![Beer](https://www.udayavani.com/wp-content/uploads/2025/02/Beer-415x232.jpg)
![Beer](https://www.udayavani.com/wp-content/uploads/2025/02/Beer-415x232.jpg)
Team Udayavani, Aug 19, 2022, 7:00 AM IST
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿರುವಂ ತೆಯೇ ಚುನಾವಣಾ ಆಯೋಗವು, ಇದೇ ಮೊದಲ ಬಾರಿಗೆ ಸ್ಥಳೀಯರಲ್ಲದವರಿಗೂ ಮತ ದಾನದ ಹಕ್ಕನ್ನು ನೀಡುವುದಾಗಿ ಘೋಷಿಸಿದೆ.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯಲಿದ್ದು, ಅದರಲ್ಲಿ ಜಮ್ಮು-ಕಾಶ್ಮೀರದಲ್ಲಿ ನೆಲೆಸಿರುವ ಬೇರೆ ರಾಜ್ಯದವರಿಗೂ ನೋಂದಣಿಗೆ ಅವಕಾಶ ಕಲ್ಪಿಸ ಲಾಗುತ್ತದೆ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಸ್ಥಳೀಯರಲ್ಲದವರಿಗೂ ಮತದಾನದ ಹಕ್ಕನ್ನು ನೀಡಲು ನಿರ್ಧರಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಚುನಾವಣಾ ಅಧಿಕಾರಿ ಹಿರ್ದೇಶ್ ಕುಮಾರ್ ಹೇಳಿದ್ದಾರೆ. ಜತೆಗೆ, ಈ ನಿರ್ಧಾರ ದಿಂದಾಗಿ ಚುನಾವಣೆಗೂ ಮುನ್ನ ಸುಮಾರು 20-25 ಲಕ್ಷಕ್ಕೂ ಅಧಿಕ ಹೊಸ ಮತದಾರರು ಸೇರ್ಪಡೆಯಾಗುವ ನಿರೀಕ್ಷೆಯಿದೆ ಎಂದೂ ಅವರು ತಿಳಿಸಿದ್ದಾರೆ.
ಈ ಹಿಂದೆ, ಯಾರ್ಯಾರಿಗೆ ಹಕ್ಕು ಚಲಾಯಿಸಲು ಅವಕಾಶವಿರಲಿಲ್ಲವೋ ಅವರೆಲ್ಲರಿಗೂ ಇನ್ನು ಮತದಾನದ ಹಕ್ಕು ನೀಡಲಾಗುತ್ತದೆ ಎಂದಿದ್ದಾರೆ. 2011ರ ಜನಗಣತಿ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ 28 ಲಕ್ಷ ಸ್ಥಳೀಯೇತರ ವಲಸೆ ಕಾರ್ಮಿರಿದ್ದಾರೆ. ಈ ಪೈಕಿ 14 ಲಕ್ಷ ಮಂದಿ ಇಲ್ಲಿ 10 ಕ್ಕಿಂತಲೂ ಹೆಚ್ಚು ವರ್ಷಗಳಿಂದ ನೆಲೆಸಿದ್ದಾರೆ. ಶೇ.12ರಷ್ಟು ಮಂದಿ ಅಂದರೆ 3.35 ಲಕ್ಷ ಕಾರ್ಮಿ ಕರು 5ರಿಂದ 9 ವರ್ಷಗಳಿಂದ ಇಲ್ಲಿದ್ದಾರೆ.
ಸ್ಥಳೀಯ ಪಕ್ಷಗಳ ಆಕ್ರೋಶ: ಚುನಾವಣಾ ಆಯೋಗದಿಂದ ಈ ಘೋಷಣೆ ಹೊರಬೀಳು ತ್ತಿದ್ದಂತೆ ಜಮು-ಕಾಶ್ಮೀರದ ರಾಜಕೀಯ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಮಾತನಾಡಿ, “ಮುಖ್ಯ ಚುನಾವಣಾಧಿಕಾರಿ ಹೊಸ ಆಜ್ಞೆ ಹೊರಡಿಸಿದ್ದಾರೆ. ಈ ಮೂಲಕ ಸ್ಥಳೀಯರಲ್ಲದ ಬಿಜೆಪಿಯ 25 ಲಕ್ಷ ಮತದಾರರನ್ನು ಜಮ್ಮು ಮತ್ತು ಕಾಶ್ಮೀರದ ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ. ಇದು ಇಲ್ಲಿನ ಚುನಾವಣಾ ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆಯಾಗಿರಲಿದೆ. ಹಿಂಬಾಗಿಲ ಮೂಲಕ 25 ಲಕ್ಷ ಬಿಜೆಪಿ ಮತದಾರ ರನ್ನು ತರುವ ಯತ್ನವಿದು. ನಮ್ಮ ಪ್ರಜಾಸತ್ತೆ ಅಪಾಯದಲ್ಲಿದೆ’ ಎಂದು ಹೇಳಿದ್ದಾರೆ.
