ನಿರ್ದಿಷ್ಟ ಹುದ್ದೆಗೆ ಮೆರಿಟ್ ಮಾತ್ರ ಮಾನದಂಡ
Team Udayavani, Aug 23, 2017, 9:55 AM IST
ನವದೆಹಲಿ: ಇನ್ನು ಮುಂದೆ ಕೇಂದ್ರ ಸಚಿವರು ತಮಗೆ ಬೇಕಾದ ಖಾಸಗಿ ಕಾರ್ಯದರ್ಶಿಗಳು ಹಾಗೂ ವಿಶೇಷ ಕರ್ತವ್ಯ ಅಧಿಕಾರಿಗಳ ನೇಮಕಕ್ಕೆ ಲಾಬಿ ನಡೆಸುವಂತಿಲ್ಲ. ಆಯಾ ಹುದ್ದೆಗಳಿಗೆ ಅರ್ಹತೆ ಒಂದೇ ಮಾನದಂಡವಾಗಿದೆ ಎಂದು ಸಿಬ್ಬಂದಿ ಸಚಿವಾಲಯ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಸಚಿವರ ಖಾಸಗಿ ಕಾರ್ಯದರ್ಶಿಗಳು ಮತ್ತು ವಿಶೇಷ ಕರ್ತವ್ಯ ಅಧಿಕಾರಿಗಳನ್ನು ಮೆರಿಟ್ ಹಾಗೂ ಪ್ರಾಮಾಣಿಕತೆ ಆಧರಿಸಿಯೇ ನಿಯೋಜನೆ ಮಾಡಲಾಗುವುದು. ಇದಕ್ಕಾಗಿ ಕೇಂದ್ರ ಸಚಿವರು ತಮಗೆ ಇಷ್ಟಬಂದ ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಯಾವುದೇ ಲಾಬಿ ನಡೆಸುವಂತಿಲ್ಲ. ಪಾರದರ್ಶಕ ಆಡಳಿತ ನೀಡಲು ಅರ್ಹತೆ ಇರುವ ವ್ಯಕ್ತಿಗೆ ಮಾತ್ರವೇ ಇಂತಹ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದೆ. ‘3 ವರ್ಷಗಳ ಸುಸ್ಥಿರ ಮಾನವ ಸಂಪನ್ಮೂಲ ಕಾರ್ಯತತ್ಪರತೆ: ನವಭಾರತಕ್ಕೆ ಅಡಿಪಾಯ’ ಎಂಬ ಶೀರ್ಷಿಕೆಯಡಿ ಮಂಗಳವಾರ ಬಿಡುಗಡೆಯಾದ ಪುಸ್ತಿಕೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ವಿವಿಧ ಸಚಿವಾಲಯದಡಿ ಒಟ್ಟು 291 ಜಂಟಿ ಕಾರ್ಯದರ್ಶಿ ಹುದ್ದೆಗಳಿದ್ದು, ಈ ಪೈಕಿ ಐಎಎಸ್‌ಯೇತರ ಅಧಿಕಾರಿಗಳು 120 ಜಂಟಿ ಕಾರ್ಯ ದರ್ಶಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.