ಉ.ಕೊರಿಯದಿಂದ ಅಣು ಪರೀಕ್ಷೆ ಅಮಾನತು: ಟ್ರಂಪ್ ಸ್ವಾಗತ
Team Udayavani, Apr 21, 2018, 10:57 AM IST
ಹೊಸದಿಲ್ಲಿ : ಉತ್ತರ ಕೊರಿಯ ತನ್ನ ಅಣು ಪರೀಕ್ಷಾ ತಾಣಗಳನ್ನು ಮುಚ್ಚಲಿದೆ. ದೂರ ವ್ಯಾಪ್ತಿಯ ಕ್ಷಿಪಣಿ ಪರೀಕ್ಷೆಗಳನ್ನು ಮತ್ತು ಅಣು ಪರೀಕ್ಷೆಗಳನ್ನು ಅಮಾನತು ಮಾಡಲಿದೆ ಎಂದು ಕಿಮ್ ಜಾಂಗ್ ಉನ್ ಘೋಷಿಸಿದ್ದಾರೆ.
ಇದನ್ನು ಅನುಸರಿಸಿ ಟ್ವೀಟ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಇದೊಂದು ಒಳ್ಳೆಯ ಸುದ್ದಿ, ಒಳ್ಳೆಯ ಬೆಳವಣಿಗೆ – ಉತ್ತರ ಕೊರಿಯಕ್ಕೂ, ಇಡಿಯ ಜಗತ್ತಿಗೂ. ನಮ್ಮೊಳಗಿನ ಶೃಂಗವನ್ನು ನಾನೀಗ ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ. ಆದರೆ ಉತ್ತರ ಕೊರಿಯದ ಈ ನಡೆಯಿಂದ ತೃಪ್ತವಾಗದ ಜಪಾನ್ ನಿರಾಶೆ ವ್ಯಕ್ತಪಡಿಸಿದೆ.
ಇದೇ ವೇಳೆ ದಕ್ಷಿಣ ಕೊರಿಯ ಯೋನಾಪ್ ಸುದ್ದಿ ಸಂಸ್ಥೆ, “ಅಮೆರಿಕ ಮತ್ತು ದಕ್ಷಿಣ ಕೊರಿಯ ಜತೆಗೆ ಚರ್ಚೆ ನಡೆಸುವ ಮುನ್ನ ಉತ್ತರ ಕೊರಿಯ ತನ್ನ ಪರಮಾಣು ಪರೀಕ್ಷಾ ತಾಣಗಳನ್ನು ಎಪ್ರಿಲ್ 21ರಿಂದಲೇ ಮುಚ್ಚುವುದಾಗಿ ಹಾರೈಸುತ್ತೇವೆ’ ಎಂದು ವರದಿಮಾಡಿದೆ.
ಕಿಮ್ ಜಾಂಗ್ ಉನ್ ಅವರು ದಕ್ಷಿಣ ಕೊರಿಯ ಅಧ್ಯಕ್ಷ ಮೂನ್ ಜೇ ಅವರೊಂದಿಗೆ ಮುಂದಿನ ಶುಕ್ರವಾರ ಶೃಂಗ ಸಭೆ ನಡೆಸಲಿದ್ದಾರೆ. ಅಂತೆಯೇ ಈ ಮೂವರ ನಡುವಿನ ಶೃಂಗ ಸಭೆಯು ಮೇ ಕೊನೆಯಲ್ಲಿ ಅಥವಾ ಜೂನ್ ಆದಿಯಲ್ಲಿ ನಡೆಯುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
MUST WATCH
ಹೊಸ ಸೇರ್ಪಡೆ
Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ
Udupi: ವಿಸಿಲ್ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್ ನಿರ್ವಹಣೆ!
Paddana-Tulu folk songs: ಮರೆಯಾಗದಿರಲಿ ಪಾಡ್ದನನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.