ಶೀಘ್ರ ಎಟಿಎಂಗಳಲ್ಲೂ ಸಿಗಲಿವೆ 200ರ ನೋಟು
Team Udayavani, Jan 5, 2018, 7:20 AM IST
ನವದೆಹಲಿ: ಚಿಲ್ಲರೆ ಸಮಸ್ಯೆ ನಿವಾರಣೆಗಾಗಿ ಬಿಡುಗಡೆ ಮಾಡಿರುವ 200 ರೂ. ಮುಖಬೆಲೆಯ ನೋಟು ಎಟಿಎಂಗಳಲ್ಲಿ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಎಲ್ಲ ಬ್ಯಾಂಕುಗಳಿಗೂ ಆರ್ಬಿಐ ಸೂಚನೆ ನೀಡಿದೆ.
ಸದ್ಯ 200 ರೂ. ನೋಟುಗಳು ಬ್ಯಾಂಕುಗಳಲ್ಲಿ ಸಿಗುತ್ತಿವೆಯೇ ಹೊರತು ಎಟಿಎಂಗಳಲ್ಲಿ ಸಿಗುತ್ತಿಲ್ಲ. ಇಲ್ಲೂ ಅವುಗಳು ಸಾರ್ವಜನಿಕರಿಗೆ ಸಿಗುವಂತಾಗಬೇಕು ಎಂದರೆ, ಎಟಿಎಂಗಳನ್ನು ಮೇಲ್ದರ್ಜೆಗೆ (ರಿಕ್ಯಾಲಿಬರೇಟ್) ಏರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಆರ್ಬಿಐ ಸೂಚಿಸಿದೆ. ಹೀಗಾಗಿ ಬ್ಯಾಂಕ್ಗಳು ಹಣ ವಿಥ್ಡ್ರಾ ಮಾಡುವ ವ್ಯವಸ್ಥೆ ಮೇಲ್ದರ್ಜೆಗೆ ಏರಿಸಲು 110 ಕೋಟಿ ರೂ.ಗಳನ್ನು ವ್ಯಯಿಸ ಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ತಿ ಗೊಳ್ಳಲು 6 ತಿಂಗಳು ಪೂರ್ತಿಯಾಗಬಹುದು.
ಮಿತಿಗೆ ಚಿಂತನೆ?: ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ 2 ಸಾವಿರ ರೂ. ನೋಟುಗಳನ್ನು ವಿಥ್ಡ್ರಾ ಮಾಡುವುದರ ಮೇಲೆ ನಿಯಂತ್ರಣ ಹೇರಲೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. 2 ಸಾವಿರ ರೂ. ನೋಟುಗಳು ಎಟಿಎಂನಲ್ಲಿ ಸಿಗಲು ಆರಂಭವಾದ ಬಳಿಕ 2017ರ ಸೆಪ್ಟೆಂಬರ್ ವೇಳೆಗೆ ವಿಥ್ಡ್ರಾವಲ್ ಮಿತಿ 2.44 ಕೋಟಿ ರೂ.ಗೆ ಏರಿಕೆಯಾಗಿದೆ. 2016ರ ಸೆಪ್ಟೆಂಬರ್ ವೇಳೆಗೆ ಅದರ ಪ್ರಮಾಣ 2.22 ಕೋಟಿ ರೂ. ಇತ್ತು. ಗಮನಾರ್ಹ ಅಂಶವೆಂದರೆ ಕಳೆದ ಜುಲೈ ನಲ್ಲಿಯೇ 2 ಸಾವಿರ ರೂ. ನೋಟು ಮುದ್ರಣ ವನ್ನು ಆರ್ಬಿಐ ಸ್ಥಗಿತಗೊಳಿಸಿತ್ತು.
ಹೊಸ 10 ರೂ. ನೋಟು: ಇದೇ ವೇಳೆ, ಆರ್ಬಿಐ ಹೊಸ 10 ರೂ. ಮುಖಬೆಲೆಯ ನೋಟು ಗಳನ್ನು ವಿನ್ಯಾಸ ಮಾಡಿದ್ದು, ಇದು ಚಾಕೊಲೇಟ್ ಬೂದು ಬಣ್ಣದಲ್ಲಿರಲಿದೆ. ನೋಟಿನಲ್ಲಿ ಕೊನಾರ್ಕ್ ಸೂರ್ಯ ದೇಗುಲದ ಚಿತ್ರ ಇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.