ಬಾಹ್ಯಾಕಾಶದಲ್ಲೂ ಸೋಲುಂಡ ಚೀನ
ಉಪಗ್ರಹ ಸಂಪರ್ಕಗಳ ಮೇಲೆ ವಿಫಲ ದಾಳಿ
Team Udayavani, Sep 24, 2020, 6:05 AM IST
ಹೊಸದಿಲ್ಲಿ: ಭಾರತದ ಕೆಲವು ಉಪಗ್ರಹ ಸಂಪರ್ಕಗಳ ಮೇಲೆ ಚೀನದ ಹ್ಯಾಕರ್‌ಗಳು ದಾಳಿಗೆ ಯತ್ನಿಸಿದ್ದು, ವಿಫಲಗೊಳಿಸಲಾಗಿದೆ ಎಂದು ಇಸ್ರೋ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಈ ಮೂಲಕ ಬಾಹ್ಯಾಕಾಶದಲ್ಲೂ ಚೀನವು ಸೋತಿದೆ.
ಅಮೆರಿಕ ಮೂಲದ “ಚೀನ ಬಾಹ್ಯಾಕಾಶ ಅಧ್ಯಯನ ಸಂಸ್ಥೆ’ (ಸಿಎಎಸ್‌ಐ) ಬಹಿರಂಗಪಡಿಸಿದ 142 ಪುಟಗಳ ವರದಿಯಲ್ಲಿ ಈ ದುಷ್ಕೃತ್ಯಗಳು ಬಯಲಾಗಿವೆ. ಚೀನದ ಕಂಪ್ಯೂಟರ್ ನೆಟ್‌ವರ್ಕ್‌ಗಳಿಂದ ಬಾಹ್ಯಾಕಾಶದಲ್ಲಿ ನಾಸಾ ಸ್ಥಾಪಿಸಿರುವ ಜೆಟ್ ನೆಟ್‌ವರ್ಕ್ ಲ್ಯಾಬೊರೇಟರಿ (ಜೆಪಿಎಲ್) ಸಂಶೋಧನ ಕೇಂದ್ರದ ಮೇಲೆ ದಾಳಿ ನಡೆಸಲಾಗಿತ್ತು. ಆದರೆ ಜೆಪಿಎಲ್ ತನ್ನ ನೆಟ್‌ವರ್ಕ್‌ಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರಿಂದ ಏನೂ ಮಾಡಲಾಗಿರಲಿಲ್ಲ ಎಂದು ವರದಿ ಹೇಳಿದೆ ಎಂಬುದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಇಸ್ರೋ ಮೇಲೂ ಕಣ್ಣು
ಇಸ್ರೋ ಸ್ಥಾಪಿತ ಉಪಗ್ರಹ ವ್ಯವಸ್ಥೆ ಮೇಲೂ ಚೀನದ ಹ್ಯಾಕರ್‌ಗಳ ವಕ್ರದೃಷ್ಟಿ ಬಿದ್ದಿತ್ತು. ಭಾರತೀಯ ಉಪಗ್ರಹ ಸಂಪರ್ಕಗಳ ಮೇಲೆ ದಾಳಿ ನಡೆಸಿ ದೂರಸಂಪರ್ಕ ವ್ಯವಸ್ಥೆಗೆ ಹಾನಿ ತರಲು ಚೀನ ಉದ್ದೇಶಿಸಿತ್ತು. 2019ರಲ್ಲಿ ಭಾರತ ಅಭಿವೃದ್ಧಿಪಡಿಸಿದ್ದ ಉಪಗ್ರಹ ಪ್ರತಿರೋಧ ಕ್ಷಿಪಣಿ ತಂತ್ರಜ್ಞಾನ ವ್ಯವಸ್ಥೆ (ಎ-ಸ್ಯಾಟ್)ಯನ್ನು ಹ್ಯಾಕರ್‌ಗಳು ಗುರಿ ಮಾಡಿದ್ದರು ಎಂದು ವರದಿ ಹೇಳಿದೆ.
