ಜಲಿಯನ್ ವಾಲಾಬಾಗ್ ಗ್ಯಾಲರಿಯಲ್ಲಿ ಅರೆ ನಗ್ನ ಫೋಟೋ ಪ್ರದರ್ಶನಕ್ಕೆ ಆಕ್ಷೇಪ
ಪ್ರಧಾನಿ ಮೋದಿ, ಗೃಹ, ರಕ್ಷಣಾ ಸಚಿವರಿಗೆ ಬಾಬಿ ಕಾಂಬೋಜ್ ಪತ್ರ
Team Udayavani, Jul 21, 2020, 9:58 AM IST
ಸಾಂದರ್ಭಿಕ ಚಿತ್ರ
ಅಮೃತಸರ: ಜಲಿಯನ್‌ವಾಲಾ ಬಾಗ್‌ನ ನವೀ ಕರಿಸಿದ ಫೋಟೊ ಗ್ಯಾಲರಿಯಲ್ಲಿ ಎರಡು ಅರೆ ಬೆತ್ತಲೆ ಮಹಿಳೆಯರ ಭಾವಚಿತ್ರ ಇಡಲಾಗಿದ್ದು, ಇದು ವಿವಾದಕ್ಕೆ ಕಾರಣವಾ ಗಿದೆ. ಈ ಭಾವ ಚಿತ್ರಗಳು ಅಜಂತಾ ಮತ್ತು ಎಲ್ಲೋರಾ ಗುಹೆ ಗಳಲ್ಲಿ ಚಿತ್ರಿಸಲಾದ ಶಿಲ್ಪ ಕಲೆಯ ಕೆತ್ತನೆಯನ್ನು ಹೋಲುತ್ತವೆ.
ಅಂತಾರಾಷ್ಟ್ರೀಯ ಸರ್ವ್ ಕಾಂಬೋಜ್ ಸಮಾಜದ ಅಧ್ಯಕ್ಷ ಬಾಬಿ ಕಾಂಬೋಜ್ ಅವರು ಈ ಸಂಬಂಧ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಪತ್ರ ಬರೆದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ವೀರರು, ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ ದೇವ್ ಅವರಂತಹ ಮಹನೀಯರ ಭಾವಚಿತ್ರಗಳಿರುವ ಜಾಗದಲ್ಲಿ ಇಂತಹ ಅರೆನಗ್ನ ಮಹಿಳೆಯರ ಭಾವ ಚಿತ್ರಗಳನ್ನು ಇಟ್ಟಿ ರುವುದು ಅವಮಾನಕರ. ತಕ್ಷಣವೇ ಇವುಗಳ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದ್ದಾರೆ. ನವೀಕರಣದ ಉಸ್ತುವಾರಿ, ಸಂಸದ, ಜಲಿಯನ್‌ವಾಲಾ ಬಾಗ್ ಸ್ಮಾರಕ ಟ್ರಸ್ಟ್‌ನ ಟ್ರಸ್ಟಿ, ಶ್ವೇತ್ ಮಲ್ಲಿಕ್ ಈ ಬಗ್ಗೆ ಪ್ರತಿಕ್ರಿಯಿಸಿ, ಇದು ತಮ್ಮ ಗಮನಕ್ಕೆ ಬಂದಿಲ್ಲ. ಈ ಭಾವ ಚಿತ್ರಗಳ ತೆರವಿಗೆ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರು ಜಲಿಯನ್‌ವಾಲಾ ಬಾಗ್ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾಗಿ ದ್ದಾರೆ. ಜಲಿಯನ್‌ವಾಲಾ ಬಾಗ್ ಸ್ಮಾರಕದ ನವೀಕರಣ ಕಾರ್ಯಕ್ಕೆ ಕಳೆದ ಫೆಬ್ರವರಿ 15ರಂದು ಚಾಲನೆ ನೀಡಲಾಗಿದ್ದು, ಜುಲೈ 31ಕ್ಕೆ ಇದನ್ನು ಸಾರ್ವಜನಿಕರ ಪ್ರವೇಶಕ್ಕೆ ತೆರೆಯಲಾ ಗುವುದು. ಇದರ ನವೀಕರಣಕ್ಕೆ ಕೇಂದ್ರ ಸರಕಾರ ಮೊದಲ ಹಂತದಲ್ಲಿ 20 ಕೋಟಿ ರೂ.ಗಳನ್ನು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WMO: 2025ರಲ್ಲೂ ದಾಖಲೆಯ ತಾಪಮಾನ: 10 ವರ್ಷಗಳಿಂದ ಹೆಚ್ಚುತ್ತಿದೆ ಬಿಸಿಯ ಮಾಪಕ
Wayanad ಭೂಕುಸಿತ ಭಾರೀ ಪ್ರಾಕೃತಿಕ ವಿಕೋಪ: 5 ತಿಂಗಳ ಬಳಿಕ ಕೇಂದ್ರ ಘೋಷಣೆ
Telgi stamp paper scam: ಕರ್ನಾಟಕದ ಓರ್ವ ಸೇರಿ 5 ಮಂದಿಗೆ ಸಜೆ
Assam; ಚಹಾರ್ ಜಿಲ್ಲೆ 4 ಗ್ರಾಮ ಬಾಲ್ಯ ವಿವಾಹ ಮುಕ್ತ: ಸಿಎಂ ಹಿಮಾಂತ್
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.