ಮರುಪಾವತಿಯಾಗದ ಸಾಲದ ಪ್ರಮಾಣ ಕುಸಿತ
Team Udayavani, Jun 11, 2019, 6:10 AM IST
ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ದೇಶದ ಮರುಪಾವತಿಯಾಗದ ಸಾಲದ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಆರ್ಥಿಕ ವಿಶ್ಲೇಷಣೆ ಸಂಸ್ಥೆ ಕ್ರಿಸಿಲ್ ವರದಿ ಮಾಡಿದೆ. 2019 ಮಾರ್ಚ್ ವೇಳೆಗೆ ಶೇ. 9.3 ಕ್ಕೆ ಎನ್ಪಿಎ ಕುಸಿತ ಕಂಡಿದೆ.
ಕಳೆದ ವರ್ಷ ಇದು ಶೇ. 11.5 ರಷ್ಟಿತ್ತು. ಕಳೆದ ಡಿಸೆಂಬರ್ನಲ್ಲಿ ವರದಿ ಬಿಡುಗಡೆ ಮಾಡಿದ್ದ ಆರ್ಬಿಐ, 2019 ಮಾರ್ಚ್ ವೇಳೆಗೆ ಶೇ. 10.3ಕ್ಕೆ ಎನ್ಪಿಎ ಕುಸಿಯಲಿದೆ ಎಂದು ನಿರೀಕ್ಷಿಸಿತ್ತು.
ಆದರೆ ಆರ್ಬಿಐ ನಿರೀಕ್ಷೆ ಮಾಡಿದ್ದಕ್ಕಿಂತಲೂ ವೇಗವಾಗಿ ಎನ್ಪಿಎ ಕಡಿಮೆಯಾಗುತ್ತಿದೆ. ಇದು ಬ್ಯಾಂಕ್ಗಳು ಮರು ಪಾವತಿಯಾಗದ ಸಾಲದ ವಸೂಲಾತಿಗೆ ಹೆಚ್ಚು ಗಮನ ಹರಿಸಿರುವುದರ ಸಂಕೇತವಾಗಿದೆ ಎಂದು ಕ್ರಿಸಿಲ್ ವರದಿ ಮಾಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.