ಇನ್ನು ಪ್ರಿ ವೆಡ್ಡಿಂಗ್ ಶೂಟ್ ಬ್ಯಾನ್: ಯುವಜನತೆಯ ಆಕ್ರೋಶಕ್ಕೆ ಕಾರಣವಾದ ಆದೇಶದಲ್ಲೇನಿದೆ !
Team Udayavani, Dec 11, 2019, 9:41 AM IST
ಗುಜರಾತ್: ಯುವ ಸಮುದಾಯದ ಫ್ಯಾಷನ್ ಗಳಲ್ಲಿ ಒಂದಾಗಿರುವ ವಿವಾಹ ಪೂರ್ವ ಅದ್ದೂರಿ ಚಿತ್ರಿಕರಣಕ್ಕೆ ಜೈನ, ಗುಜರಾತಿ, ಸಿಂಧಿ ಸಂಘಟನೆಗಳು ನಿಷೇಧ ಹೇರಿದ್ದು ಇದನ್ನು ಬೆಂಬಲಿಸುವಂತೆ ತಮ್ಮ ಸಮುದಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಹೌದು, ಆಶ್ಚರ್ಯವಾದರೂ ಸತ್ಯ. ಜೈನ್ , ಗುಜರಾತಿ, ಸಿಂಧಿ ಸಮುದಾಯದಲ್ಲಿ ಇನ್ನು ಮುಂದೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡುವಂತಿಲ್ಲ. ಮಾತ್ರವಲ್ಲದೆ ಮಧ್ಯಪ್ರದೇಶ ರಾಜಧಾನಿಯಲ್ಲಿ ಈ ಸಮುದಾಯದ ವಿಡಿಯೋಗ್ರಫಿ ಮತ್ತು ಫೋಟೋಗ್ರಫಿಯನ್ನು ಕೂಡ ಮಾಡುವಂತಿಲ್ಲ. ಮೂರು ಸಮುದಾಯದ ಮುಖ್ಯಸ್ಥರು ಈ ಆದೇಶವನ್ನು ಹೊರಡಿಸಿದ್ದು, ಆಜ್ಞೆಯನ್ನು ಉಲ್ಲಂಘಿಸಿದವರನ್ನು ಬಹಿಷ್ಕರಿಸಲಾಗುವುದು ಎಂದಿದ್ದಾರೆ. ಮಾತ್ರವಲ್ಲದೆ ಮದುವೆ ಕಾರ್ಯಕ್ರಮಗಳಲ್ಲಿ ಮಹಿಳೆಯರ ನೃತ್ಯಕ್ಕೆ ಪುರುಷ ತರಬೇತುದಾರರನ್ನು ನೇಮಿಸಿಕೊಳ್ಳುವುದಕ್ಕೆ ಹಾಗೂ ಮದುವೆ ಮೆರವಣಿಗೆಗಳಲ್ಲಿ ನೃತ್ಯಗಳಿಗೆ ಕುಟುಂಬದ ಮಹಿಳಾ ಸದಸ್ಯರನ್ನು ಬಳಸಿಕೊಳ್ಳುವುದಕ್ಕೂ ನಿಷೇಧ ಹೇರಲಾಗಿದೆ.
ವಿವಾಹ ಪೂರ್ವ ಚಿತ್ರೀಕರಣ ಸೇರಿದಂತೆ ಮದುವೆ ಮಂಟಪದಲ್ಲಿ, ಸಭ್ಯತೆಯ ಎಲ್ಲೆಮೀರಿ ನಡೆಯುವ ನೃತ್ಯಗಳಿಂದ ನಮ್ಮ ಸಮುದಾಯದ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ. ಸಂಪ್ರದಾಯ ಹಾಗೂ ಸಮುದಾಯದ ಸಂಸ್ಕೃತಿಯನ್ನು ಕಾಪಾಡುವ ಉದ್ದೇಶದಿಂದ ಇವುಗಳಿಗೆ ನಿಷೇಧ ಹೇರಲಾಗಿದೆ. ಇಂದು ಅನೇಕ ವಿವಾಹಗಳು ಸಂಬಂಧಗಳು ಆರಂಭವಾಗುವುದಕ್ಕೆ ಮೊದಲೇ ಮುರಿದು ಹೋಗುತ್ತದೆ. ಸಮಾಜದ ಮೇಲೆ ಇವು ಕೆಟ್ಟ ಪ್ರಭಾವ ಬೀರುತ್ತದೆ ಎಂದು ವಿವರಿಸಿದ್ದಾರೆ.
