![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Jan 21, 2024, 1:52 PM IST
ನವದೆಹಲಿ: ಅಫ್ಘಾನಿಸ್ತಾನದ ಬಡಾಕ್ಷಣ್ ಪ್ರಾಂತ್ಯದಲ್ಲಿ ಅಪಘಾತಕ್ಕೀಡಾದ ಪ್ರಯಾಣಿಕ ವಿಮಾನವು ಭಾರತದದ್ದಲ್ಲ ಎಂದು ಸರ್ಕಾರ ಭಾನುವಾರ ಹೇಳಿದೆ, ಇದು ಭಾರತೀಯ ಪ್ರಯಾಣಿಕ ವಿಮಾನ ಎಂದು ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮ ವರದಿ ಮಾಡಿತ್ತು.
ವರದಿಯ ಬಗ್ಗೆ X ನಲ್ಲಿ ಸ್ಪಷ್ಟೀಕರಣ ನೀಡಿದ ನಾಗರಿಕ ವಿಮಾನಯಾನ ಸಚಿವಾಲಯ, “ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ದುರದೃಷ್ಟಕರ ವಿಮಾನ ಅಪಘಾತವು ಭಾರತೀಯ ಶೆಡ್ಯೂಲ್ಡ್ ಏರ್‌ಕ್ರಾಫ್ಟ್ ಅಥವಾ ನಾನ್ ಶೆಡ್ಯೂಲ್ಡ್ (ಎನ್‌ಎಸ್‌ಒಪಿ)/ಚಾರ್ಟರ್ ವಿಮಾನವಲ್ಲ. ಇದು ಮೊರಾಕನ್ ನೋಂದಾಯಿತ ಸಣ್ಣ ವಿಮಾನವಾಗಿದೆ ಎಂದು ಹೇಳಿಕೊಂಡಿದೆ.
The unfortunate plane crash that has just occurred in Afghanistan is neither an Indian Scheduled Aircraft nor a Non Scheduled (NSOP)/Charter aircraft. It is a Moroccan registered small aircraft. More details are awaited.
— MoCA_GoI (@MoCA_GoI) January 21, 2024
ಭಾರತದಿಂದ ಉಜ್ಬೇಕಿಸ್ತಾನ್ ಮೂಲಕ ಮಾಸ್ಕೋಗೆ ತೆರಳುತ್ತಿದ್ದ ಸಣ್ಣ ಚಾರ್ಟರ್ ಜೆಟ್ ಶನಿವಾರ ಸಂಜೆ ಅಫ್ಘಾನಿಸ್ತಾನದ ರಾಡಾರ್ ನಿಂದ ಕಣ್ಮರೆಯಾಗಿದ್ದು ಇದೀಗ ಅಫ್ಘಾನಿಸ್ತಾನದ ಪರ್ವತ ಪ್ರದೇಶದಲ್ಲಿ ಪತನಗೊಂಡಿರಬಹುದು ಎಂದು ಹೇಳಲಾಗಿದೆ. ವಿಮಾನದ ಹುಡುಕಾಟ ನಡೆಯುತ್ತಿದೆ ಎಂದು ರಷ್ಯಾದ ವಾಯುಯಾನ ಸಂಸ್ಥೆ ರೊಸಾವಿಯಾಟ್ಸಿಯಾ ಭಾನುವಾರ ತಿಳಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ‘ಫ್ರೆಂಚ್ ನಿರ್ಮಿತ ಡಸ್ಸಾಲ್ಟ್ ಫಾಲ್ಕನ್ 10 ಜೆಟ್ ವಿಮಾನವನ್ನು ರಷ್ಯಾದಲ್ಲಿ ನೋಂದಾಯಿಸಲಾಗಿದೆ ಇದರಲ್ಲಿ ನಾಲ್ಕು ಸಿಬ್ಬಂದಿ ಮತ್ತು ಇಬ್ಬರು ಪ್ರಯಾಣಿಕರು ಸೇರಿದಂತೆ ಆರು ಮಂದಿ ವಿಮಾನದಲ್ಲಿದ್ದರು ಎಂದು ಹೇಳಿದೆ.
ಅಫ್ಘಾನಿಸ್ತಾನದ ಉತ್ತರ ಭಾಗದಲ್ಲಿರುವ ಬಡಾಕ್ಷನ್‌ನ ದೂರದ ಪರ್ವತ ಪ್ರದೇಶದಲ್ಲಿ ರಾತ್ರಿ ವಿಮಾನ ಪತನಗೊಂಡಿದೆ ಎಂದು ಅಫ್ಘಾನ್ ಪ್ರಾಂತೀಯ ಪೊಲೀಸ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಪಘಾತದ ಕಾರಣ ಮತ್ತು ಸಾವುನೋವುಗಳ ಬಗ್ಗೆ ಯಾವುದೇ ದೃಢೀಕೃತ ವಿವರಗಳು ಲಭಿಸಿಲ್ಲ ಎಂದು ಅವರು ಹೇಳಿದರು.
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.