ಸೋಲುಂಡ ಚೀನ
ಬೀಜಿಂಗ್‌ನ ಹ್ಯಾಕರ್‌ಗಳು 2012 ಮತ್ತು 18ರ ಅವಧಿಯಲ್ಲಿ ಬಹುಮಾದರಿಯ ಸೈಬರ್ ದಾಳಿಗೆ ಹೊಂಚು ಹಾಕಿದ್ದರು. ಆದರೆ ಇಸ್ರೋ ತನ್ನ ವ್ಯವಸ್ಥೆಗಳನ್ನು ಸುರಕ್ಷಿತವಾಗಿರಿಸಿಕೊಂಡಿದೆ ಎಂದು ವರದಿ ಹೇಳಿದೆ. “ಸೈಬರ್ ಬೆದರಿಕೆಗಳ ಹಿಂದೆ ಯಾರಿದ್ದರೆಂದು ತಿಳಿದಿರಲಿಲ್ಲ. ದಾಳಿಯ ಮುನ್ಸೂಚನೆಗಳು ಸಿಗುವಂತೆ ನಾವು ಬಾಹ್ಯಾಕಾಶದಲ್ಲಿ ತಂತ್ರಜ್ಞಾನ ಅಳವಡಿಸಿದ್ದೇವೆ. ಬಹುಶಃ ಚೀನೀಯರು ದಾಳಿ ಮಾಡಿರಬಹುದು. ಆದರೆ ಅದರಲ್ಲಿ ವಿಫಲರಾಗಿದ್ದಾರೆ’ ಎಂದು ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.
ಲಾಮಾ ವಿರುದ್ಧ ಚೀನ ಗೂಢಚರ್ಯೆ
ಚೀನವು ಬೌದ್ಧರ ಪರಮಗುರು ದಲಾಯಿ ಲಾಮಾ ಬಗ್ಗೆ ರಹಸ್ಯ ವಾರ್ತೆ ಸಂಗ್ರಹ ಮತ್ತು ಅವರ ವಿರುದ್ಧ ದಂಗೆಯೇಳಲು ರಾಜ್ಯದ ಬೈಲಕುಪ್ಪೆ ಮತ್ತು ಮುಂಡಗೋಡಿನ ಕೆಲವು ಬೌದ್ಧ ಸನ್ಯಾಸಿಗಳಿಗೆ ಲಂಚದ ಆಮಿಷ ಒಡ್ಡಿರುವ ಅಂಶ ಬಹಿರಂಗವಾಗಿದೆ. ಲಾಮಾ ಬಗ್ಗೆ ಗೂಢಚರ್ಯೆ ನಡೆಸುವುದಕ್ಕಾಗಿ ಭಾರತಕ್ಕೆ ಬಂದಿದ್ದ ಚೀನದ ಚಾರ್ಲಿ ಪೆಂಗ್ ಎಂಬಾತ ಬೈಲಕುಪ್ಪೆ ಮತ್ತು ಮುಂಡಗೋಡಿನ ಸನ್ಯಾಸಿಗಳಿಗೆ ಲಕ್ಷಾಂತರ ರೂ. ನೀಡಿದ್ದ ಎಂದು ಖಾಸಗಿ ಟಿವಿ ವಾಹಿನಿಯೊಂದು ವರದಿ ಮಾಡಿದೆ. ಈತನ ಎಸ್.ಕೆ. ಟ್ರೇಡಿಂಗ್ ಕಂಪೆನಿಯ ಖಾತೆಯಿಂದ ಬೈಲಕುಪ್ಪೆಯ ಬೌದ್ಧಾಲಯದ ಜಮಾಯಂಗ್ ಜಿಂಪಾ ಖಾತೆಗೆ 30 ಲಕ್ಷ ರೂ. ವರ್ಗಾವಣೆಯಾಗಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಡಗೋಡಿಗೂ ಹಣ
ಮುಂಡಗೋಡಿನಲ್ಲೂ ಮೂರು ಸನ್ಯಾಸಿಗಳು ಹಣ ಸ್ವೀಕರಿಸಿದ ಆರೋಪ ಎದುರಿಸುತ್ತಿದ್ದಾರೆ. ಚಾರ್ಲಿ ಪೆಂಗ್ ಹಲವು ಬೌದ್ಧ ಸನ್ಯಾಸಿಗಳಿಗೆ ಲಂಚ ನೀಡಿ, ದಲಾಯಿ ಲಾಮಾ ಮತ್ತು ಅವರ ಸಹಚರರ ಕುರಿತು ಮಾಹಿತಿ ಕಲೆಹಾಕುತ್ತಿದ್ದ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.