ಕೇರಳದಲ್ಲಿ ಭೂಮಿ ಕಬಳಿಸಿದ ಸಾಗರ!
Team Udayavani, Jan 13, 2019, 12:30 AM IST
ಕೊಲ್ಲಂ: ನಾನಾ ಊರುಗಳಲ್ಲಿ, ಜಮೀನುಗಳಲ್ಲಿ ಪ್ರತಿಷ್ಠಿತ ವ್ಯಕ್ತಿಗಳು, ಸಂಸ್ಥೆಗಳು, ಬಿಲ್ಡರ್‌ಗಳು ಸರಕಾರಿ ಜಾಗವನ್ನು ಒತ್ತುವರಿ ಮಾಡುವ ಆರೋಪಗಳನ್ನು ಕೇಳಿದ್ದೇವೆ. ಈಗ ಕೇರಳದ ಸಮುದ್ರವೂ ಇದೇ ರೀತಿಯ ಭೂ ಕಬಳಿಕೆ ಆರೋಪಕ್ಕೆ ಒಳಗಾಗಿದೆ.
ಅಲ ಪ್ಪಾಡ್ ಎಂಬ ಸಾಗರ ತಡಿಯ ಈ ಗ್ರಾಮದ ಭೂಮಿಯನ್ನು ಇಷ್ಟಿಷ್ಟೇ ನುಂಗಿರುವ ಆರೋಪ ಇಲ್ಲಿನ ಅರಬ್ಬಿ ಸಮುದ್ರದ್ದು. ಅಷ್ಟಕ್ಕೂ ಇಲ್ಲಿ ಕಬಳಿಕೆಯಾಗಿರುವ ಭೂಮಿ ಎಷ್ಟು ಗೊತ್ತೇ? ಬರೋಬ್ಬರಿ 81.9 ಚದರ ಕಿ.ಮೀ. ವಿಸ್ತೀರ್ಣದ್ದು! ಆದರೆ, ಇದಾಗಿರುವುದು ತೀರಾ ಇತ್ತೀಚೆಗೇನಲ್ಲ. ಇದಕ್ಕೆ 62 ವರ್ಷಗಳ ಇತಿಹಾಸವಿದೆ. 1955ರ ಲಿಥೋ ಮ್ಯಾಪ್‌ನಲ್ಲಿ ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 89.5 ಚದರ ಕಿ.ಮೀ. ಭೂಮಿಯಿತ್ತು. 2017ರ ಗೂಗಲ್ ಮ್ಯಾಪ್ ಪ್ರಕಾರ, ಇದು ಈಗ ಕೇವಲ 7.6 ಚದರ ಕಿ.ಮೀ.ಗಳಷ್ಟಿದೆ.
ಕಾರಣವೇನು?: ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝಡ್) ವ್ಯಾಪ್ತಿಗೆ ಬರುವ ಈ ಹಳ್ಳಿಯ ಸಮುದ್ರದ ದಂಡೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇಲ್ಲಿನ ಗ್ರಾಮ ಪಂಚಾಯತ್‌ಗೆ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿನ ಜನ ದೂರುತ್ತಿದ್ದು, ಕಳೆದ 70 ದಿನಗಳಿಂದ ಗ್ರಾಮ ಉಳಿಸಲು ಆಗ್ರಹಿಸಿ ಧರಣಿ ಕುಳಿತಿದ್ದಾರೆ.
ಸಮುದ್ರದಲ್ಲಿ ಮುಳುಗಡೆಯಾಗಿರುವ ಕೇರಳದ ಅಲಪ್ಪಾಡ್ ಗ್ರಾಮದ ಭೂಮಿ
ಕಳೆದ 62 ವರ್ಷಗಳಲ್ಲಿ ಮುಳುಗಡೆಯಾಗಿರುವ ಭೂಮಿಯ ಅಳತೆ 81.9 ಚ.ಕಿ.ಮೀ.
1955ರಲ್ಲಿ 81.9 ಚದರ ಕಿ.ಮೀ.ನಷ್ಟಿದ್ದ ಭೂಮಿ ಈಗ ಕೇವಲ 7.6 ಚದರ ಕಿ.ಮೀ.ನಷ್ಟು ಮಾತ್ರ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.