![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Sep 7, 2019, 5:01 AM IST
ಮುಂಬೈ: ದೃಷ್ಟಿ ವಿಕಲಚೇತನರಿಗಾಗಿ ನೋಟುಗಳನ್ನು ಗುರುತಿಸಲು ಸುಲಭವಾಗುವಂತೆ ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣದಲ್ಲಿ ಪ್ರತಿವಾದ ಮಂಡಿಸಿದ ಆರ್‌ಬಿಐ, ನವೆಂಬರ್ 1 ರಂದು ಪ್ರಾಯೋಗಿಕ ಆವೃತ್ತಿಯ ಆ್ಯಪ್ ಬಿಡುಗಡೆಯಾಗಲಿದೆ. ಇದು ಇಂಟರ್ನೆಟ್ ಇಲ್ಲದೇ ಕೆಲಸ ಮಾಡಲಿದೆ ಎಂದಿದೆ.
ಕರೆನ್ಸಿ ನೋಟುಗಳು ಮತ್ತು ನಾಣ್ಯಗಳು ದಿನದಿಂದ ದಿನಕ್ಕೆ ಗಾತ್ರದಲ್ಲಿ ಸಣ್ಣದಾಗುತ್ತಿದ್ದು, ಇದನ್ನು ದೃಷ್ಟಿ ವಿಕಲ ಚೇತನರು ಗುರುತಿಸಲು ಕಷ್ಟವಾಗುತ್ತಿದೆ ಎಂದು ಅಂಧರ ರಾಷ್ಟ್ರೀಯ ಸಂಘಟನೆ ಬಾಂಬೆ ಹೈಕೋರ್ಟ್ ಮೊರೆ ಹೋಗಿತ್ತು. ಮುಂದಿನ ವಿಚಾರಣೆಯ ವೇಳೆ ಆ್ಯಪ್ ಹೇಗೆ ಕೆಲಸ ಮಾಡುತ್ತದೆ ಎಂಬುದಾಗಿ ಹೈಕೋರ್ಟ್ ಪೀಠಕ್ಕೆ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಮುಂದಿನ ವಿಚಾರಣೆಯನ್ನು ನ. 4ಕ್ಕೆ ನಿಗದಿಸಲಾಗಿದೆ. ನೋಟು ಹಾಗೂ ನಾಣ್ಯಗಳನ್ನು ಜೇಬಿಗೆ ಅನುಕೂಲವಾಗುವಂತೆ ಕಿರಿದಾಗಿಸಲಾಗಿದೆ. ಅಮೆರಿಕ ಹಾಗೂ ಇತರ ದೇಶಗಳ ಕರೆನ್ಸಿಯ ಮಾದರಿಯನ್ನು ಇದಕ್ಕೆ ಅನುಸರಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದ್ದು, ಸದ್ಯಕ್ಕೆ ನೋಟು, ನಾಣ್ಯಗಳನ್ನು ಇನ್ನೂ ಸಣ್ಣದಾಗಿಸುವ ಇರಾದೆಯಿಲ್ಲ ಎಂದಿದೆ.
You seem to have an Ad Blocker on.
To continue reading, please turn it off or whitelist Udayavani.