ಕಪ್ಪು ಹಣ ಸುಲಭದಲ್ಲಿ ಬಿಳಿ ಮಾಡಲು ನೋಟು ಅಮಾನ್ಯ: ಲಾಲು
Team Udayavani, Nov 8, 2017, 3:30 PM IST
ಪಟ್ನಾ : ಕಪ್ಪು ಹಣವನ್ನು ಅತ್ಯಂತ ಸುಲಭದಲ್ಲಿ ಬಿಳಿ ಮಾಡುವ ಉದ್ದೇಶಕ್ಕಾಗಿ ನೋಟು ಅಮಾನ್ಯ ಕ್ರಮವನ್ನು ಮೋದಿ ಸರಕಾರ ಜಾರಿಗೆ ತಂದಿತು ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ನೋಟು ಅಮಾನ್ಯಕ್ಕೆ ವರ್ಷ ತುಂಬಿದ ದಿನವಾದ ಇಂದು ಲಾಲು ಅವರ ಆರ್‌ಜೆಡಿ ಪಕ್ಷ ಬಿಹಾರ ರಾಜ್ಯಾದ್ಯಂತ ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿತು.
“ಕಪ್ಪು ಹಣವನ್ನು ಅತ್ಯಂತ ಸುಲಭದಲ್ಲಿ ಬಿಳಿ ಮಾಡಲು ನೋಟು ಅಮಾನ್ಯವನ್ನು ಜಾರಿಗೆ ತರಲಾಯಿತು. ಇದನ್ನು ಜನಸಾಮಾನ್ಯರ ಹಿತದೃಷ್ಟಿಯಿಂದ ಜಾರಿಗೆ ತರಲಾಗಿದೆ ಎಂದು ಹೇಳುವ ಮೂಲಕ ಸರಕಾರ ಅವರನ್ನು ಮೂರ್ಖರನ್ನಾಗಿ ಮಾಡಿತು’ ಎಂದು ಲಾಲು ಹೇಳಿದರು.
ನೋಟು ಅಮಾನ್ಯಕ್ಕೆ ವರ್ಷ ತುಂಬಿದ ಇಂದಿನ ದಿನವನ್ನು ಕಾಲಾ ಧನ್ ವಿರೋಧಿ ದಿವಸ್ ಎಂದು ಆಚರಿಸುತ್ತಿರುವ ಬಿಜೆಪಿಯನ್ನು ಲಾಲು ಲೇವಡಿ ಮಾಡಿದರು.
ವರ್ಷದ ಹಿಂದೆ ಈ ದಿನ ಪ್ರಧಾನಿ ಮೋದಿ ಅವರು 500 ಮತ್ತು 1,000 ರೂ. ನೋಟುಗಳನ್ನು ಅಮಾನ್ಯ ಮಾಡುವ ನಿರ್ಧಾರ ಪ್ರಕಟಿಸಿದಾಗ ಇದು ಕಾಳದನವನ್ನು ಹೊರಹಾಕುವ ಅತ್ಯಂತ ಮಹತ್ವದ ಕ್ರಮವೆಂದು ವರ್ಣಿಸಿದ್ದರು. ಆದರೆ ಮೋದಿ ಸರಕಾರ ಈ ದಿನದ ವರೆಗೂ ಎಷ್ಟು ಕಾಳಧನವನ್ನು ಅರ್ಥ ವ್ಯವಸ್ಥೆಯಿಂದ ಹೊರಹಾಕಲಾಯಿತು ಎಂಬ ಲೆಕ್ಕವನ್ನು ಜನಸಾಮಾನ್ಯರಿಗೆ ನೀಡಿಲ್ಲ ಎಂದು ಲಾಲು ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.