Notice Issued: ಸರ್ಕಾರಿ ಬಂಗಲೆ ಖಾಲಿ ಮಾಡದ ಮಾಜಿ ಸಂಸದೆ ಮಹುವಾ ಮೊಯಿತ್ರಾಗೆ ನೋಟಿಸ್ ಜಾರಿ
Team Udayavani, Jan 9, 2024, 8:59 AM IST
ನವದೆಹಲಿ: ಸರ್ಕಾರಿ ಬಂಗಲೆಯನ್ನು ತೆರವು ಮಾಡದಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾಜಿ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಎಸ್ಟೇಟ್ ನಿರ್ದೇಶನಾಲಯ (ಡಿಒಇ) ಸೋಮವಾರ ಶೋಕಾಸ್ ನೋಟಿಸ್ ನೀಡಿದೆ. ನಗರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ಈ ಮಾಹಿತಿಯನ್ನು ನೀಡಿದೆ.
ಕಳೆದ ವರ್ಷ ಡಿಸೆಂಬರ್ 8 ರಂದು ತೃಣಮೂಲ ಕಾಂಗ್ರೆಸ್ ಸಂಸದೆ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲಾಗಿತ್ತು. ಅವರ ಖಾತೆಯನ್ನು ರದ್ದುಗೊಳಿಸಿದ್ದರಿಂದ ಜನವರಿ 7 ರೊಳಗೆ ಬಂಗಲೆಯನ್ನು ಖಾಲಿ ಮಾಡುವಂತೆ ತಿಳಿಸಲಾಯಿತು. ಆದರೆ ಇದುವರೆಗೂ ಬಂಗಲೆ ಖಾಲಿ ಮಾಡದ ಕಾರಣ ಶೋಕಾಸ್ ನೋಟಿಸ್ ನೀಡಿದ್ದು 3 ದಿನಗಳಲ್ಲಿ ಉತ್ತರಿಸುವಂತೆ ಎಸ್ಟೇಟ್ ನಿರ್ದೇಶನಾಲಯ ಕೇಳಿದೆ.
ಮೊಯಿತ್ರಾ ಅವರಿಗೆ ನೀಡಲಾದ ಶೋಕಾಸ್ ನೊಟೀಸ್ ನಲ್ಲಿ ಸರ್ಕಾರಿ ಬಂಗಲೆಯನ್ನು ಏಕೆ ಇನ್ನೂ ತೆರವು ಮಾಡಿಲ್ಲ ಎಂದು ಕೇಳಲಾಗಿದ್ದು ಇದಕ್ಕೆ ಉತ್ತರ ನೀಡುವಂತೆ ಕೇಳಿದೆ.
ಇದನ್ನೂ ಓದಿ: White House: ಶ್ವೇತಭವನದ ಗೇಟ್‌ಗೆ ಕಾರು ಡಿಕ್ಕಿ… ಪೊಲೀಸರಿಂದ ಚಾಲಕನ ವಿಚಾರಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.