ತಮಿಳುನಾಡಿನಲ್ಲಿ ಗ್ರಾಮ ಸಚಿವಾಲಯ; ಸ್ಟಾಲಿನ್ ಸರ್ಕಾರದ ಹೊಸ ಯೋಜನೆ
ಸ್ಥಳೀಯ ಆಡಳಿತಕ್ಕೆ ಉತ್ತೇಜನ ನೀಡಲು ಕ್ರಮ
Team Udayavani, Apr 23, 2022, 7:55 AM IST
ಚೆನ್ನೈ: ತಮಿಳುನಾಡಿನ ಪ್ರತಿ ಗ್ರಾಮಗಳಲ್ಲಿ “ಗ್ರಾಮ ಸಚಿವಾಲಯ’ ನಿರ್ಮಿಸುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶುಕ್ರವಾರ ಘೋಷಿಸಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಈ ಘೋಷಣೆ ಮಾಡಿದ್ದಾರೆ. ಈ ವರ್ಷವೇ 600 ಗ್ರಾಮ ಸಚಿವಾಲಯಗಳ ನಿರ್ಮಾಣವಾಗಲಿದೆ. ಪ್ರತಿಯೊಂದನ್ನೂ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ.
ಏನೇನು ಸೌಲಭ್ಯಗಳು? ಸರ್ಕಾರದ ಸೌಲಭ್ಯಗಳನ್ನು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ” ಗ್ರಾಮ ಸಚಿವಾಲಯ’ಗಳನ್ನು ನಿರ್ಮಿಸಲಾಗುತ್ತದೆ. ಅಲ್ಲಿ ಪಂಚಾಯಿತಿ ಅಧ್ಯಕ್ಷರಿಗೆ ಕೊಠಡಿ, ಕಾನ್ಫರೆನ್ಸ್ ಹಾಲ್, ಗ್ರಾಮ ಆಡಳಿತಾಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ಕಚೇರಿಗಳು ಇರಲಿವೆ.
ಪ್ರಶಸ್ತಿ:
ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರುವ ಗ್ರಾಮ ಪಂಚಾಯಿತಿಗಳಿಗೆ “ಉತ್ತಮರ್ ಗಾಂಧಿ ಪ್ರಶಸ್ತಿ’ ಕೊಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ಉತ್ತಮ ಕಾರ್ಯ ಮಾಡಿದ ಒಂದು ಗ್ರಾಮಕ್ಕೆ 10 ಲಕ್ಷ ರೂ. ಪ್ರೋತ್ಸಾಹ ಧನವಾಗಿ ಕೊಡಲಾಗುವುದು ಎಂದರು ಸಿಎಂ ಸ್ಟಾಲಿನ್.
ಇದನ್ನೂ ಓದಿ:ಸಂಸದೆ ನವನೀತ್ ಕೌರ್, ಪತಿ ವಿರುದ್ಧ ಕೇಸು ದಾಖಲು
ಭತ್ಯೆ ಹೆಚ್ಚಳ:
ಸ್ಥಳೀಯ ಪ್ರತಿನಿಧಿಗಳ ಭತ್ಯೆಯನ್ನೂ 5ರಿಂದ 10 ಪಟ್ಟು ಹೆಚ್ಚಳ ಮಾಡಿ ಸ್ಟಾಲಿನ್ ಘೋಷಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರ ಭತ್ಯೆಯನ್ನು 5 ಪಟ್ಟು ಹೆಚ್ಚಳ ಮಾಡಲಾಗುವುದು.
ಪ್ರತಿ ವರ್ಷ ನ.1ನ್ನು “ಸ್ಥಳೀಯ ಆಡಳಿತ ದಿನ’ವಾಗಿ ಆಚರಿಸಲಾಗುವುದು. . ಪ್ರತಿ ವರ್ಷ ನಡೆಸಲಾಗುವ ಗ್ರಾಮ ಸಭೆಗಳನ್ನು 4ರಿಂದ 6ಕ್ಕೆ ಏರಿಕೆ ಮಾಡಲಾಗಿದೆ. ಆಂಧ್ರಪ್ರದೇಶದಲ್ಲೂ ಇದೇ ಮಾದರಿಯ ವ್ಯವಸ್ಥೆ ಜಾರಿಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.