“ನೋಟು ರದ್ದತಿಯಿಂದ ತಾತ್ಕಾಲಿಕ ಆರ್ಥಿಕ ಕುಸಿತ’
Team Udayavani, Jan 6, 2017, 3:50 AM IST
ನವದೆಹಲಿ: ಕಪ್ಪುಹಣ ಮತ್ತು ಭ್ರಷ್ಟಾಚಾರ ನಿರ್ಮೂಲನೆಯ ನಿಟ್ಟಿನಿಂದ ಜಾರಿಮಾಡಿದ ಅಪನಗದೀಕರಣ ಕ್ರಮ ತಾತ್ಕಾಲಿಕ
ವಾಗಿ ಆರ್ಥಿಕ ಕುಸಿತಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಈ ಕ್ರಮದಿಂದ ಬಡವರು ತೊಂದರೆ ಅನುಭವಿಸುವುದನ್ನು ಕಡಿಮೆ ಮಾಡಲು ಸರ್ಕಾರ ಹೆಚ್ಚಿನ ಮುತುವರ್ಜಿ ತೋರಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುರುವಾರ ಹೇಳಿದ್ದಾರೆ.
ವಿಡಿಯೋ ಕಾನೆ#ರೆನ್ಸ್ ಮೂಲಕ ರಾಜ್ಯಪಾಲರು ಮತ್ತು ಉಪರಾಜ್ಯಪಾಲ ರನ್ನು ಉದ್ದೇಶಿಸಿ ಮಾತನಾಡಿದ ಪ್ರಣಬ್ ಮುಖರ್ಜಿ, ಅಪನಗದೀಕರಣ ತಾತ್ಕಾ ಲಿಕ ಆರ್ಥಿಕ ಕುಸಿತಕ್ಕೆ ಕಾರಣವಾಗ ಬಹುದು. ಆದರೆ, ಜನರು ತುಂಬಾ ದಿನಗಳ ಕಾಲ ತೊಂದರೆ ಅನುಭವಿಸುತ್ತಾರೆ ಎಂದು ಅನಿಸುವು ದಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಹೊಸ ವರ್ಷದ ಮುನ್ನಾ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಬಡವರ, ಜನಸಾಮಾನ್ಯರ ಪರವಾದ ಹಲ ಕ್ರಮಗ ಳನ್ನು ಪ್ರಕಟಿಸಿದ್ದಾರೆ. ಇವು ಜನತೆಗೆ ಕೊಂಚ ನಿರಾಳತೆ ಒದಗಿಸಬ ಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸ್ವಾಗತ: ಪ್ರಣಬ್ ಮುಖರ್ಜಿ ಅವರ ಹೇಳಿಕೆ ಮೋದಿ ಅವರಿಗೆ ಸತ್ಯ ದರ್ಶನ ಮಾಡಿಸಿದೆ. ಮನೆಯ ಹಿರಿಯ ಮಗುವಿಗೆ ಪಾಠ ಕಲಿಸಿದಂತೆ ಪ್ರಣಬ್ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇìವಾಲಾ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.