ಅಸ್ಸಾಂ ಎನ್‌ಆರ್‌ಸಿ ಸಂಪೂರ್ಣ ನಿಷ್ಪಕ್ಷ; ಅತಂಕ ಬೇಡ: ರಾಜನಾಥ್
Team Udayavani, Jul 30, 2018, 12:21 PM IST
ಹೊಸದಿಲ್ಲಿ : ಅಸ್ಸಾಂ ಪ್ರಜೆಗಳ ರಾಷ್ಟ್ರೀಯ ಕರಡು ದಾಖಲೆ ಸಂಪೂರ್ಣವಾಗಿ ನಿಷ್ಪಕ್ಷವಾಗಿದ್ದು ಇದರಲ್ಲಿ ಹೆಸರು ಸೇರ್ಪಡೆಯಾಗದವರು ಆತಂಕ ಪಡುವ ಅಗತ್ಯವಿಲ್ಲ ; ಅಂತಹವರಿಗೆ ತಮ್ಮ ಭಾರತೀಯ ಪೌರತ್ವ ಸಾಬೀತುಪಡಿಸಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಇಂದು ಪ್ರಕಟಿಸಲಾಗಿರುವ ಅಸ್ಸಾಂ ಎನ್‌ಆರ್‌ಸಿ ಕರಡು ದಾಖಲೆಯಲ್ಲಿ ಸುಮಾರು 40ಲಕ್ಷ ರಾಜ್ಯದ ನಿವಾಸಿಗಳ ಹೆಸರು ಕಂಡು ಬಂದಿಲ್ಲ; ಇದು ಜನರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.
ಈ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ರಾಜನಾಥ್ ಸಿಂಗ್, “ಯಾರ ವಿರುದ್ದವೂ ಯಾವುದೇ ರೀತಿಯ ಬಲವಂತದ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ; ಆದುದರಿಂದ ಯಾರೂ ಆತಂಕ ಪಡಬೇಕಾಗಿಲ್ಲ’ ಎಂದು ಹೇಳಿದರು.
”ಅಂತಿಮ ದಾಖಲೆ ಪತ್ರಗಳಲ್ಲಿ ಯಾರ ಹೆಸರು ಇಲ್ಲವೋ ಅವರು ವಿದೇಶೀಯರ ನ್ಯಾಯಮಂಡಳಿಯನ್ನು ಸಂಪರ್ಕಿಸುವುದಕ್ಕೆ ಅವಕಾಶ ಇರುತ್ತದೆ; ಕೆಲವರು ಅನಗತ್ಯವಾಗಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಅಸ್ಸಾಂ ಎನ್‌ಆರ್‌ಸಿ ಕರಡು ದಾಖಲೆ ಪತ್ರಗಳು ಸಂಪೂರ್ಣವಾಗಿ ನಿಷ್ಪಕ್ಷದ್ದಾಗಿವೆ; ಈ ಬಗ್ಗೆ ಯಾರೂ ಯಾರಲ್ಲೂ ತಪ್ಪು ಅಭಿಪ್ರಾಯ ಹರಡಬಾರದು; ಇದಿನ್ನೂ ಕರಡು ದಾಖಲೆ ಪತ್ರ; ಅಂತಿಮ ಅಲ್ಲ” ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Flight: ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?
Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ
Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Kasaragod ಅಪರಾಧ ವಾರ್ತೆ; ಆನೆಯ ತುಳಿತಕ್ಕೆ ಮಾವುತ ಸಹಿತ ಇಬ್ಬರ ಸಾವು
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Kasaragod: ವಂದೇ ಭಾರತ್‌ಗೆ ಕಲ್ಲೆಸೆತ, ಹಳಿಯಲ್ಲಿ ಕಲ್ಲಿರಿಸಿದ ಇಬ್ಬರ ಬಂಧನ
Flight: ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.