![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Jun 28, 2019, 5:15 AM IST
ಹೊಸದಿಲ್ಲಿ: ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮ (ಎಂಎಸ್‌ಎಂಇ) ವಲಯದ ಅಭಿವೃದ್ಧಿಗೆ ಸಹಾಯಕವಾಗುವ ಕೇಂದ್ರ ಸರಕಾರದ “ಜನ ಸಂಪರ್ಕ ಸಭೆ’ (ಔಟ್‌ರೀಚ್) ಈ ವರ್ಷ ಪುನಃ ಆಯೋಜಿ ಸುವಂತೆ ದೇಶದ ಎಲ್ಲ ಸಾರ್ವಜನಿಕ ಬ್ಯಾಂಕುಗಳಿಗೆ ಕೇಂದ್ರ ಸರಕಾರ ಜೂ. 27ರಂದು ನಿರ್ದೇಶನ ನೀಡಿದೆ.
ಸರಕಾರದ ಮಹತ್ವಾಕಾಂಕ್ಷೆಯ ಈ ಕಾರ್ಯಕ್ರಮದ ಪ್ರಯೋಜನವನ್ನು ಸಮಾಜದ ತಳಮಟ್ಟದಲ್ಲಿರುವ ಜನಸಾಮಾನ್ಯರಿಗೂ ಮುಟ್ಟಿಸುವ ಪ್ರಯತ್ನವಾಗಿ, ಆ ಕಾರ್ಯಕ್ರಮವನ್ನು ಪುನಃ ಆಯೋಜಿಸಬೇಕೆಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ ಮೇರೆಗೆ ಸಚಿವಾಲಯ ಈ ನಿರ್ದೇಶನ ನೀಡಿದೆ.
ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಎಂಎಸ್‌ಎಂಇ ವಲಯದ ಅನುಕೂಲಕ್ಕಾಗಿ 2018ರ ನವೆಂಬರ್ 2ರಂದು ಪ್ರಧಾನ ಮಂತ್ರಿಯವರಿಂದ “ಸಾರ್ವಜನಿಕ ಸಂಪರ್ಕ ಸಭೆ ಕಾರ್ಯಕ್ರಮ’ವನ್ನು (ಔಟ್ ರೀಚ್ ಪ್ರೋಗ್ರಾಂ) ಅನುಷ್ಠಾನಗೊಂಡಿತ್ತು.
ಬ್ಯಾಂಕುಗಳ ಅಧಿಕಾರಿಗಳು ಹಾಗೂ ಎಂಎಸ್‌ಎಂಇ ವಲಯದ ಎಲ್ಲಾ ಉದ್ಯಮಿಗಳು ಈ ಸಭೆಯಲ್ಲಿ ಹಾಜರಾಗುವಂತೆ ಈ ಸಭೆಯನ್ನು ರೂಪಿಸಲಾಗಿದೆ.
ಈ ಸಭೆಯಲ್ಲಿ, ಉದ್ಯಮಿಗಳು ತಮಗೆ ಉಂಟಾಗಿರುವ ಅನನುಕೂಲ, ಸರಕಾರದಿಂದ ಸಿಗಬೇಕಾದ ನೆರವು ಅಥವಾ ಸೌಲಭ್ಯಗಳು, ತಮ್ಮ ಉತ್ಪನ್ನಗಳನ್ನು ಮಾರಲು ಬೇಕಾದ ಉತ್ತಮ ಮಾರುಕಟ್ಟೆ ವ್ಯವಸ್ಥೆ, ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆಗೆ ಸಿಗಲಿರುವ ಸೌಲಭ್ಯಗಳು ಮುಂತಾದ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸಲಿದ್ದಾರೆ.
ಇದರಿಂದ, ಎಂಎಸ್‌ಎಂಇ ವಲಯಕ್ಕೆ ಸುಲಭ ಸಾಲ ಸೌಲಭ್ಯ, ಉತ್ಪನ್ನಗಳ ಸರಳ ಮಾರಾಟ, ತಂತ್ರಜ್ಞಾನ ಅಳವಡಿಕೆ, ಸ್ನೇಹಮಯ ವ್ಯಾಪಾರ ವ್ಯವಸ್ಥೆ, ಈ ಸಂಸ್ಥೆಗಳಲ್ಲಿ ದುಡಿಯುವ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಮುಂತಾದ ಅನುಕೂಲಗಳನ್ನು ಕಲ್ಪಿಸಲು ಈ ಸಭೆ ನೆರವಾಗಲಿದೆ.
ಇದರ ಜತೆಗೆ, ಎಂಎಸ್‌ಎಂಇ ವಲಯ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶವೂ ಇದರ ಹಿಂದಿದೆ. ಇಂಥ ಸಭೆಗಳಲ್ಲಿ ಮಂಡನೆಯಾಗುವ ಸಮಸ್ಯೆ, ವಿಚಾರಗಳು ಸರಕಾರದ ಗಮನಕ್ಕೆ ಬೇಗನೇ ಬರುವುದರಿಂದ ಸಮಸ್ಯೆಗಳನ್ನು ತ್ವರಿತ ಪರಿಹಾರ ಕ್ಕೆ ಅನುಕೂಲವಾಗುತ್ತದೆ. ಹಾಗಾಗಿ, ಇದನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಕೇಂದ್ರ ಸರಕಾರ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿದೆ.
ದೇಶದ ರಾಷ್ಟ್ರೀಯ ಉತ್ಪನ್ನ, ರಫ್ತು, ಕೈಗಾರಿಕಾ ಉತ್ಪಾದನೆ, ಉದ್ಯೋಗಾವಕಾಶ ಮುಂತಾದ ಕ್ಷೇತ್ರಗಳಲ್ಲಿ ತನ್ನದೇ ಆದ ಕಾಣಿಕೆಗಳನ್ನು ಸಲ್ಲಿಸುವ ಮೂಲಕ ದೇಶದ ಅಭಿವೃದ್ಧಿಗೆ ಎಂಎಸ್‌ಎಂಇ ವಲಯ ಕೈ ಜೋಡಿಸಿದೆ. ಆದರೆ, ಈ ವಲಯವು ಇತ್ತೀಚಿನ ಕೆಲವು ವರ್ಷಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು, ಹಿನ್ನಡೆಗಳನ್ನು ಗಂಭೀರವಾಗಿ ಮನಗಂಡಿರುವ ಸರಕಾರ ಅವುಗಳ ನಿವಾರಣೆಗೆ ಕಟಿಬದ್ಧವಾಗಿದೆ. ಅವುಗಳ ನಿವಾರಣೆಗಾಗಿಯೇ “ಔಟ್ ರೀಚ್’ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.