ನೋಟು ಅಮಾನ್ಯ ತೆರಿಗೆ ಅಪರಾಧ ಪತ್ತೆ
Team Udayavani, Apr 1, 2019, 6:00 AM IST
ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ: ನರೇಂದ್ರ ಮೋದಿ ಸರಕಾರ ಕೈಗೊಂಡಿದ್ದ ನೋಟು ಅಮಾನ್ಯದಿಂದಾಗಿ 14 ಲಕ್ಷ ಅನುಮಾನಾಸ್ಪದ ವಹಿವಾಟುಗಳ ವರದಿಯಾಗಿದ್ದು, ಇದು ದೇಶದ ಇತಿಹಾಸದಲ್ಲೇ ಅತಿ ಹೆಚ್ಚಿನದಾಗಿದೆ ಎಂದು ಹಣಕಾಸು ವಿಚಕ್ಷಣಾ ದಳ (ಎಫ್ಐಯು) ವರದಿ ಮಾಡಿದೆ.
ಖೋಟಾನೋಟು ಬ್ಯಾಂಕ್‌ಗೆ ಬಂದಿರುವುದು ಸೇರಿದಂತೆ ಹಲವು ರೀತಿಯ ಪ್ರಕರಣಗಳು 2017-18ರ ವಿತ್ತ ವರ್ಷದಲ್ಲಿ ದಾಖಲಾಗಿವೆ. ದಶಕದ ಹಿಂದೆ ಎಫ್ಐಯು ಆರಂಭವಾದಾಗಿನಿಂದ ಈ ಮಟ್ಟದ ಅನುಮಾನಾಸ್ಪದ ವಹಿವಾಟುಗಳು ವರದಿಯಾಗಿರಲಿಲ್ಲ. ನೋಟು ಅಮಾನ್ಯ ಘೋಷಣೆಗೂ ಮುನ್ನ ವರದಿಯಾದ ಪ್ರಕರಣಗಳಿಗೆ ಹೋಲಿಸಿದರೆ ಇದು 14 ಪಟ್ಟು ಹೆಚ್ಚಿನದಾಗಿದೆ. 2015-16 ರಲ್ಲಿ ಕೇವಲ 1 ಲಕ್ಷ ಇಂತಹ ಪ್ರಕರಣಗಳು ವರದಿಯಾಗಿದ್ದವು.
2018 ನವೆಂಬರ್ 8 ರಂದು ನೋಟು ಅಮಾನ್ಯ ಘೋಷಣೆ ಯಾದ ನಂತರದಲ್ಲಿ ಭಾರಿ ಮೊತ್ತ ನಗದು ಬ್ಯಾಂಕ್‌ನಲ್ಲಿ ಜಮೆಯಾಗಿದೆ. ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ ರುವ ಈ ಎಫ್ಐಯು ಹಣಕಾಸು ಅವ್ಯವಹಾರ, ಉಗ್ರರಿಗೆ ಹಣಕಾಸಿನ ನೆರವು ಹಾಗೂ ಇತರ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡುತ್ತದೆ ಮತ್ತು ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಯಾವುದೇ ಅನುಮಾನಾಸ್ಪದ ವಹಿವಾಟುಗಳನ್ನು ಎಫ್ಐಯುಗೆ ವರದಿ ಮಾಡುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.