ನೋಟಿನ ಏಟಿಗೆ ಜಿಡಿಪಿ ಶೇ.7.1ಕ್ಕೆ ಕುಸಿತ
Team Udayavani, Jun 1, 2017, 2:51 AM IST
ಹೊಸದಿಲ್ಲಿ: ಮೂರು ವರ್ಷಗಳ ಬಳಿಕ ದೇಶದ ಆರ್ಥಿಕ ಪ್ರಗತಿ ಅನಿರೀಕ್ಷಿತವಾಗಿ ತೀವ್ರ ಕೆಳ ಮಟ್ಟಕ್ಕೆ ಕುಸಿದಿದ್ದು, ಭಾರತವನ್ನು ವಿಶ್ವ ದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅತಿದೊಡ್ಡ ಆರ್ಥಿಕತೆ ಎಂಬ ಸ್ಥಾನಮಾನದಿಂದ ವಂಚಿತಗೊಳಿಸಿದೆ. ಜನವರಿಯಿಂದ ಮಾರ್ಚ್‌ವರೆಗಿನ ತ್ತೈಮಾಸಿಕ ಅವಧಿಯಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ.6.1ಕ್ಕೆ ಕುಸಿದಿದ್ದು, ನೋಟುಗಳ ಅಪಮೌಲ್ಯವು ಆರ್ಥಿಕತೆಯ ಮೇಲೆ ಪ್ರಭಾವ ಬೀರಿರುವುದನ್ನು ಸ್ಪಷ್ಟಪಡಿಸಿದೆ.
ಬುಧವಾರ ಕೇಂದ್ರ ಅಂಕಿ ಅಂಶ ಕಚೇರಿ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಕಳೆದ ತ್ತೈಮಾಸಿಕದಲ್ಲಿದ್ದ ಶೇ.7.0 ಜಿಡಿಪಿ ಜನವರಿ – ಮಾರ್ಚ್ ಅವಧಿಯಲ್ಲಿ ಶೇ. 6.1ಕ್ಕೆ ಕುಸಿದಿದೆ. ಈ ಮೂಲಕ 2016-17ನೇ ವಿತ್ತೀಯ ವರ್ಷದ ಜಿಡಿಪಿ ಶೇ.7.1ಕ್ಕೆ ತಲುಪಿದಂ ತಾಗಿದೆ. ಇದು ಕಳೆದ 3 ವರ್ಷಗಳಲ್ಲೇ ಜಿಡಿಪಿಯಲ್ಲಾದ ಅತ್ಯಧಿಕ ಇಳಿಕೆೆ. 2015 – 16ರಲ್ಲಿ ಇದು ಶೇ.8 ಮತ್ತು ಅದಕ್ಕಿಂತಲೂ ಮೊದಲ ವರ್ಷದಲ್ಲಿ ಶೇ.7.5 ಆಗಿತ್ತು. 2017ರ ಮೊದಲ 3 ತಿಂಗಳಲ್ಲಿ ಚೀನದ ಜಿಡಿಪಿ ಶೇ. 6.9ನ್ನು ತಲುಪಲೂ ಭಾರತಕ್ಕೆ ಸಾಧ್ಯವಾಗಿಲ್ಲ. ನೋಟುಗಳ ಅಪಮೌಲ್ಯದ ಬಳಿಕ ಕೃಷಿ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳ ಪ್ರಗತಿಯೂ ಕುಸಿದಿದೆ. ಏತನ್ಮಧ್ಯೆ, ಮೂಲಸೌಲಭ್ಯಕ್ಕೆ ಪೂರಕವಾದ ಪ್ರಮುಖ 8 ವಲಯದಲ್ಲಿ ಪ್ರಗತಿ ದರ ಇಳಿಮುಖವಾಗಿದೆ. ಎಪ್ರಿಲ್‌ನಲ್ಲಿ ಇದು ಶೇ. 2.5ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಲ್ಲಿ ದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ರಸಗೊಬ್ಬರ, ಉಕ್ಕು, ಸಿಮೆಂಟ್‌ವಲಯದ ಪ್ರಗತಿ ದರ ಶೇ. 8.7 ರಷ್ಟಿತ್ತು.
ಕೃಷಿ ಕ್ಷೇತ್ರದಲ್ಲಿ ಪ್ರಗತಿ
ಉತ್ತಮ ಮಳೆಯಿಂದಾಗಿ ಕೃಷಿ ಕ್ಷೇತ್ರವು ಆಘಾತದಿಂದ ತಪ್ಪಿಸಿಕೊಂಡಿದೆ. ಈ ವಲಯವು 2016- 17ರಲ್ಲಿ ಶೇ.4.9ರಷ್ಟಾಗಿದ್ದು, ಅದರ ಹಿಂದಿನ ವರ್ಷ ಇದು ಶೇ.0.7ರಷ್ಟಿತ್ತು. 4ನೇ ತ್ತೈಮಾಸಿಕವೊಂದ ರಲ್ಲೇ ಕೃಷಿ ಕ್ಷೇತ್ರದ ಪ್ರಗತಿ ಶೇ.5.2 ಆಗಿದೆ. ಇದೇ ವೇಳೆ, 2016-17ರ ವಿತ್ತೀಯ ಕೊರತೆಯು ಜಿಡಿಪಿಯ ಶೇ.3.51ರಷ್ಟಿದೆ ಎಂದೂ ಸರಕಾರ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರ ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ
ನಮ್ಮ ಪಕ್ಷಕ್ಕೆ ಮಾನ್ಯತೆ ಸಿಗುತ್ತಿಲ್ಲ, ಸಚಿವ ಸ್ಥಾನ ತೊರೆವೆ: ಮಾಂಜಿ ಎಚ್ಚರಿಕೆ
MUST WATCH
ಹೊಸ ಸೇರ್ಪಡೆ
Arrested: ರೌಡಿಯ ಕೊಂದು ಸುಟ್ಟು ಹಾಕಿದ್ದ ರೌಡಿಶೀಟರ್ ಸೆರೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