪೀಠ ನಾಗರಿಕ ವಿಮಾನಯಾನ ಸಚಿವಾಲಯ, ಡಿಜಿಸಿಎ ಮತ್ತು ಇತರರಿಗೆ ನೋಟಿಸ್ ನೀಡಿದೆ.
ಅಲ್ಲದೆ, ಕಳೆದ ಜೂನ್‌ನಲ್ಲಿ ಈ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಳ್ಳಿಹಾಕಿದ್ದ ಎನ್ ಜಿಟಿ, ಹಿಂದಿನ ಆದೇಶದಲ್ಲಿ ಯಾವುದೇ ತಪ್ಪುಗಳಿಲ್ಲವಲ್ಲ ಎಂದಿತ್ತು. ಆದರೆ, ಪ್ರಕರಣದ ಹಿನ್ನೆಲೆ, ಪರಿಸರಕ್ಕೆ ಸಂಬಂಧಿಸಿದ ಕಾನೂನಿನ ಜಾರಿಯ ಅಂಶಗಳನ್ನು ಆಧರಿಸಿ ಪೂರಕ ಪ್ರಶ್ನೆಗಳಿದ್ದರೆ ಹೊಸ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು.
ವಿಮಾನ ಸಂಸ್ಥೆಗೆ ಸಿಕ್ಕಿದ್ದು ಬೆಂಗಳೂರಿನ ಸೊಳ್ಳೆಕಾಟ!: ಇದೀಗ ಹೊಸ ಅರ್ಜಿ ಸಲ್ಲಿಸಿರುವ ಇಂಡಿಗೋ ವಿಮಾನಯಾನ ಸಂಸ್ಥೆ, ಬೆಂಗಳೂರು, ಕೋಲ್ಕತಾ, ಪಾಟ್ನಾ, ಲಕ್ನೋ, ದೆಹಲಿ, ಗುವಾಹಟಿ, ಅಹಮದಾಬಾದ್, ಚೆನ್ನೈ, ಜೈಪುರ, ಪುಣೆ, ಡೆಹ್ರಾಡೂನ್ ಮತ್ತು ಭುವನೇಶ್ವರ ವಿಮಾನ ನಿಲ್ದಾಣಗಳಲ್ಲಿನ ಸೊಳ್ಳೆಕಾಟದ ಬಗ್ಗೆ ಪ್ರಸ್ತಾಪಿಸಿದೆ.
ಈ ನಿಲ್ದಾಣಗಳಲ್ಲಿ ಸೊಳ್ಳೆ ಕಡಿಯುತ್ತಿರುವುದರಿಂದ ಜನ ಮಲೇರಿಯಾ, ಡೆಂ àಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ವಿಮಾನದ ಒಳಗೆ ಸೊಳ್ಳೆ ಕಾಟ ನಿಯಂತ್ರಿಸಲು ಔಷಧ ಸಿಂಪಡಣೆ ಮಾಡಲು ಅವಕಾಶ ನೀಡಿ ಎಂದು ಎನ್‌ಜಿಟಿಗೆ ಮನವಿ ಮಾಡಿದೆ. ಈಗ ಮುಂಗಾರು ಆರಂಭವಾಗಿದ್ದು, ಸೊಳ್ಳೆಗಳ ಸಂತತಿಯೂ ಹೆಚ್ಚುತ್ತಿದೆ.
ಆದರೆ ನಿಮ್ಮ ನಿಷೇಧದಿಂದಾಗಿ ನಾವು ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಆಗದ ಅಸಹಾಯಕ ಸ್ಥಿತಿಯಲ್ಲಿ ಇದ್ದೇವೆ. ಈ ಬಗ್ಗೆ ಪ್ರಯಾಣಿಕರಿಂದ ಹಲವಾರು ದೂರುಗಳು ಬಂದಿದ್ದು, ಗ್ರಾಹಕರ ವೇದಿಕೆಗೂ ಇವರು ಮೊರೆ ಹೋಗಿದ್ದಾರೆ. ಹೀಗಾಗಿ ಪರಿಸ್ಥಿತಿಗೆ ಅನುಗುಣವಾಗಿ ತಕ್ಷಣವೇ ನಿಮ್ಮ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಮನವಿ ಮಾಡಿದೆ.
ಅಮೆರಿಕದ ವೈದ್ಯನಿಂದ ದೂರು: ವಿಮಾನಗಳಲ್ಲಿ ಸೊಳ್ಳೆ ನಿರೋಧಕ ಔಷಧಗಳನ್ನು ಸಿಂಪಡಿಸುವುದರ ವಿರುದ್ಧ ಅಮೆರಿಕದ ನರರೋಗ ತಜ್ಞ ಡಾ.ಜೈಕುಮಾರ್ ಎಂಬವರು ಎನ್‌ಜಿಟಿಗೆ ದೂರು ನೀಡಿದ್ದರು. ಫೆನೋತ್ರಿನ್ ನಂಥ ರಾಸಾಯನಿಕಗಳನ್ನು ವಿಮಾನಗಳಲ್ಲಿ ಸಿಂಪಡಿಸುವುದರಿಂದ ಪ್ರಯಾಣಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಇದು ಕ್ಯಾನ್ಸರ್, ಪಾರ್ಕಿನ್ಸನ್, ಸ್ಮರಣಶಕ್ತಿ ಕಳೆದುಕೊಳ್ಳುವುದು ಮತ್ತಿತರ ಕಾಯಿಲೆಗಳಿಗೂ ಕಾರಣವಾಗುತ್ತದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ, ಪ್ರಯಾಣಿಕರು ಇರುವಾರ ವಿಮಾನದೊಳಗೆ ಔಷಧ ಸಿಂಪಡಣೆ ಮಾಡದಂತೆ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಎನ್‌ಜಿಟಿ ಸೂಚನೆ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.