Modi ಹೆಸರಲ್ಲಿ ಒಬಿಸಿ ದ್ವೇಷ: ಕಾಂಗ್ರೆಸ್ ವಿರುದ್ಧ ಪ್ರಧಾನಿ ಆಕ್ರೋಶ
ಅಧಿಕಾರದಲ್ಲಿದ್ದಾಗ ಸಮುದಾಯದ ನಿರ್ಲಕ್ಷ್ಯ
Team Udayavani, Nov 14, 2023, 12:03 AM IST
ಮುಂಗೇಲಿ/ಮಹಾಸಮುಂದ್: ಛತ್ತೀಸ್‌ಗಢದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ ಕಾ ರದ ಪತನದ ಕ್ಷಣಗಣನೆ ಶುರುವಾಗಿದೆ. ಜತೆಗೆ ಮೋದಿಯನ್ನು ದ್ವೇಷಿಸುವ ಭರದಲ್ಲಿ ಒಬಿಸಿ ಸಮುದಾಯವನ್ನೇ ದ್ವೇಷಿಸುತ್ತಿದೆ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.
ನ. 17ರಂದು 70 ಕ್ಷೇತ್ರಗಳಿಗೆ ಎರಡನೇ ಹಂತ ದಲ್ಲಿ ಮತದಾನ ನಡೆಯಲಿರುವ ಹಿನ್ನೆಲೆ ಯಲ್ಲಿ ಮುಂಗೇಲಿ ಮತ್ತು ಮಹಾಸಮುಂದ್‌ಗಳಲ್ಲಿ ಪ್ರಧಾನಿ ಬಿರುಸಿನ ಪ್ರಚಾರ ನಡೆಸಿದರು.
“ಮೋದಿಯನ್ನು ದ್ವೇಷಿಸುವ ಕಾಂಗ್ರೆಸ್‌ನ ಕೆಲವು ನಾಯಕರು ಈಗ ನನ್ನ ಜಾತಿಯನ್ನೂ ದ್ವೇಷಿಸುತ್ತಾರೆ. ಅವರು ಮೋದಿ ಒಬಿಸಿ ಸಮು ದಾಯ ದಿಂದ ಬಂದವರು ಎನ್ನುತ್ತಾರೆ’ ಎಂದು ಟೀಕಿಸಿದರು. ಮೋದಿಯ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಹಲವು ವರ್ಷಗಳಿಂದ ಒಬಿಸಿ ಸಮುದಾಯವನ್ನು ದ್ವೇಷಿಸುತ್ತಲೇ ಬಂದಿದ್ದಾರೆ ಎಂದು ತಿಳಿ ಸಿದರು.
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಈ ಸಮು ದಾಯಕ್ಕೆ ಏನನ್ನೂ ಮಾಡಲಿಲ್ಲ ಎಂದು ಪ್ರಧಾನಿ ಆರೋ ಪಿಸಿದರು. 2019ರ ಲೋಕಸಭೆ ಚುನಾ ವಣೆಯಲ್ಲಿ ನರೇಂದ್ರ ಮೋದಿಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಒಬಿಸಿ ಸಮುದಾಯವನ್ನು ಕಳ್ಳರು ಎಂದು ಟೀಕಿಸಿತ್ತು ಎಂದು ಆರೋಪಿಸಿ ದ್ದಾರೆ. ಹೀಗಾಗಿ, ಸಮುದಾಯದ ವಿರುದ್ಧ ಆ ಪಕ್ಷ ಭಾರೀ ಪ್ರಮಾಣದ ದ್ವೇಷ ಹೊಂದಿದೆ ಎಂದರು. ಹಲವು ಸಮಯದ ವರೆಗೆ ಒಬಿಸಿ ಆಯೋಗಕ್ಕೆ ಕಾಂಗ್ರೆಸ್ ಸರ ಕಾ ರದ ಅವಧಿಯಲ್ಲಿ ಸಾಂವಿಧಾನಿಕ ಮಾನ್ಯತೆಯನ್ನೇ ನೀಡಲಿಲ್ಲ. ಜತೆಗೆ ಮೀಸಲಾತಿಯನ್ನೂ ನೀಡಲಿಲ್ಲ ಎಂದರು.
