ನುಸುಳುಕೋರರ ಬಗ್ಗೆ ವಿಪಕ್ಷಗಳ ನಿಲುವೇನು?
Team Udayavani, Aug 6, 2018, 9:29 AM IST
ಚಂದೌಲಿ/ಹೊಸದಿಲ್ಲಿ: “ಬಾಂಗ್ಲಾದೇಶದ ಅಕ್ರಮ ನುಸುಳುಕೋರರು ಭಾರತದಲ್ಲೇ ಇರಬೇಕೇ ಅಥವಾ ಅವರನ್ನು ಹೊರದಬ್ಬಬೇಕೇ ಎಂದು ನಾನು ಕಾಂಗ್ರೆಸ್, ಎಸ್‌ಪಿ ಮತ್ತು ಬಿಎಸ್ಪಿಯನ್ನು ಕೇಳಲು ಬಯಸುತ್ತೇನೆ. ಇದಕ್ಕೆ ಅವರು ಉತ್ತರಿಸಲಿ.’
ಹೀಗೆಂದು ವಿಪಕ್ಷಗಳಿಗೆ ಸವಾಲು ಹಾಕಿದ್ದು ಬಿಜೆಪಿ ಅಧ್ಯಕ್ಷ ಅಮಿತ್ ಶಾ. ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್‌ಆರ್‌ಸಿ) ಕುರಿತು ಗದ್ದಲವೆಬ್ಬಿಸುತ್ತಿರುವ ಪ್ರತಿಪಕ್ಷಗಳಿಗೆ ನೇರ ಸವಾಲು ಹಾಕಿರುವ ಬಿಜೆಪಿ ಅಧ್ಯಕ್ಷ, ಈ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ.
ಉತ್ತರಪ್ರದೇಶದ ಮುಘಲ್‌ಸರಾಯ್ ಜಂಕ್ಷನ್ ಅನ್ನು ಆರ್‌ಎಸ್‌ಎಸ್ ಸಿದ್ಧಾಂತವಾದಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಎಂದು ಮರುನಾಮಕರಣ ಮಾಡಿರುವ ಹಿನ್ನೆಲೆಯಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಅಮಿತ್ ಶಾ ಈ ಮಾತುಗಳನ್ನಾಡಿದ್ದಾರೆ.
“ಎನ್‌ಆರ್‌ಸಿ ಮಾಡಬಾರದು ಎಂದು ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ಹೇಳುತ್ತಿದ್ದಾರೆ. ದೇಶಾದ್ಯಂತ ಎನ್‌ಆರ್‌ಸಿ ಮಾಡಬೇಕೇ, ಬೇಡವೇ ಎಂದು ನಾನು ರಾಹುಲ್ ಬಾಬಾಗೆ ಕೇಳಿದೆ. ಆದರೆ, ಅದಕ್ಕೆ ಅವರ ಬಳಿ ಉತ್ತರವಿರಲಿಲ್ಲ. ಬಾಂಗ್ಲಾದೇಶಿ ನುಸುಳುಕೋರರನ್ನು ಭಾರತದಿಂದ ಹೊರಗಟ್ಟಬೇಕೇ, ಬೇಡವೇ ಎಂಬುದನ್ನು ಈಗ ಅವರೇ ನಿರ್ಧರಿಸಬೇಕು. ಉತ್ತರಪ್ರದೇಶದ ಜನರ ಉತ್ತರವೇನೆಂದು ನನಗೆ ಗೊತ್ತು. ಭಾರತದಲ್ಲಿ ಒಬ್ಬನೇ ಒಬ್ಬ ನುಸುಳುಕೋರನೂ ಇರಬಾರದು ಎಂದೇ ಅವರು ಬಯಸುತ್ತಾರೆ’ ಎಂದು ಶಾ ಹೇಳಿದ್ದಾರೆ.