ನಿಷೇಧವನ್ನು ಉಲ್ಲಂಘಿಸಿದ ಪ್ರಕರಣಗಳು ವರದಿಯಾದಲ್ಲಿ ಅಂತಹವರನ್ನು ಸಮುದಾಯ ಬಹಿಷ್ಕರಿಸಲಿದೆ ಎಂದು ಭೋಪಾಲ್ ಗುಜರಾತ್ ಸಮಾಜ ಸಂಸ್ಥೆ ಅಧ್ಯಕ್ಷ ಸಂಜಯ್ ಪಟೇಲ್ ಹೇಳಿದ್ದಾರೆ. ”ಈ ನಿಷೇಧವು ಕೇವಲ ಮಧ್ಯಪ್ರದೇಶಕ್ಕಷ್ಟೇ ಸೀಮಿತವಾಗಬಾರದು, ದೇಶಾದ್ಯಂತ ಇರುವ ಗುಜರಾತಿ ಸಮುದಾಯಗಳಿಗೆ ಅನ್ವಯವಾಗಬೇಕು ಎಂಬುದು ನನ್ನ ಅಪೇಕ್ಷೆಯಾಗಿದೆ,” ಎಂದಿದ್ದಾರೆ.
”ವಿವಾಹ ಪೂರ್ವ ಚಿತ್ರೀಕರಣ ನಮ್ಮ ಸಂಪ್ರದಾಯವೇ ಅಲ್ಲ, ಮಹಿಳೆಯರ ನೃತ್ಯಕ್ಕೆ ಪುರುಷ ತರಬೇತುದಾರನ ನೇಮಕವು ಅಸಭ್ಯತೆಗೆ ಕಾರಣವಾಗುವ ಹಿನ್ನೆಲೆಯಲ್ಲಿಇದನ್ನು ನಿಷೇಧಿಸುವಂತೆ ಧಾರ್ಮಿಕ ಮುಖಂಡರು ಮಾರ್ಗದರ್ಶನ ಮಾಡಿದ್ದರು. ಅದರಂತೆ ಈ ನಿರ್ಧಾರ ಕೈಗೊಂಡಿದ್ದೇವೆ,” ಎಂದು ಭೋಪಾಲ್ ಜೈನ ಸಮಾಜದ ಪ್ರಮೋದ್ ಹಿಮಾಂಶು ಜೈನ್ ಹೇಳಿದ್ದಾರೆ.
ಮಧ್ಯಪ್ರದೇಶದ ಸಾರ್ವಜನಿಕ ಸಂಪರ್ಕ ಸಚಿವ ಪಿ.ಸಿ ಶರ್ಮಾ ಈ ಕ್ರಮವನ್ನು ಬೆಂಬಲಿಸಿದ್ದು ಪ್ರಿ ವೆಡ್ಡಿಂಗ್ ಶೂಟ್ ನಮ್ಮ ಸಂಸ್ಕೃತಿಯಲ್ಲ. ಇಂದಿನ ಯುವಜನತೆ ಸಾಂಪ್ರದಾಯಿಕ ಸಂಸ್ಕೃತಿಯನ್ನು ಅನುಸರಿದರೆ ಅವರ ದಾಂಪತ್ಯ ಜೀವ ಸಂತೋಷದಾಯಕವಾಗಿ ಮತ್ತು ಯಶಸ್ವಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Poll: ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ; ಕೈ ವಿರೋಧ
Delhi: ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ… ಬಳಿಕ ನಡೆದದ್ದು ಘೋರ
ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ
Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!
ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.