ಹೊದಿಕೆ ಸರಿಸದ ದಿಲ್ಲಿ; ಉತ್ತರ ಭಾರತದಲ್ಲಿ ಮಂಜಿನಬ್ಬರ ; 100ಕ್ಕೂ ಹೆಚ್ಚು ಸಾವು
Team Udayavani, Jan 10, 2023, 7:10 AM IST
ಹೊಸದಿಲ್ಲಿ: ಚಳಿಯ ತೀವ್ರತೆ ಮತ್ತು ದಟ್ಟ ಮಂಜು ಉತ್ತರ ಭಾರತವನ್ನು ನಡುಗಿಸಿದೆ. ದಿಲ್ಲಿ, ಉತ್ತರಪ್ರದೇಶ, ಜಮ್ಮು ಮತ್ತು ಕಾಶ್ಮೀರ ಸಹಿತ ಹಲವು ರಾಜ್ಯಗಳಲ್ಲಿ ಮಂಜಿನ ದಟ್ಟ ಹೊದಿಕೆ ಆವರಿಸಿರುವ ಕಾರಣ, ಕಣ್ಣ ಮುಂದೆ ಏನಿದೆ ಎಂದೂ ಗೊತ್ತಾಗದ ಸ್ಥಿತಿ ನಿರ್ಮಾಣ ವಾಗಿದೆ. ಕಳೆದೊಂದು ವಾರದಲ್ಲಿ ವಿಪರೀತ ಚಳಿ, ಹೃದಯಾಘಾತ, ಬ್ರೈನ್ ಸ್ಟ್ರೋಕ್ ಹಾಗೂ ಅಪಘಾತಗಳಿಂದಾಗಿ 100ಕ್ಕೂ ಹೆಚ್ಚು ಮಂದಿ ಪ್ರಾಣತೆತ್ತಿದ್ದಾರೆ.
ಮಂಜಿನ ವಾತಾವರಣದಿಂದ ಅಪಘಾತಗಳ ಸಂಖ್ಯೆ ಹೆಚ್ಚಿದ್ದು, ಸೋಮವಾರ ಆಗ್ರಾ-ಲಕ್ನೋ ಎಕ್ಸ್ ಪ್ರಸ್ ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅವಘಡಗಳು ಸಂಭವಿ ಸಿದ್ದು, ಮೂವರು ನೇಪಾಲಿಯರು ಸಹಿತ 7 ಮಂದಿ ಸಾವಿ ಗೀಡಾಗಿದ್ದಾರೆ. ಶೀತಗಾಳಿಯ ತೀವ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ದಿಲ್ಲಿ ಸರಕಾರವು ಶಾಲಾ ಮಕ್ಕಳಿಗೆ ನೀಡ ಲಾದ ಚಳಿಗಾಲದ ರಜೆಯನ್ನು ಜ.15ರವರೆಗೆ ವಿಸ್ತರಿಸಿದೆ.
ಹಿಮಾಚಲ, ಉತ್ತರಾಖಂಡವನ್ನು ಮೀರಿಸಿದ ದಿಲ್ಲಿ: ಸತತ 5 ದಿನಗಳಿಂದಲೂ ದಿಲ್ಲಿಯಲ್ಲಿ ಎಷ್ಟು ಶೀತಗಾಳಿ ಬೀಸುತ್ತಿದೆಯೆಂದರೆ, ಇಲ್ಲಿನ ಹವಾಮಾನವು ಹಿಮಾಚಲ ಪ್ರದೇಶ, ಉತ್ತರಾಖಂಡವನ್ನೂ ಮೀರಿಸಿದೆ. ದೃಷ್ಟಿ ಗೋಚರತೆಯು ಕೇವಲ 25 ಮೀಟರ್‌ಗೆ ಇಳಿದಿದೆ. ದಿಲ್ಲಿಯಲ್ಲಿ 3.8 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿದ್ದು, 2013ರ ಬಳಿಕ ಜನವರಿ ತಿಂಗಳಲ್ಲಿ ಈ ಮಟ್ಟಕ್ಕೆ ತಾಪಮಾನ ಇಳಿದಿರುವುದು ಇದು 2ನೇ ಬಾರಿ. ಇದೇ ವೇಳೆ, ಸೋಮವಾರ ಹಿಮಾಚಲ ಪ್ರದೇಶದ ಛಂಬಾದಲ್ಲಿ ಕನಿಷ್ಠ ತಾಪಮಾನ 8.7ಡಿ.ಸೆ. ಇದ್ದರೆ, ಶಿಮ್ಲಾದಲ್ಲಿ 10.3ಡಿ.ಸೆ., ಮನಾಲಿಯಲ್ಲಿ 6 ಡಿ.ಸೆ. ಇತ್ತು.
