![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 30, 2021, 3:56 PM IST
ಪ್ರಾತಿನಿಧಿಕ ಚಿತ್ರ
ಭುವನೇಶ್ವರ: ಒಡಿಶಾ ಸರ್ಕಾರವು ಕೋವಿಡ್ ಸೋಂಕು ಹಾಗೂ ಚಂಡ ಮಾರುತದ ವಿಪತ್ತುಗಳ ಕುರಿತಾದ ವಿಚಾರಗಳನ್ನು ಪ್ರೌಢ ಶಾಲೆ ಹಾಗೂ ಕಾಲೇಜುಗಳ ಪಠ್ಯ ಕ್ರಮಗಳಲ್ಲಿ ಅಳವಡಿಸಲು ನಿರ್ಧರಿಸಿದ ಎಂಬ ವರದಿಯಾಗಿದೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಂತ್ರಿ ಮಂಡಳಿಯ ಸಭೆಯಲ್ಲಿ ಈ ನಿಟ್ಟಿನಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಪದೇ ಪದೇ ಚಂಡಮಾರುತಗಳು, ಮತ್ತು ಸಾಂಕ್ರಾಮಿಕ ರೋಗಗಳಂತಹ ಅನಾಹುತಗಳಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ರಾಜ್ಯದ ಎಲ್ಲರೂ ಸಿದ್ಧರಾಗಿರಬೇಕು. ಈ ಸವಾಲುಗಳು ಮುಂದಿನ ತಲೆಮಾರಿಗೆ ಪಾಠವಾಗುವ ಉದ್ದೇಶದಿಂದ ಈ ವಿಷಯಗಳನ್ನು ಪಠ್ಯ ಕ್ರಮಗಳಲ್ಲಿ ಅಳವಡಿಸಿಕೊಳ್ಳುವುದು ಉತ್ತಮ ಎಂದು ಮಂತ್ರಿ ಮಂಡಳದ ಸಭೆಯಲ್ಲಿ ಮಂತ್ರಿಗಳು ಅಭಿಪ್ರಾಯ ಪಟ್ಟಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ : ತೆಂಕಿಲ : ಮಹಿಳೆಯೋರ್ವರ ಕರಿಮಣಿ ಸರ ಎಳೆದು ಬೈಕ್ ನಲ್ಲಿ ಪರಾರಿಯಾದ ಅಪರಿಚಿತರು
ವಿಪತ್ತುಗಳು ಹಾಗೂ ವಿಪತ್ತಿನಿಂದ ಉಂಟಾದ ಹಾನಿಯಿಂದಾಗಿ ಒಡಿಶಾ ಕರುಣೆಯ ವಿಷಯವಾಗಿತ್ತು. ಆದರೆ ಇಂದು, ವಿಪತ್ತು ನಿರ್ವಹಣೆಯ ಒಡಿಶಾ ಮಾದರಿಯು ಜಾಗತಿಕ ಮೆಚ್ಚುಗೆಯನ್ನು ಸೆಳೆಯುತ್ತದೆ ಎಂದು ಮಂತ್ರಿ ಮಂಡದ ನಿರ್ಣಯವು ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಪ್ರತಿಯೊಬ್ಬರನ್ನು ಯೋಧರನ್ನಾಗಿ ಮಾಡುವಂತಹ ಬೃಹತ್ ಜ್ಞಾನ ಮೂಲ ಸೌಕರ್ಯವನ್ನು ನಾವು ರಚಿಸುವ ಸಮಯ ಬಂದಿದೆ. ಇಂದು ನಾವು ಭವಿಷ್ಯದ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇವೆ. ಈಗಾಗಲೇ ತಿಳಿದಿರುವ ತುರ್ತು ಪರಿಸ್ಥಿತಿಗಳನ್ನು ಹೇಗೆ ಎದುರಿಸಬೇಕು ಮತ್ತು ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ನಾವು ನಮ್ಮ ಜನರಿಗೆ ದೊಡ್ಡ ಪ್ರಮಾಣದಲ್ಲಿ ತರಬೇತಿ ನೀಡುತ್ತೇವೆ. ಶಾಲಾ ಕಾಲೇಜು ಮಟ್ಟದಲ್ಲಿಯೇ ಇಂತಹ ಪರಿಸ್ಥಿತಿಗಳನ್ನು ಎದುರಿಸುವ ಪಾಠ ದೊರಕಬೇಕೆನ್ನುವುದರ ಉದ್ದೇಶ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ನದಿಗೆ ಶವ ಎಸೆದ ಪಿಪಿಇ ಕಿಟ್ ಧರಿಸಿದ ವ್ಯಕ್ತಿ
ಪ್ರೌಢ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಪಠ್ಯಕ್ರಮದ ಭಾಗವಾಗಿ ವಿಪತ್ತು ಮತ್ತು ಸಾಂಕ್ರಾಮಿಕ ನಿರ್ವಹಣೆ ಬಗ್ಗೆ ಇರಲಿದೆ.
ಇನ್ನು, ರಾಜ್ಯ ಸರ್ಕಾರದ ತನ್ನ ಉದ್ಯೋಗಿಗೂ ವಿವಿಧ ರೀತಿಯ ವಿಪತ್ತು ಮತ್ತು ಸಾಂಕ್ರಾಮಿಕ ನಿರ್ವಹಣೆಯ ಮೂಲಭೂತ ಸ್ವರೂಪದ ಬಗ್ಗೆ ತರಬೇತಿ ನೀಡಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸರ್ಕಾರವು ಮಿಷನ್ ಶಕ್ತಿ ಗುಂಪುಗಳು, ವನ ಸುರಕ್ಯ ಸಮಿತಿಗಳು ಮತ್ತು ಇತರ ಸಮುದಾಯ ಆಧಾರಿತ ಸಂಸ್ಥೆಗಳ ಸದಸ್ಯರಿಗೆ ತರಬೇತಿ ನೀಡಲಿದೆ ಮತ್ತು ವಿಪತ್ತುಗಳು ಮತ್ತು ಸಾಂಕ್ರಾಮಿಕ ರೋಗಗಳನ್ನು ನಿರ್ವಹಿಸಲು ಅಗತ್ಯವಾದ ಜ್ಞಾನವನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಮಾತ್ರವಲ್ಲದೇ, ಒಡಿಶಾವನ್ನು ವಿಪತ್ತು ಸಂದರ್ಭದಲ್ಲಿ ಸನ್ನದ್ಧತೆಯಲ್ಲಿರುವ ಪ್ರಮುಖ ರಾಜ್ಯವನ್ನಾಗಿ ಮಾಡಲು ಮಂತ್ರಿ ಮಂಡಳ ನಿರ್ಧರಿಸಿದೆ.
“ಒಡಿಶಾದ ಪ್ರತಿಯೊಂದು ಮನೆ ಮನೆಗಳಲ್ಲಿಯೂ ‘ಯೋಧ’ ತಯಾರಾಗಬೇಕೆನ್ನುವ ಉದ್ದೇಶವಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ : SBIನ ಯಾವುದೇ ಶಾಖೆಯಲ್ಲೂ ದಿನಕ್ಕೆ ಇಷ್ಟು ಹಣವನ್ನು ತೆಗೆಯಬಹುದು..!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.