ಹಾಸ್ಯಾಸ್ಪದ
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಡಿಸಿಎಂ ಟಿ.ಎಸ್.ಸಿಂಗ್ ದಿಯೋ ನಡುವೆ ಇರುವ ಅಧಿಕಾರ ಹಂಚಿಕೆಯ ಒಪ್ಪಂದವೇ ಹಾಸ್ಯಾಸ್ಪದ ಎಂದು ಪ್ರಧಾನಿ ಲೇವಡಿ ಮಾಡಿದ್ದಾರೆ. ಅದರ ಮೂಲ ಉದ್ದೇಶವೇ ಜಾರಿಯಾಗಿಲ್ಲ ಎಂದು ಛೇಡಿಸಿದ ಪ್ರಧಾನಿ, “ಹಿರಿಯ ನಾಯಕನಿಗೆ ಮೋಸ ಮಾಡುವ ಕಾಂಗ್ರೆಸ್, ರಾಜ್ಯದ ಜನರಿಗೆ ಮೋಸ ಮಾಡದೇ ಇರಲು ಸಾಧ್ಯವೇ’ ಎಂದು ಪ್ರಶ್ನಿಸಿದರು. ಹಾಲಿ ಚುನಾವಣೆಯಲ್ಲಿ ಮುಖ್ಯಮಂತ್ರಿಯೇ ಪಟಾನ್ ಕ್ಷೇತ್ರದಿಂದ ಸೋಲುವ ಸಾಧ್ಯತೆಗಳು ಇವೆ ಎಂದು ಹೊಸ ದಿಲ್ಲಿಯಲ್ಲಿನ ತಮ್ಮ ಕೆಲವು ಪತ್ರಕರ್ತ ಸ್ನೇಹಿತರು ಹೇಳಿದ್ದಾರೆ ಎಂದರು.
ರಾಜ್ಯವನ್ನು ಲೂಟಿ ಮಾಡುವುದೇ ಕಾಂಗ್ರೆಸ್‌ನ ಪ್ರಧಾನ ಧ್ಯೇಯವಾಗಿತ್ತು ಎಂದು ದೂರಿದ ಪ್ರಧಾನಿ, ಮುಖ್ಯಮಂತ್ರಿ ಭೂಪೇಶ್ ಬಘೇಲ್, ಅವರ ಪುತ್ರ ಮತ್ತು ಇತರ ಅಧಿಕಾರಿಗಳು ಸೂಪರ್ ಸಿಎಂ ಆಗುವ ಮೂಲಕ ಸಂಪತ್ತು ದೋಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿಯದ್ದೇ ಗ್ಯಾರಂಟಿ
ಮಧ್ಯಪ್ರದೇಶದ ಬರ್ವಾನಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ “ಬಿಜೆಪಿ ಅಧಿಕಾರ ಉಳಿಸಿಕೊಂಡಾಗ ಮೋದಿಯ ಹೆಸರಿನಲ್ಲಿ ನೀಡಿದ ಭರವಸೆಗಳೆಲ್ಲ ಜಾರಿಯಾಗಲಿವೆ’ ಎಂದರು. ಕೇಂದ್ರ ಸರ ಕಾ ರದ ಉಚಿತ ಪಡಿತರ ಯೋಜನೆ 80 ಕೋಟಿ ಮಂದಿಗೆ ಲಾಭವಾಗುತ್ತಿದೆ ಎಂದರು.
ದೇಶದ ಭ್ರಷ್ಟಾಚಾರದ ರಾಜಧಾನಿ ಮಧ್ಯಪ್ರದೇಶ
ಮಧ್ಯಪ್ರದೇಶದ ದೇಶದ ಭ್ರಷ್ಟಾಚಾರದ ರಾಜಧಾನಿ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಮಧ್ಯಪ್ರದೇಶ ನಿಮೂಚ್‌ನಲ್ಲಿ ಮಾತನಾಡಿದ ಅವರು, ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ ಕಾರದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯದೇ, ಭ್ರಷ್ಟಾರ ನಡೆದದ್ದೇ ಹೆಚ್ಚು. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ ಕಾರಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.