ರೈಲು, ವಿಮಾನ ಸಂಚಾರ ವ್ಯತ್ಯಯ: ದಟ್ಟ ಮಂಜಿನಿಂದಾಗಿ ಗೋಚರತೆ ಕ್ಷೀಣಿಸಿದ ಕಾರಣ ರಸ್ತೆ, ರೈಲು, ವಿಮಾನಗಳ ಸಂಚಾರದಲ್ಲೂ ವ್ಯತ್ಯಯ ಉಂಟಾ ಗಿದೆ.
ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ 118 ದೇಶೀಯ ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದೆ. 32ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಮಾನಗಳಿಗೆ ಲ್ಯಾಂಡಿಂಗ್ ಸಮಸ್ಯೆ ಎದುರಾಗಿದೆ. 3 ವಿಮಾನಗಳನ್ನು ದಿಲ್ಲಿಯಲ್ಲಿ ಇಳಿಸಲಾಗದೇ, ಜೈಪುರಕ್ಕೆ ಕಳುಹಿಸಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ದಿಲ್ಲಿಯಲ್ಲಿ ಸೋಮವಾರ 82 ಎಕ್ಸ್ ಪ್ರಸ್ ರೈಲುಗಳು, 140 ಪ್ರಯಾಣಿಕರ ರೈಲುಗಳು ಸೇರಿದಂತೆ ಒಟ್ಟು 260 ರೈಲುಗಳ ಸಂಚಾರ ರದ್ದು ಮಾಡಲಾಗಿದೆ.
ಕೈದಿಗಳಿಗೆ ಬಿಸಿನೀರು!
ಕೊರೆಯುವ ಚಳಿಯಿಂದ ಒದ್ದಾಡುತ್ತಿದ್ದ ದಿಲ್ಲಿಯ 16 ಕೇಂದ್ರ ಕಾರಾಗೃಹಗಳ ಕೈದಿಗಳಿಗೆ ಬಿಸಿ ನೀರು ಒದಗಿಸಲು ಜೈಲಧಿಕಾರಿಗಳು ನಿರ್ಧರಿಸಿದ್ದಾರೆ. ತಿಹಾರ್, ಮಂಡೋಲಿ, ರೋಹಿಣಿ ಸಹಿತ 16 ಜೈಲುಗಳಲ್ಲಿನ ಕೈದಿಗಳಿಗೆ ಸ್ನಾನಕ್ಕೆ ಹಾಗೂ ಸ್ವತ್ಛತಾ ಅಗತ್ಯಗಳಿಗೆ ಬಿಸಿ ನೀರು ಒದಗಿಸಲಾಗುವುದು ಎಂದು ಘೋಷಿಸಿದ್ದಾರೆ. ಜತೆಗೆ, 65 ವರ್ಷ ದಾಟಿದ ಕೈದಿಗಳಿಗೆ ಮರದ ಮಂಚದ ಜತೆಗೆ ಹಾಸಿಗೆಯನ್ನೂ ನೀಡಲು ನಿರ್ಧರಿಸಲಾಗಿದೆ. ಪ್ರಭಾವಿ ಕೈದಿಗಳು ಮಾತ್ರ ಒಂದು ಬಕೆಟ್‌ಗೆ 5 ಸಾವಿರ ರೂ. ನೀಡಿ ಬಿಸಿ ನೀರು ಪಡೆಯುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಅವರು ಈ ಕ್ರಮ ಕೈಗೊಂಡಿದ್ದಾರೆ.
ಸ್ಕಿಡ್ ನಿಗ್ರಹ ಚೈನ್ ಕಡ್ಡಾಯ
ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಜು ತುಂಬಿದ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ಇನ್ನು ಮುಂದೆ ಸ್ಕಿಡ್‌ನಿಗ್ರಹ ಚೈನ್(ಆ್ಯಂಟಿ ಸ್ಕಿಡ್ ಚೈನ್) ಕಡ್ಡಾಯಗೊಳಿಸಿ ಲಡಾಖ್ ಲೆಫ್ಟಿನೆಂಟ್ ಗವರ್ನರ್ ಆದೇಶ ಹೊರಡಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶದ ಜನರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇಂಥ ರಸ್ತೆಗಳಲ್ಲಿ ಸಂಚರಿಸುವ ಎಲ್ಲ ಖಾಸಗಿ ಮತ್ತು ಸರ್ಕಾರಿ ವಾಹನ ಗಳು ಟೈರ್‌ಗಳಲ್ಲಿ ಸ್ಕಿಡ್ ನಿಗ್ರಹ ಚೈನ್‌ಗಳನ್ನು ಅಳವಡಿಸಿರಬೇಕು. ನಿಯಮ ಉಲ್ಲಂ ಸಿದರೆ 1,000 ರೂ. ದಂಡ ವಿಧಿ ಸಲಾಗುವುದು ಎಂದೂ ಆದೇಶದಲ್ಲಿ ಉಲ್ಲೇಖೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.