ಎಷ್ಟು ಹೆಚ್ಚುವರಿ ಸೇರ್ಪಡೆ?: 2019ರ ಲೋಕ ಸಭೆ ಚುನಾವಣೆ ವೇಳೆ ಅವಿಭಜಿತ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ 78.4 ಲಕ್ಷ ನೋಂದಾ ಯಿತ ಮತದಾರರಿದ್ದರು. ಈಗ ರಾಜ್ಯವನ್ನು ವಿಭಜಿಸಿರುವ ಕಾರಣ, ಲಡಾಖ್ ಪ್ರತ್ಯೇಕ ಕೇಂದ್ರಾ ಡಳಿತ ಪ್ರದೇಶವಾಗಿದ್ದು, ಇಲ್ಲಿರುವ ಮತದಾರರನ್ನು ಹೊರಗಿಟ್ಟರೆ ಜಮ್ಮು ಮತ್ತು ಕಾಶ್ಮೀರದ ಮತದಾರರ ಸಂಖ್ಯೆ 76.7 ಲಕ್ಷವಾಗುತ್ತದೆ. ಆಯೋಗವು ಘೋಷಿಸಿದಂತೆ ಬೇರೆ ರಾಜ್ಯದವರಿಗೂ ಇಲ್ಲಿ ಮತದಾನದ ಹಕ್ಕನ್ನು ನೀಡಿದರೆ ಸುಮಾರ್ 20ರಿಂದ 25 ಲಕ್ಷ ಹೊಸ ಮತದಾರರು ಸೇರ್ಪಡೆ ಯಾಗುತ್ತಾರೆ. ಅಂದರೆ, ಕೇವಲ 3 ವರ್ಷಗಳ ಅವಧಿಯಲ್ಲಿ ಮತದಾರರ ಸಂಖ್ಯೆ ಶೇ.33ರಷ್ಟು ಹೆಚ್ಚಳವಾಗುತ್ತದೆ. 2014ರಿಂದ 2019ರ ಅವಧಿ ಯಲ್ಲಿ ಮತದಾರರ ಸಂಖ್ಯೆಯಲ್ಲಿ ಸುಮಾರು 6.5 ಲಕ್ಷದಷ್ಟು ಏರಿಕೆಯಾಗಿತ್ತು.
ಉಗ್ರರಿಂದ “ಹತ್ಯೆ’ ಬೆದರಿಕೆ :
ಹೊರರಾಜ್ಯಗಳವರಿಗೆ ಇಲ್ಲಿ ಮತದಾನದ ಹಕ್ಕನ್ನು ನೀಡಿದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯೇತರರ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತದೆ ಎಂದು ಲಷ್ಕರ್-ಎ-ತೊಯ್ಬಾ ಬೆಂಬಲಿತ ಉಗ್ರ ಸಂಘಟನೆ ಕಾಶ್ಮೀರ್ ಫೈಟ್ ಎಚ್ಚರಿಕೆ ನೀಡಿದೆ. ಚುನಾವಣಾ ಆಯೋಗದ ಘೋಷಣೆ ಬೆನ್ನಲ್ಲೇ ಈ ಬೆದರಿಕೆ ಹಾಕಲಾಗಿದೆ.
22ರಂದು ಸರ್ವಪಕ್ಷ ಸಭೆ :
ಹೊರರಾಜ್ಯದವರಿಗೂ ಮತದಾನದ ಹಕ್ಕು ಘೋಷಣೆಯಾಗುತ್ತಿದ್ದಂತೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರು ಆ.22ರಂದು ಜಮ್ಮು ಮತ್ತು ಕಾಶ್ಮೀರದ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಬಿಜೆಪಿ ಹೊರತುಪಡಿಸಿ ಇತರೆ ಎಲ್ಲ ಪ್ರಮುಖ ಪಕ್ಷಗಳೊಂದಿಗೆ ಮಾತುಕತೆ ನಡೆಸಿ ಈ ಸಭೆ ಕರೆಯಲಾಗಿದೆ. ಸಭೆಯಲ್ಲಿ “ಮತದಾನದ ಹಕ್ಕು’ ಕುರಿತು ಚರ್ಚಿಸಲಾಗುತ್ತದೆ ಎಂದು ಎನ್‌ಸಿ ವಕ್ತಾರರು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ನೈಜ ಮತದಾರರ ಬೆಂಬಲ ಸಿಗುವ ಬಗ್ಗೆ ಬಿಜೆಪಿಗೆ ಅಷ್ಟೊಂದು ಅನುಮಾನವೇ? ಅದಕ್ಕಾಗಿಯೇ ಚುನಾವಣೆ ಗೆಲ್ಲಲು ತಾತ್ಕಾಲಿಕ ಮತದಾರರನ್ನು ಆಮದು ಮಾಡಲು ಮುಂದಾಗಿದೆಯೇ? ಆದರೆ ಇದ್ಯಾವುದೂ ಆ ಪಕ್ಷಕ್ಕೆ ನೆರವಾಗುವುದಿಲ್ಲ.-ಒಮರ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ನಾಯಕ
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.