ಉಗ್ರನ ಮೃತದೇಹ ಕೊಂಡು ಹೋಗಿ: ಪಾಕ್‌ಗೆ ಭಾರತ
Team Udayavani, Aug 3, 2017, 10:00 AM IST
ಶ್ರೀನಗರ: ಮಂಗಳವಾರ ಕಾಶ್ಮೀರ ಪುಲ್ವಾಮಾದಲ್ಲಿ ಮಹತ್ವದ ಎನ್‌ಕೌಂಟರ್‌ಗೆ ಬಲಿಯಾದ ಲಷ್ಕರ್ ಉಗ್ರ ಅಬು ದುಜಾನಾ ಮೃತದೇಹವನ್ನು ಕೊಂಡುಹೋಗುವಂತೆ ಪಾಕಿಸ್ಥಾನ ಹೈಕಮಿಷನ್‌ಗೆ ಕೇಂದ್ರ ಗೃಹ ಇಲಾಖೆ ತಿಳಿಸಲಿದೆ. ಹೀಗೆಂದು ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ದುಜಾನಾ ಪಾಕ್ ಪ್ರಜೆಯಾದ ಕಾರಣ ಅವನ ಶವವನ್ನು ಅಲ್ಲಿಗೆ ಕಳುಹಿಸಲು ನಿರ್ಧರಿಸಲಾಗಿದೆ. ಆದರೆ, ಕಣಿವೆ ರಾಜ್ಯದಲ್ಲಿ ಈ ಹಿಂದೆಯೂ ಅನೇಕ ಪಾಕ್ ಮೂಲದ ಉಗ್ರರು ಹತ್ಯೆಗೀಡಾಗಿದ್ದರೂ ಮೃತದೇಹ ಕೊಂಡುಹೋಗುವಂತೆ ಪಾಕಿಸ್ಥಾನಕ್ಕೆ ಕೋರುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ಇದೇ ವೇಳೆ, ಮಂಗಳವಾರದ ಎನ್‌ಕೌಂಟರ್ ವೇಳೆ ಪ್ರತಿಭಟಿಸಲು ಮುಂದಾಗಿ ಗಾಯಗೊಂಡಿದ್ದ ಪ್ರತ್ಯೇಕತಾವಾದಿ ಗುಂಪಿನ ಸದಸ್ಯ ಬುಧವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಬರ್‌ಪೂರ ನಿವಾಸಿ ಅಖೀಲ್ ಅಹಮ್ಮದ್ ಭಟ್ ಸಾವನ್ನಪ್ಪಿದ ವ್ಯಕ್ತಿ. ದುಜಾನಾ ಹತ್ಯೆ ಬಳಿಕ ಜಂಟಿ ಕಾರ್ಯಾಚರಣೆ ನಡೆಸಿದ ಗಡಿ ಭದ್ರತಾ ಪಡೆ ಹಾಗೂ ಪೊಲೀಸರ ವಿರುದ್ಧವೇ ಗುಂಪು ಪ್ರತಿಭಟಿಸಿ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಪೊಲೀಸರು ಅಶ್ರುವಾಯು ಹಾಗೂ ಗುಂಡಿನ ದಾಳಿ ನಡೆಸಿತ್ತು. ಘಟನೆಯಲ್ಲಿ ಗಾಯಗೊಂಡು ಸಾವನ್ನಪ್ಪಿರುವವರಲ್ಲಿ ಅಖೀಲ್ ಎರಡನೆಯವರಾಗಿದ್ದಾರೆ. ಫಿರ್ದೋಸ್ ಎಂಬವರು ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ಎನ್‌ಕೌಂಟರ್ ಬಳಿಕ ಪುಲ್ವಾಮಾ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಕಾಶ್ಮೀರ ವಿಚಾರ ಸೇರಿದಂತೆ ಎಲ್ಲದರಲ್ಲೂ ಚೀನ ಸದಾ ಬೆಂಬಲ ನೀಡುತ್ತಿರುವುದಕ್ಕೆ ನಾವು ಚಿರಋಣಿಗಳಾಗಿದ್ದೇವೆ.
– ಜ. ಖಮರ್ ಜಾವೇದ್ ಬಾಜ್ವಾ, ಪಾಕ್ ಸೇನಾ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.