ಇದೇ ವೇಳೆ, ಇತರೆ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿ ಮಸೂದೆ ಕುರಿತೂ ಕಾಂಗ್ರೆಸ್ ರಾಜ್ಯಸಭೆಯಲ್ಲಿ ತನ್ನ ನಿಲುವು ಸ್ಪಷ್ಟಪಡಿಸಲಿ ಎಂದಿದ್ದಾರೆ ಶಾ. ಲೋಕಸಭೆಯಲ್ಲಿ ಒಬಿಸಿ ವಿಧೇಯಕಕ್ಕೆ ಅಂಗೀಕಾರ ಪಡೆಯುವಲ್ಲಿ ಮೋದಿ ಸರಕಾರ ಯಶಸ್ವಿಯಾಗಿದೆ. ಅದೀಗ ರಾಜ್ಯಸಭೆಯ ಅಂಗಳದಲ್ಲಿದೆ. ನಿಜಕ್ಕೂ ಕಾಂಗ್ರೆಸ್‌ಗೆ ಹಿಂದುಳಿದವರ ಬಗ್ಗೆ ಕಾಳಜಿಯಿದ್ದರೆ, ರಾಜ್ಯಸಭೆಯಲ್ಲಿ ಅದನ್ನು ಅಂಗೀಕಾರ ಮಾಡಲು ಕಾಂಗ್ರೆಸ್ ಬೆಂಬಲ ನೀಡ ಲಿದೆಯೇ ಎಂಬುದನ್ನು ರಾಹುಲ್ ಗಾಂಧಿಯವರು ಸ್ಪಷ್ಟಪಡಿಸಬೇಕು ಎಂದು ಶಾ ಹೇಳಿದ್ದಾರೆ.
ಬಿಜೆಪಿ ಕ್ಷಮೆ ಕೇಳಲಿ
ಎನ್‌ಆರ್‌ಸಿ ಎನ್ನುವುದು ಕಾಂಗ್ರೆಸ್‌ನ ಕನಸಿನ ಕೂಸು ಎಂದು ಹೇಳುವ ಮೂಲಕ ಶನಿವಾರ ಉಲ್ಟಾ ಹೊಡೆದಿದ್ದ ಕಾಂಗ್ರೆಸ್, ಎನ್‌ಆರ್‌ಸಿ ಪ್ರಕ್ರಿಯೆಗೆ ಅಡ್ಡಿಪಡಿಸಲು ಬಿಜೆ ಪಿ ಯೇ ಹೊರಟಿತ್ತು ಎಂದು ರವಿವಾರ ಆರೋಪಿಸಿದೆ. 2017ರಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆಯಾಗುತ್ತದೆ ಎಂಬ ನೆಪ ಹೇಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಬಿಜೆಪಿ, ಎನ್‌ಆರ್‌ಸಿ ಅನುಷ್ಠಾನವನ್ನು ವಿಳಂಬ ಗೊಳಿಸಲು ಯತ್ನಿಸಿತ್ತು. ಇಡೀ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡಲು ಸುಳ್ಳುಗಳ ಶಾ ಮತ್ತು ಜುಮ್ಲಾಗಳ ಶಹೇನ್‌ಶಾ ಯತ್ನಿಸಿದ್ದರು. ಅಮಿತ್ ಶಾ ಅವರು ಸಂಸತ್‌ನಲ್ಲಿ ಸುಳ್ಳು ಹೇಳುತ್ತಿದ್ದಾರೆ. ಆದರೆ, 2017ರ ನ.30ರಂದು ಇದೇ ವಿಚಾರ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಇತಿಹಾಸ ದಲ್ಲೇ ಮರೆಯಲಾಗದ ಘಟನೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ. ಜತೆಗೆ, ಎನ್‌ಆರ್‌ಸಿಗೆ ಅಡ್ಡಿ ಉಂಟುಮಾಡಿದ ಬಿಜೆಪಿ ಅಸ್ಸಾಂ ಜನತೆಯ ಕ್ಷಮೆ ಕೇಳಬೇಕು ಎಂದೂ ಆಗ್ರಹಿಸಿದ್ದಾರೆ.
ಎನ್‌ಆರ್‌ಸಿ ಕರಡು ಬಿಡುಗಡೆಯಾದ ಬಳಿಕ ಅಸ್ಸಾಂನಲ್ಲಿ ಒಂದೇ ಒಂದು ಹಿಂಸಾಚಾರ ಪ್ರಕರಣವೂ ನಡೆದಿಲ್ಲ. ರಕ್ತಪಾತವಾಗುತ್ತದೆ, ನಾಗ ರಿಕ ಯುದ್ಧ ಶುರುವಾಗುತ್ತದೆ ಎಂಬ ಮಮತಾ ಬ್ಯಾನರ್ಜಿ ಅವರ ಹೇಳಿಕೆ ಸಿಎಂ ಹುದ್ದೆಗೆ ತಕ್ಕುದಲ್ಲ.
ಸರ್ಬಾನಂದ ಸೊನೊವಾಲ್, ಅಸ್ಸಾಂ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.